ಕರ್ನಾಟಕ

karnataka

ETV Bharat / bharat

ಕೇಂದ್ರ ಸರ್ಕಾರದ ವಿರುದ್ಧ ಸರ್ದಾರ್‌ಗಳ ಸಮರ.. ಪಂಜಾಬ್‌ ಅಸ್ಮಿತೆಯೊಂದಿಗೆ ರೈತರ ಹೋರಾಟ ತೀವ್ರ!! - ಅಖಿಲ ಭಾರತ ಕಿಸಾನ್ ಸಭಾ

33 ರೈತರು ನವೆಂಬರ್ 26ರಿಂದ ಅಪಘಾತಗಳು, ಅನಾರೋಗ್ಯ ಮತ್ತು ಶೀತ ವಾತಾವರಣದಿಂದಾಗಿ ಸಾವನ್ನಪ್ಪಿದ್ದಾರೆ ಎಂದು ರೈತ ಸಂಸ್ಥೆ ಹೇಳಿಕೊಂಡಿದೆ. ಇಂದು ರೈತರು ಮತ್ತು ಎಲ್ಲಾ ವರ್ಗದ ಜನರು ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಂತಾಪ..

New Delhi
ಶ್ರದ್ಧಾಂಜಲಿ ದಿವಸ್

By

Published : Dec 20, 2020, 12:53 PM IST

ನವದೆಹಲಿ : ವಿವಿಧ ರಾಜ್ಯದ ಗಡಿಗಳಲ್ಲಿ ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಇಂದು ಶ್ರದ್ಧಾಂಜಲಿ ದಿವಸ್ ಆಗಿ ಆಚರಿಸುತ್ತಿದ್ದಾರೆ.

ನವೆಂಬರ್ 26 ರಂದು ನೂತನ ಕೃಷಿ ಕಾನೂನುಗಳ ವಿರುದ್ಧ ದೆಹಲಿ ಚಲೋ ಆಂದೋಲನ ನಡೆಸುವ ವೇಳೆ ಸಾವನ್ನಪ್ಪಿದ ರೈತರ ಸ್ಮರಣಾರ್ಥವಾಗಿ ಡಿಸೆಂಬರ್ 20, ಈ ದಿನವನ್ನ ಶ್ರದ್ಧಾಂಜಲಿ ದಿವಸ್ ಎಂದು ಆಚರಿಸಲು ಸಂಯುಕ್ತ ಕಿಸಾನ್ ಮೋರ್ಚಾದ ಅಂಗಸಂಸ್ಥೆಯಾದ ಅಖಿಲ ಭಾರತ ಕಿಸಾನ್ ಸಭಾ ತೀರ್ಮಾನಿಸಿದೆ.

ಇಂದು ರೈತರಿಂದ ಶ್ರದ್ಧಾಂಜಲಿ ದಿವಸ್ ಆಚರಣೆ..

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ 33 ರೈತರು ನವೆಂಬರ್ 26ರಿಂದ ಅಪಘಾತಗಳು, ಅನಾರೋಗ್ಯ ಮತ್ತು ಶೀತ ವಾತಾವರಣದಿಂದಾಗಿ ಸಾವನ್ನಪ್ಪಿದ್ದಾರೆ ಎಂದು ರೈತ ಸಂಸ್ಥೆ ಹೇಳಿಕೊಂಡಿದೆ. ಇಂದು ರೈತರು ಮತ್ತು ಎಲ್ಲಾ ವರ್ಗದ ಜನರು ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಂತಾಪ ಸಲ್ಲಿಸಲಿದ್ದಾರೆ.

ಇದರ ಜತೆಗೆ ಪಂಜಾಬ್ ಅಸ್ಮಿತೆಯನ್ನ ಹೆಚ್ಚು ಹೆಚ್ಚು ತೋರ್ಪಡಿಸಿಕೊಳ್ಳುವ ಮೂಲಕ ಹೋರಾಟಕ್ಕೆ ಪ್ರೇರಣೆ ನೀಡಲು ಪಂಜಾಬ್ ಯುವಕರು ಮುಂದಾಗಿದ್ದಾರೆ. ಯುವಕರಿಗೆ ಪಗಡಿ ಜತೆಗೆ ಟ್ಯಾಟೋ ಸೇರಿ ಪಂಜಾಬ್ ಅಸ್ಮಿತೆಯ ಮೂಲಕ ಹೋರಾಟ ತೀವ್ರಗೊಳಿಸ್ತಿದ್ದಾರೆ.

ABOUT THE AUTHOR

...view details