ವೆಲ್ಲೂರು, ತಮಿಳುನಾಡು :ಎಲೆಕ್ಟ್ರಿಕ್ ವಾಹನಗಳೂ ಬಹಳ ಅಪಾಯಕಾರಿ ಎಂದು ಆಗಾಗ ಗೊತ್ತಾಗುತ್ತಿದೆ. ಚಾರ್ಜ್ಗೆ ಹಾಕಿದ್ದ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು, ಅದರಿಂದ ಉಂಟಾದ ವಿಷಕಾರಿ ಹೊಗೆಯ ಕಾರಣದಿಂದಾಗಿ ತಂದೆ ಮತ್ತು ಮಗಳು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ವೆಲ್ಲೂರಿನಲ್ಲಿ ನಡೆದಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ತನಿಖೆ ಮುಂದುವರೆಯುತ್ತಿದೆ.
ಚಾರ್ಜ್ ಹಾಕಿದ್ದ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಬೆಂಕಿ, ಮಲಗಿದ್ದ ತಂದೆ-ಮಗಳು ಉಸಿರುಗಟ್ಟಿ ಸಾವು! - ತಮಿಳುನಾಡಿನ ವೆಲ್ಲೂರಿನಲ್ಲಿ ತಂದೆ ಮಗಳು ಸಾವು
ತಮಿಳುನಾಡಿನ ವೆಲ್ಲೂರಿನಲ್ಲಿ ಚಾರ್ಜಿಂಗ್ ಹಾಕಿದ್ದ ಸ್ಕೂಟರ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು, ವಿಷಕಾರಿ ಹೊಗೆಯಿಂದಾಗಿ ಉಸಿರುಗಟ್ಟಿ ತಂದೆ ಮತ್ತು ಮಗಳು ಸಾವನ್ನಪ್ಪಿದ್ದಾರೆ..
![ಚಾರ್ಜ್ ಹಾಕಿದ್ದ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಬೆಂಕಿ, ಮಲಗಿದ್ದ ತಂದೆ-ಮಗಳು ಉಸಿರುಗಟ್ಟಿ ಸಾವು! Father and daughter killed in E Scooter fire accident](https://etvbharatimages.akamaized.net/etvbharat/prod-images/768-512-14840769-thumbnail-3x2-raaaa.jpg)
ವೆಲ್ಲೂರಿನ ಚಿನ್ನಅಲ್ಲಲಾಪುರಂ ನಿವಾಸಿ ದುರೈವರ್ಮ (49) ಮತ್ತು ಅವರ ಪುತ್ರಿ ಮೋಹನ ಪ್ರೀತಿ (13) ಎಂಬುವರು ಸಾವನ್ನಪ್ಪಿದವರಾಗಿದ್ದಾರೆ. ಇತ್ತೀಚೆಗಷ್ಟೇ ದುರೈವರ್ಮ ಅವರು ಇ-ಸ್ಕೂಟರ್ ಅನ್ನು ಖರೀದಿಸಿದ್ದು, ರಾತ್ರಿ ಸ್ಕೂಟರ್ಗೆ ಚಾರ್ಜಿಂಗ್ ಹಾಕಿ ಮಲಗಿದ್ದರು. ಮಧ್ಯರಾತ್ರಿ ಸ್ಕೂಟರ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು, ವಿಷಕಾರಿ ಹೊಗೆ ಅವರ ಮನೆಯ ತುಂಬೆಲ್ಲಾ ವ್ಯಾಪಿಸಿದೆ. ಈ ವೇಳೆ ಮನೆಯೊಳಗಿದ್ದ ತಂದೆ ಮತ್ತು ಮಗಳು ಇಬ್ಬರೂ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಬೆಂಕಿಯಿಂದ ಮನೆಗೂ ಹಾನಿಯಾಗಿದ್ದು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಮದುವೆಯಲ್ಲಿ ನೃತ್ಯ ಮಾಡುತ್ತಿದ್ದ ಮಹಿಳೆಯರ ಮೇಲೆ ಹರಿದ ಟ್ರಕ್.. ಮೂವರ ಸಾವು - ಐವರಿಗೆ ಗಾಯ!