ಗ್ವಾಲಿಯರ್ (ಮಧ್ಯಪ್ರದೇಶ): ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಭಾನುವಾರ ರೈತರು ಆಂದೋಲನದ ಹಾದಿಯನ್ನು ಬಿಟ್ಟು ಮಾತುಕತೆ ಆರಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಗ್ವಾಲಿಯರ್‌ನ ಕೃಷಿ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ತೋಮರ್, ರೈತರು ಪ್ರತಿಭಟನೆಯ ಹಾದಿಯನ್ನು ಬಿಟ್ಟು ಸಂವಾದದ ಮಾರ್ಗ ಅನುಸರಿಸುವಂತೆ ನಾನು ಮನವಿ ಮಾಡುತ್ತೇನೆ. ಅವರ ಆಕ್ಷೇಪಗಳನ್ನು ಪರಿಗಣಿಸಲು ಸರ್ಕಾರ ಸಿದ್ಧವಾಗಿದೆ.
ಸರ್ಕಾರ ಖಂಡಿತವಾಗಿಯೂ ಮಾತನಾಡಲು ಸಿದ್ಧವಾಗಿದೆ. ರೈತರ ಪ್ರತಿಭಟನೆ ರಾಜಕೀಯ ಸಮಸ್ಯೆಯಾಗಬಾರದು ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.
ರೈತರ ಚಳವಳಿಯು ರಾಜಕೀಯದೊಂದಿಗೆ ಬೆರೆಯಬಾರದು. ರೈತ ಎಲ್ಲರಿಗೂ ಸೇರಿದವನು. ಸರ್ಕಾರವು ರೈತ ಸಂಘದೊಂದಿಗೆ ಬಹಳ ಸೂಕ್ಷ್ಮವಾಗಿ ಮಾತುಕತೆ ನಡೆಸಿದೆ ಮತ್ತು ಭವಿಷ್ಯದಲ್ಲಿಯೂ ಅದನ್ನು ಮಾಡಲು ಸಿದ್ಧ ಎಂದು ತೋಮರ್ ಹೇಳಿದ್ದಾರೆ.
ಮೂರು ಕೃಷಿ ಕಾನೂನುಗಳು ಜಾರಿಗೆ ಬಂದ ಮೊದಲ ವಾರ್ಷಿಕೋತ್ಸವದ ಅಂಗವಾಗಿ ರೈತ ಸಂಘಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾ (SKM) ಇಂದು ಭಾರತ್ ಬಂದ್‌ಗೆ ಕರೆ ನೀಡಿದ್ದವು.