ಚಂಡೀಗಢ (ಹರಿಯಾಣ) :ಕೇಂದ್ರದ ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದಕ್ಕೆ ಬೆಂಬಲ ನೀಡುವ ಸಲುವಾಗಿ ಭಾರತೀಯ ಕಿಸಾನ್ ಯೂನಿಯನ್ ಮುಖ್ಯಸ್ಥ ರಾಕೇಶ್ ಟಿಕಾಯತ್ ಬುಧವಾರ ಹರಿಯಾಣದ ಜಿಂದ್ ಜಿಲ್ಲೆಯಲ್ಲಿ ನಡೆಯುತ್ತಿರುವ ರೈತರ ಮಹಾಪಂಚಾಯತ್‌ನಲ್ಲಿ ಪಾಲ್ಗೊಂಡಿದ್ದಾರೆ.
ಮಹಾಪಂಚಾಯತ್ ಸುಮಾರು 50ರೈತ ಮುಖಂಡರನ್ನು ಸಹ ಒಳಗೊಂಡಿದೆ. ಇದರಲ್ಲಿ ರೈತ ಚಳವಳಿಯ ಮುಂಬರುವ ಕಾರ್ಯತಂತ್ರವನ್ನು ರೂಪಿಸಲಾಗುವುದು. ಹರಿಯಾಣದಲ್ಲಿ ನಡೆಯುತ್ತಿರುವ ಮಹಾಪಂಚಾಯತ್ನ ವೇದಿಕೆ ಮುರಿದು ಬಿದ್ದಿದೆ.
ವೇದಿಕೆಯ ಮೇಲೆ ಹೆಚ್ಚಿನ ಜನರು ಹತ್ತಿದ್ದ ಕಾರಣ ಈ ಅವಘಡ ಸಂಭವಿಸಿದೆ. ಈ ಸಮಯದಲ್ಲಿ ರಾಕೇಶ್ ಟಿಕಾಯತ್ ಕೂಡ ಅಲ್ಲಿದ್ದು, ಅವರಿಗೆ ಯಾವುದೇ ತೊಂದರೆಯಾಗಿಲ್ಲ.
ಓದಿ: ರೈತರ ಮತ್ತೊಂದು ನಡೆ: ಒಗ್ಗಟ್ಟು ಪ್ರದರ್ಶಿಸಲು 'ಮಹಾ ಪಂಚಾಯತ್' ಶುರು
ಜಿಂದ್ ಮಹಾಪಂಚಾಯತ್‌ನಲ್ಲಿ 5 ಪ್ರಸ್ತಾಪಗಳನ್ನು ಅಂಗೀಕರಿಸಲಾಗಿದೆ. ಜನರು ಕೈ ಎತ್ತುವ ಮೂಲಕ ಎಲ್ಲಾ ಪ್ರಸ್ತಾಪಗಳಿಗೆ ಸಮ್ಮತಿ ನೀಡಿದ್ದಾರೆ.
*ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕು