ಕರ್ನಾಟಕ

karnataka

ETV Bharat / bharat

ಮಾರುಕಟ್ಟೆಯಿಂದ ಬರುವಾಗ ಬಾಂಬ್ ಸ್ಫೋಟ.. ತಂದೆ-ಮಗನಿಗೆ ಗಂಭೀರ ಗಾಯ - ಬಾಂಬ್ ಸ್ಪೋಟ

ಮಾರುಕಟ್ಟೆಯಿಂದ ಮರುಳುವ ವೇಳೆ ವ್ಯಕ್ತಿಯೋರ್ವ ನೀಡಿದ ಚೀಲದಿಂದ ಬಾಂಬ್ ಸ್ಫೋಟಗೊಂಡಿದೆ. ಘಟನೆಯಲ್ಲಿ ತಂದೆ ಹಾಗೂ 2 ವರ್ಷದ ಪುತ್ರನಿಗೆ ಗಂಭೀರವಾಗಿ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಹಾರದಲ್ಲಿ ಈ ಪ್ರಕರಣ ನಡೆದಿದೆ.

ಮಾರುಕಟ್ಟೆಯಿಂದ ಬರುವಾಗ ಬಾಂಬ್ ಸ್ಫೋಟ
ಮಾರುಕಟ್ಟೆಯಿಂದ ಬರುವಾಗ ಬಾಂಬ್ ಸ್ಫೋಟ

By

Published : Jun 20, 2021, 6:14 PM IST

ಸಿವಾನ್ (ಬಿಹಾರ):ಬಾಂಬ್​​​ ಸ್ಫೋಟಗೊಂಡ ಪರಿಣಾಮ ತಂದೆ ಹಾಗೂ 2 ವರ್ಷದ ಮಗು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಿವಾನ್​ ಜಿಲ್ಲೆಯ ಹುಸೇಗಂಜ್ ಪ್ರಾಂತ್ಯದಲ್ಲಿ ನಡೆದಿದೆ. ಸ್ಫೋಟದ ಶಬ್ದ ಸುಮಾರು 500 ಮೀಟರ್​ ವರೆಗೂ ಕೇಳಿಸಿದ್ದು, ಅದರ ತೀವ್ರತೆಗೆ ಸುತ್ತಲಿನ ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಬಾಂಬ್ ಸ್ಫೋಟದಿಂದ ಗಾಯಗೊಂಡ ತಂದೆ-ಮಗನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ತಂದೆಯನ್ನು ಪಾಟ್ನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗನಿಗೆ ಸ್ಥಳೀಯ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಮುಂದಿವರಿಸಲಾಗಿದೆ. ಗಾಯಾಳು ತಂದೆಯನ್ನು ವಿನೋದ್ ಮಂಜ್ಹಿ ಹಾಗೂ ಪುತ್ರನನ್ನು ಸತ್ಯಂ ಎಂದು ಗುರುತಿಸಲಾಗಿದೆ.

ಮಾರುಕಟ್ಟೆಯಿಂದ ಬರುವಾಗ ಬಾಂಬ್ ಸ್ಫೋಟ

ತಂದೆ-ಮಗ ಇಬ್ಬರೂ ಮಾರುಕಟ್ಟೆಗೆ ತೆರಳಿ ವಾಪಸಾಗುತ್ತಿದ್ದ ವೇಳೆ ವ್ಯಕ್ತಿಯೋರ್ವ ನೀಡಿದ ಬ್ಯಾಗ್​​ನಿಂದ ಸ್ಫೋಟ ಸಂಭವಿಸಿದೆ ಎನ್ನಲಾಗ್ತಿದೆ. ಚೀಲದಲ್ಲಿ ಏನಿದೆ ಎಂದು ನೋಡುವಾಗಲೇ ಕೈಯಲ್ಲೇ ಬಾಂಬ್​ ಸ್ಫೋಟಗೊಂಡಿದೆ. ಘಟನೆ ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬಾಂಬ್ ಸ್ಫೋಟಗೊಂಡ ಸ್ಥಳದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

ABOUT THE AUTHOR

...view details