ಕರ್ನಾಟಕ

karnataka

ETV Bharat / bharat

ಶಾರ್ಟ್​ ಸರ್ಕ್ಯೂಟ್​ನಿಂದ ಹೀಟರ್​ಗೆ ಬೆಂಕಿ: ತಂದೆ - ಮಗಳು ಸ್ಥಳದಲ್ಲೇ ಸಾವು, ತಾಯಿಗೆ ಗಂಭೀರ ಗಾಯ - ಮರಣೋತ್ತರ ಪರೀಕ್ಷೆ

Father and Daughter Burnt Alive: ಗಂಭೀರವಾಗಿ ಗಾಯಗೊಂಡಿರುವ ತಾಯಿಯನ್ನು ಅಳ್ವಾರ್​​ ಆಸ್ಪತ್ರೆಗೆ ದಾಖಲಿಸಲಾಗಿದೆ.

Father and Daughter Burnt Alive
ಶಾರ್ಟ್​ ಸರ್ಕ್ಯೂಟ್​ನಿಂದ ಹೀಟರ್​ಗೆ ಬೆಂಕಿ: ತಂದೆ- ಮಗಳು ಸ್ಥಳದಲ್ಲೇ ಸಾವು, ತಾಯಿಗೆ ಗಂಭೀರ ಗಾಯ

By ETV Bharat Karnataka Team

Published : Dec 23, 2023, 6:35 PM IST

ಅಳ್ವಾರ್​ (ಮಹಾರಾಷ್ಟ್ರ): ಮನೆಯ ಕೊಠಡಿಯೊಂದರಲ್ಲಿ ಶಾರ್ಟ್​ ಸರ್ಕ್ಯೂಟ್​ನಿಂದ ಹೀಟರ್​ನಲ್ಲಿ ಉಂಟಾದ ಬೆಂಕಿಯಿಂದಾಗಿ ತಂದೆ ಹಾಗೂ ಮಗಳು ಸಾವನ್ನಪ್ಪಿದ್ದು, ತಾಯಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಿಜಾರಾದ ಮುಂಡಾನ ಗ್ರಮದಲ್ಲಿ ಶುಕ್ರವಾರ ಜರುಗಿದೆ. 23 ವರ್ಷದ ದೀಪಕ್​ ಯಾದವ್​ ಹಾಗೂ 2 ತಿಂಗಳ ಮಗು ಸಾವನ್ನಪ್ಪಿದವರು. ತಾಯಿಗೆ ಗಂಭೀರ ಸುಟ್ಟ ಗಾಯಗಳಾಗಿವೆ. ಶೇ 60ರಷ್ಟು ಸುಟ್ಟ ಸ್ಥಿತಿಯಲ್ಲಿದ್ದ ಮಹಿಳೆಯನ್ನು ತಿಜಾರಾದಿಂದ ಅಲ್ವಾರ್​ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಶೇಖ್​ಪುರ ಪೊಲೀಸ್​ ಠಾಣೆಯ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಶಾರ್ಟ್​ ಸರ್ಕ್ಯೂಟ್​ನಿಂದ ಹೀಟರ್​ಗೆ ಬೆಂಕಿ: ಶೇಖ್​ಪುರ ಪೊಲೀಸ್​ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ರಾತ್ರಿ 2 ಗಂಟೆ ಸುಮಾರಿಗೆ ಶಾರ್ಟ್​ ಸರ್ಕ್ಯೂಟ್​ನಿಂದ ಹೀಟರ್​ಗೆ ಬೆಂಕಿ ಹೊತ್ತಿಕೊಂಡಿದೆ. ಈ ಸಮಯದಲ್ಲಿ ದಂಪತಿ ತಮ್ಮ ಎರಡು ತಿಂಗಳ ಮಗಳೊಂದಿಗೆ ಕೋಣೆಯಲ್ಲಿ ಮಲಗಿದ್ದರು. ತಂದೆ ದೀಪಕ್​ ಯಾದವ್​ ಹಾಗೂ 2 ತಿಂಗಳ ಮಗಳು ಬೆಂಕಿಗೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಗುವಿನ ತಾಯಿ ಸಂಜು ಅವರಿಗೆ ಗಂಭೀರ ಸುಟ್ಟ ಗಾಯಗಳಾಗಿವೆ. ಮೃತ ಯುವಕ ವೃತ್ತಿಯಲ್ಲಿ ಚಾಲಕನಾಗಿದ್ದು, ಆಯಿಲ್​ ಟ್ಯಾಂಕರ್​ ಓಡಿಸುತ್ತಿದ್ದ.

ಅಪಘಾತದ ಬಗ್ಗೆ ಮಾಹಿತಿ ಪಡೆದ ಶೇಖ್​ಪುರ ಪೊಲೀಸರು ಸ್ಥಳಕ್ಕೆ ತೆರಳಿದ್ದು, ಗಾಯಾಳು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಾಥಮಿಕ ತನಿಖೆ ಬಳಿಕ ಬೆಂಕಿ ಹೊತ್ತಿಕೊಂಡ ಕಾರಣ ತಿಳಿಸಿದ್ದಾರೆ. ವೈದ್ಯರು ಮೃತ ತಂದೆ ಹಾಗೂ ಮಗಳ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಗಾಯಗೊಂಡಿರುವ ಮಹಿಳೆಗೆ ಉತ್ತಮ ಚಿಕಿತ್ಸೆ ನೀಡಲು ವೈದ್ಯಕೀಯ ಇಲಾಖೆ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಮೃತ ಯುವಕನ ತಾಯಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಪೊಲೀಸ್ ಕಾನ್​ಸ್ಟೆಬಲ್​ಗೆ ಬೆಂಕಿ ಹಚ್ಚಿ ಹತ್ಯೆ ಪ್ರಕರಣ; ಆರೋಪಿ ಮಹಿಳೆಯ ವಿಚಾರಣೆ

ABOUT THE AUTHOR

...view details