ಕರ್ನಾಟಕ

karnataka

ETV Bharat / bharat

ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ ಕಿರಾತಕ: ತಾಯಿ ಸೇರಿ ಇಬ್ಬರು ಸಾವು, ಮೂವರ ಸ್ಥಿತಿ ಗಂಭೀರ - ಗಾಜಿಯಾಬಾದ್​ನಲ್ಲಿ ಹಲ್ಲೆ

ಗಾಜಿಯಾಬಾದ್‌ನ ಮುಸ್ಸೂರಿ ಪೊಲೀಸ್ ಠಾಣೆ ಪ್ರದೇಶದ ಶತಾಬ್ದಿ ಪುರಂನಲ್ಲಿ ವ್ಯಕ್ತಿವೋರ್ವ ಐವರ ಮೇಲೆ ತೀವ್ರವಾಗಿ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾನೆ. ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಮೂವರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.

Fatal attack  on Five in Ghaziabad
ಗಾಜಿಯಾಬಾದ್​ನಲ್ಲಿ ಐವರ ಮೇಲೆ ಹಲ್ಲೆ

By

Published : Feb 7, 2021, 8:44 AM IST

ನವದೆಹಲಿ: ಮೂವರು ಮಕ್ಕಳು ಮತ್ತು ಅವರ ತಾಯಿ ಹಾಗೂ ಓರ್ವ ಯುವತಿ ಸೇರಿದಂತೆ ಐದು ಜನರ ಮೇಲೆ ಹಲ್ಲೆ ಮಾಡಿರುವ ಘಟನೆ ಗಾಜಿಯಾಬಾದ್‌ನ ಮುಸ್ಸೂರಿ ಪೊಲೀಸ್ ಠಾಣೆ ಪ್ರದೇಶದ ಶತಾಬ್ದಿ ಪುರಂನಲ್ಲಿ ನಡೆದಿದೆ.

ಘಟನೆಯಲ್ಲಿ ಮೂವರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಕ್ಕಳ ತಾಯಿ ಮತ್ತು ಓರ್ವ ಯುವತಿ ಮೃತಪಟ್ಟಿದ್ದಾರೆ. ಘಟನೆಗೆ ಕಾರಣ ಸ್ಪಷ್ಟವಾಗಿಲ್ಲ.

ಇದನ್ನೂ ಓದಿ:ಶಾಕಿಂಗ್​: 60 ಲಕ್ಷ ರೂ. ಇನ್ಸುರೆನ್ಸ್​ ಹಣಕ್ಕಾಗಿ ಪತ್ನಿಯನ್ನೇ ಕೊಲ್ಲಿಸಿದ ಪಾಪಿ ಪತಿ!

ಅನ್ಶು ಎಂಬ ಯುವತಿ ಸಂಜೆ ವೇಳೆ ಮಕ್ಕಳಿಗೆ ಪಾಠ ಹೇಳಲು ಪಕ್ಕದ ಮನೆಗೆ ತೆರಳಿದ್ದರು. ಮೂವರು ಮಕ್ಕಳು ಮತ್ತು ತಾಯಿ ಡಾಲಿ ಮನೆಯಲ್ಲಿದ್ದರು. ಇದೇ ವೇಳೆ ಮನೆಗೆ ಬಂದ ವ್ಯಕ್ತಿವೋರ್ವ ಐವರ ಮೇಲೂ ತೀವ್ರವಾಗಿ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾನೆ. ದಾಳಿಯಲ್ಲಿ ಯುವತಿ ಅನ್ಶು ಮತ್ತು ತಾಯಿ ಡಾಲಿ ಸಾವನ್ನಪ್ಪಿದ್ದಾರೆ. ಮೂವರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಹಿಳೆಯ ಪತಿ ಗಾಜಿಯಾಬಾದ್‌ನಲ್ಲಿ ಫಾಸ್ಟ್ ಫುಡ್ ಅಂಗಡಿ ಹೊಂದಿದ್ದಾರೆ. ಘಟನೆ ನಡೆದ ವೇಳೆ ಗಂಡ, ಅತ್ತೆ ಮತ್ತು ಸೋದರ ಮಾವ ಅಂಗಡಿಯಲ್ಲಿದ್ದರು. ಅವರು ಮನೆಗೆ ತಲುಪಿದಾಗ, ಅವರಿಗೆ ಘಟನೆ ನಡೆದಿರುವುದು ತಿಳಿದುಬಂದಿದೆ.

ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಸುಮಾರು 6 ವರ್ಷಗಳಿಂದ ಮನೆಗೆ ಭೇಟಿ ನೀಡುತ್ತಿದ್ದ ಬಡಗಿಯ ಮೇಲೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details