ಕರ್ನಾಟಕ

karnataka

ETV Bharat / bharat

ಭಾರತ - ಪಾಕ್​ ಒಪ್ಪಂದ ಜಮ್ಮು- ಕಾಶ್ಮೀರ ಜನತೆಗೆ ಸ್ಪಲ್ಪ ಶಾಂತಿ ತಂದಿದೆ: ಫಾರೂಕ್ ಅಬ್ದುಲ್ಲಾ - ಭಾರತ ಮತ್ತು ಪಾಕಿಸ್ತಾನ ಶಾಂತಿ ಒಪ್ಪಂದ

ಶ್ರೀನಗರದ ಸಂಸದ ರಾಷ್ಟ್ರೀಯ ಕಾನ್ಫರೆನ್ಸ್​ ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಮಾತನಾಡಿ, ಭಾರತ ಮತ್ತು ಪಾಕಿಸ್ತಾನದ ನಡುವಿನ ಇತ್ತೀಚಿನ ಕದನ ವಿರಾಮ ಸಂಬಂಧದ ಕುರಿತ ಒಪ್ಪಂದದ ಯಶಸ್ಸಿಗೆ ಜಮ್ಮು ಮತ್ತು ಕಾಶ್ಮೀರದ ಜನರು ಪ್ರಾರ್ಥಿಸುತ್ತಿದ್ದಾರೆ, ಏಕೆಂದರೆ ಇದು ಅವರಿಗೆ ಸ್ವಲ್ಪ ಸಮಾಧಾನವನ್ನು ನೀಡುತ್ತದೆ. ಸಂವಿಧಾನದ 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಇದು ಕೇವಲ ಕಾಶ್ಮೀರ ಕೇಂದ್ರಿತ ವಿಷಯವಲ್ಲ ಮತ್ತು ಜಮ್ಮು ಮತ್ತು ಲಡಾಖ್ ಪ್ರದೇಶಗಳಿಗೆ ಹೆಚ್ಚು ಮುಖ್ಯವಾಗಿದೆ ಎಂದು ಹೇಳಿದರು.

BJP of falsehood
ಫಾರೂಕ್ ಅಬ್ದುಲ್ಲಾ

By

Published : Mar 8, 2021, 7:48 AM IST

ಜಮ್ಮು:ರಾಷ್ಟ್ರೀಯ ಕಾನ್ಫರೆನ್ಸ್​ ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ, ಕದನ ವಿರಾಮಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಪಾಕಿಸ್ತಾನದ ನಡುವೆ ಇತ್ತೀಚೆಗೆ ಮಾಡಿಕೊಂಡಿರುವ ಒಪ್ಪಂದವು ಜಮ್ಮು ಮತ್ತು ಕಾಶ್ಮೀರದ ಜನತೆಗೆ ಸ್ವಲ್ಪ ಸಮಾಧಾನವನ್ನು ನೀಡುತ್ತದೆ, ಶಾಂತಿ ಈ ಪ್ರದೇಶದ ಹೆಚ್ಚಿನ ಆದ್ಯತೆ ಎಂದು ಅವರು ಹೇಳಿದರು.

ಫಾರೂಕ್ ಅಬ್ದುಲ್ಲಾ

ಭಾನುವಾರ ಉಧಂಪುರದಲ್ಲಿ ಎನ್‌ಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅಬ್ದುಲ್ಲಾ, ಗಡಿಗಳಲ್ಲಿನ ಹಗೆತನವು ಇಲ್ಲಿನ ನಿವಾಸಿಗಳಿಗೆ ಯಾತನೆ ಮತ್ತು ದುಃಖಗಳನ್ನು ಮಾತ್ರ ತರುತ್ತದೆ, ಕೃಷಿ ಮತ್ತು ಆರ್ಥಿಕ ಚಟುವಟಿಕೆಗಳನ್ನು ನಿಲ್ಲಿಸುತ್ತದೆ ಮತ್ತು ಸಮಾಜದ ಎಲ್ಲಾ ವರ್ಗಗಳ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ರು.

