ಕರ್ನಾಟಕ

karnataka

ETV Bharat / bharat

ನ್ಯಾಷನಲ್ ಕಾನ್ಫರೆನ್ಸ್​ ಅಧ್ಯಕ್ಷ ಸ್ಥಾನಕ್ಕೆ ಫಾರೂಕ್ ಅಬ್ದುಲ್ಲಾ ರಾಜೀನಾಮೆ - ಫಾರೂಕ್ ಪುತ್ರ ಒಮರ್ ಅಬ್ದುಲ್ಲಾ ಪಕ್ಷದ ನೂತನ ಅಧ್ಯಕ್ಷ

ಫಾರೂಕ್ ಪುತ್ರ ಒಮರ್ ಅಬ್ದುಲ್ಲಾ ಪಕ್ಷದ ನೂತನ ಅಧ್ಯಕ್ಷರಾಗಲಿದ್ದಾರೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಮೂಲಗಳು ತಿಳಿಸಿವೆ. ಆದಾಗ್ಯೂ ಡಿಸೆಂಬರ್ 5 ರಂದು ಚುನಾವಣೆ ನಡೆಯಲಿದೆ. ಒಮರ್ ಅಬ್ದುಲ್ಲಾ ಪ್ರಸ್ತುತ ಪಕ್ಷದ ಉಪಾಧ್ಯಕ್ಷರಾಗಿದ್ದಾರೆ.

ನ್ಯಾಷನಲ್ ಕಾನ್ಫರೆನ್ಸ್​ ಅಧ್ಯಕ್ಷ ಸ್ಥಾನಕ್ಕೆ ಫಾರೂಕ್ ಅಬ್ದುಲ್ಲಾ ರಾಜೀನಾಮೆ
Farooq Abdullah resigned from the post of National Conference President

By

Published : Nov 18, 2022, 10:34 AM IST

ಶ್ರೀನಗರ: ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಸ್ಥಾನಕ್ಕೆ ಫಾರೂಕ್ ಅಬ್ದುಲ್ಲಾ ರಾಜೀನಾಮೆ ನೀಡಿದ್ದಾರೆ. ಡಿಸೆಂಬರ್ 5 ರಂದು ನೂತನ ಅಧ್ಯಕ್ಷರ ಆಯ್ಕೆ ನಡೆಯಲಿದೆ.

ಫಾರೂಕ್ ಅಬ್ದುಲ್ಲಾ ದಶಕಗಳಿಂದ ನ್ಯಾಷನಲ್ ಕಾನ್ಫರೆನ್ಸ್‌ನ ಅಧ್ಯಕ್ಷರಾಗಿದ್ದಾರೆ. ಪಕ್ಷದ ಪ್ರಧಾನ ಕಛೇರಿ ನವಾಯಿ ಸುಬ್‌ನಲ್ಲಿ ಮುಖಂಡರೊಂದಿಗೆ ಸಭೆ ನಡೆಸಿದ ನಂತರ ಅವರು ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಫಾರೂಕ್ ತಮ್ಮ ವಯಸ್ಸು ಮತ್ತು ಆರೋಗ್ಯವನ್ನು ಪರಿಗಣಿಸಿ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

ಫಾರೂಕ್ ಪುತ್ರ ಒಮರ್ ಅಬ್ದುಲ್ಲಾ ಪಕ್ಷದ ನೂತನ ಅಧ್ಯಕ್ಷರಾಗಲಿದ್ದಾರೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಮೂಲಗಳು ತಿಳಿಸಿವೆ. ಆದಾಗ್ಯೂ ಡಿಸೆಂಬರ್ 5 ರಂದು ಚುನಾವಣೆ ನಡೆಯಲಿದೆ. ಒಮರ್ ಅಬ್ದುಲ್ಲಾ ಪ್ರಸ್ತುತ ಪಕ್ಷದ ಉಪಾಧ್ಯಕ್ಷರಾಗಿದ್ದಾರೆ.

ಈ ಬಗ್ಗೆ ಮಾತನಾಡಿದ ನ್ಯಾಶನಲ್ ಕಾನ್ಫರೆನ್ಸ್ ವಕ್ತಾರ ಅಲಿ ತನ್ವೀರ್ ಸಾದಿಕ್, 'ನೂತನ ಅಧ್ಯಕ್ಷರ ಆಯ್ಕೆಗೆ ಶೀಘ್ರವೇ ಅಧಿಸೂಚನೆ ಹೊರಡಿಸಲಿದ್ದು, ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಪಕ್ಷದ ಸಂಸ್ಥಾಪಕ ದಿವಂಗತ ಶೇಖ್ ಅಬ್ದುಲ್ಲಾ ಅವರ ಹಜರತ್ ಬಿಲ್ ಅವರ ಸ್ಮಶಾನದಲ್ಲಿ ಡಿಸೆಂಬರ್ 5 ರಂದು ಚುನಾವಣೆ ನಡೆಯಲಿದೆ' ಎಂದು ಹೇಳಿದರು.

ಇದನ್ನೂ ಓದಿ: 30 ವರ್ಷಗಳ ನಂತರ ಕಣಿವೆ ನಾಡು ಕಾಶ್ಮೀರಕ್ಕೆ ಮರಳಿದ ಸಿನಿಮಾ!

ABOUT THE AUTHOR

...view details