ಗಾಜಿಯಾಬಾದ್ (ಉತ್ತಪ್ರದೇಶ): ಅಭಿವೃದ್ಧಿ ಕಾರ್ಯಗಳಿಗೆ ವಶಪಡಿಸಿಕೊಂಡಿರುವ ಭೂಮಿಗೆ ಹೆಚ್ಚಿನ ಪರಿಹಾರ ನೀಡುವಂತೆ ಆಗ್ರಹಿಸಿ ರೈತರು, ಇಲ್ಲಿನ ಅಭಿವೃದ್ಧಿ ಪ್ರಾಧಿಕಾರದ ಕಚೇರಿ ಮುಂದೆ ಧರಣಿ ನಡೆಸಿದರು. ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದ ಮಹಿಳೆಯರು, ಪ್ರಾಧಿಕಾರದ ಆವರಣದ ಮುಖ್ಯ ಪ್ರವೇಶ ದ್ವಾರವನ್ನು ಮುಚ್ಚಿ ಯಾರೂ ಒಳಬರದಂತೆ ತಡೆದರು.
ಸದರಪುರ, ಬಯಾನ, ಮತಿಯಾಲ, ದುಹೈ ಮತ್ತು ಇತರ ಗ್ರಾಮಗಳ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಮಹಿಳಾ ಪ್ರತಿಭಟನಾಕಾರರು ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಬಳಿಕ ಪ್ರಾಧಿಕಾರದ ಕಚೇರಿ ತಲುಪಿದರು ಎಂದು ಭಾರತೀಯ ಕಿಸಾನ್ ಘಟಕದ ನಾಯಕರೊಬ್ಬರು ತಿಳಿಸಿದ್ದಾರೆ.