ಗಡಿಗಳಲ್ಲಿ ಪರಸ್ಪರ ಶಾಂತಿಯನ್ನು ಸಾಧಿಸುವ ದೃಷ್ಟಿಯಿಂದ ಫೆಬ್ರವರಿ 25 ರಂದು ಭಾರತ ಮತ್ತು ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರ ಮತ್ತು ಇತರ ವಲಯಗಳಲ್ಲಿನ ಎಲ್‌ಒಸಿ ಯಲ್ಲಿ ಕದನ ವಿರಾಮಕ್ಕೆ ಸಂಬಂಧಿಸಿದ ಎಲ್ಲ ಒಪ್ಪಂದಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಒಪ್ಪಿಕೊಂಡಿರುವುದಾಗಿ ಘೋಷಿಸಿವೆ. ಹೀಗಾಗಿ ಜಮ್ಮು ಮತ್ತು ಕಾಶ್ಮೀರದ ಜನರು ಉಭಯ ದೇಶಗಳ ಈ ಕ್ರಮವು ಯಶಸ್ವಿಯಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಏಕೆಂದರೆ ಇದು ಅವರಿಗೆ ಸ್ವಲ್ಪ ಸಮಾಧಾನ ನೀಡುತ್ತದೆ ಎಂದು ಅಬ್ದುಲ್ಲಾ ಹೇಳಿದ್ರು. ಉಭಯ ದೇಶಗಳು ತಮ್ಮ ಬಜೆಟ್‌ನ ಸಾಕಷ್ಟು ಮೊತ್ತವನ್ನು ರಕ್ಷಣಾ ಕ್ಷೇತ್ರಕ್ಕೆ ಖರ್ಚು ಮಾಡುತ್ತಿದ್ದು, ಇದರಿಂದಾಗಿ ಅವರ ಬಡವರ ಕಲ್ಯಾಣಕ್ಕೆ ಧಕ್ಕೆಯುಂಟಾಗಿದೆ ಎಂದು ಅವರು ಹೇಳಿದರು.

ಇನ್ನು ತಮ್ಮ ಭಾಷಣದ ವೇಳೆ "ನೀವು ನಿಮ್ಮ ಸ್ನೇಹಿತರನ್ನು ಬದಲಾಯಿಸಬಹುದು. ಆದರೆ ನಿಮ್ಮ ನೆರೆಹೊರೆಯವರಲ್ಲ" ಎಂಬ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಮಾತುಗಳನ್ನು ಉಲ್ಲೇಖಿಸಿದ ಅಬ್ದುಲ್ಲಾ, ಎರಡೂ ದೇಶಗಳು ತಮ್ಮ ಸ್ನೇಹವನ್ನು ಬೆಳೆಸಿಕೊಳ್ಳಬಹುದು ಮತ್ತು ಸಮೃದ್ಧಿಯಾಗಬಹುದು, ಅಥವಾ ದ್ವೇಷವನ್ನು ಮುಂದುವರಿಸಬಹುದು ಆದರೆ, ನಂತರದಲ್ಲಿ ಯಾವುದೇ ಸಮೃದ್ಧಿ ಇರುವುದಿಲ್ಲ ಎಂದರು.

ಇದೇ ವೇಳೆ, ತಮ್ಮ ಪಕ್ಷದ ಕುರಿತು ಮಾತನಾಡಿದ ಅವರು, ರಾಷ್ಟ್ರೀಯ ಕಾನ್ಫರೆನ್ಸ್​​ ಜನರಿಂದ ಅಸ್ತಿತ್ವಕ್ಕೆ ಬಂದಿದೆ.ಹಾಗಾಗಿ ಈ ಪಕ್ಷ ಜಾತಿ, ಮತ, ಬಣ್ಣ ಮತ್ತು ಧರ್ಮವನ್ನು ಲೆಕ್ಕಿಸದೇ ಜನಸಾಮಾನ್ಯರಿಗೆ ಸೇವೆ ಸಲ್ಲಿಸಲಿದೆ ಎಂದು ಫಾರೂಕ್​ ಅಬ್ದುಲ್ಲಾ ಹೇಳಿದರು.

ಇದನ್ನೂ ಓದಿ:ಮಹಿಳಾ ಸುರಕ್ಷತೆಗೆ ಬಿಎಂಟಿಸಿಯಿಂದ ಬಾಕ್ಸ್​ಕಿಟ್​ ಯೋಜನೆ!

ABOUT THE AUTHOR

...view details