ಆದಿಲಾಬಾದ್(ತೆಲಂಗಾಣ):ಎರಡು ಬೈಕ್ಗಳ ಮಧ್ಯೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮಕ್ಕಳು ಸೇರಿ ನಾಲ್ವರು ದುರ್ಮರಣಕ್ಕೀಡಾದ ದುರ್ಘಟನೆ ತೆಲಂಗಾಣದ ಆದಿಲಾಬಾದ್ ಜಿಲ್ಲೆಯಲ್ಲಿ ಭಾನುವಾರ ಸಂಜೆ ನಡೆದಿದೆ. ಘಟನೆಯಲ್ಲಿ ಓರ್ವ ಮಹಿಳೆ ಗಾಯಗೊಂಡು ಬದುಕುಳಿದಿದ್ದಾರೆ. ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮೃತರೆಲ್ಲರೂ ಮಹಾರಾಷ್ಟ್ರದವರು ಎಂದು ಗುರುತಿಸಲಾಗಿದೆ.
ಆದಿಲಾಬಾದ್ ಜಿಲ್ಲೆಯ ತಾನ್ಸಿ ಮಂಡಲದ ಹಸ್ನಾಪುರದ ಬಳಿ ಭಾನುವಾರ ಸಂಜೆ ಈ ಭೀಕರ ಅಪಘಾತ ಸಂಭವಿಸಿದೆ. ಮಹಾರಾಷ್ಟ್ರದ ಕಿನ್ವರ್ಟ್ ತಾಲೂಕಿನ ಅಂದುಬೋರಿ ಗ್ರಾಮಕ್ಕೆ ಮಕ್ಕಳ ಸಮೇತ ದಂಪತಿ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದರು. ಮಹಾರಾಷ್ಟ್ರದ ಕಡೆಯಿಂದ ಆದಿಲಾಬಾದ್ಗೆ ವ್ಯಕ್ತಿಯೊಬ್ಬ ಇನ್ನೊಂದು ಬೈಕ್ನಲ್ಲಿ ಬಂದಿದ್ದಾನೆ. ಈ ವೇಳೆ ಎರಡೂ ಬೈಕ್ಗಳ ರಭಸವಾಗಿ ಮುಖಾಮುಖಿ ಡಿಕ್ಕಿಯಾಗಿವೆ. ದುರ್ಘಟನೆಯಲ್ಲಿ ಇಬ್ಬರು ಮಕ್ಕಳು, ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ದಂಪತಿ ಗಾಯಗೊಂಡಿದ್ದರು.