ವಲ್ಸಾದ್(ಗುಜರಾತ್) : ಗುಜರಾತ್‌ನಲ್ಲಿ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾರೆ ಎನ್ನುವ ಆರೋಪದ ಮೇಲೆ ಎರಡು ವರ್ಷಗಳಿಂದ ಜೈಲಿನಲ್ಲಿದ್ದ ತಂದೆಯನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ವಾಪಿ ನ್ಯಾಯಾಲಯ ಅವರು ಮುಗ್ದ ಎಂದು ಹೇಳಿ ಬಿಡುಗಡೆ ಮಾಡಿದೆ. ಬಿಡುಗಡೆಯಾದ ನಂತರ ಇವರು ಇಡೀ ವ್ಯವಸ್ಥೆಯನ್ನೇ ಪ್ರಶ್ನಿಸಿದ್ದಾರೆ.
ಮಗಳಿಂದ ಗಂಭೀರ ಆರೋಪ : ಉತ್ತರ ಪ್ರದೇಶ ಮೂಲದ ಬಲರಾಮ್ ವಿಶ್ವಂಭರ್ ಝೈ ಅವರು ಬನಾರಸ್ ಮತ್ತು ವಾರಣಾಸಿಯಲ್ಲಿ ಅಧ್ಯಯನ ಮಾಡಿದ್ದರಂತೆ ನಂತರ 2003 ರಲ್ಲಿ ವಲ್ಸಾದ್ ಜಿಲ್ಲೆಯ ಪಾರ್ಡಿಯಲ್ಲಿ ಹಿಂದಿ-ಸಂಸ್ಕೃತ ಶಿಕ್ಷಕರಾಗಿ ಕೆಲಸ ಮಾಡಿದ್ದಾರೆ. ಇದರ ನಡುವೆ ಇವರ ಜೀವನದಲ್ಲಿ ಆಗಬಾರದ ಘಟನೆಯೊಂದು 8 ಜುಲೈ 2020 ರಂದು ಜರುಗಿದೆ.
ಅವರ ಮಗಳು 1098 ಕ್ಕೆ ಡಯಲ್ ಮಾಡಿದ್ದಾಳೆ. 1098 ಸಹಾಯವಾಣಿ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಲ್ಸಾದ್ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ತಕ್ಷಣ ಸ್ಪಂದಿಸಿ ಇವರ ನಿವಾಸಕ್ಕೆ ಬಂದಿದ್ದಾರೆ. ನಂತರ ಏನು ಎತ್ತ ಎಂಬುದನ್ನು ಯೋಚನೆ ಮಾಡದೇ ಪರಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಇದಾದ ನಂತರ ಮಗಳನ್ನು ಧರಸನಾ ಮಹಿಳಾ ಮಕ್ಕಳ ಸಂಸ್ಥೆಗೆ ಕಳುಹಿಸಿದ್ದಾರೆ.