ಅಲ್ವಾರ್ (ರಾಜಸ್ಥಾನ): ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರು, ಹೋಳಿ ಹಬ್ಬದ ಹಿನ್ನೆಲೆ ಕಾಮಣ್ಣನ ಬದಲು ಕೃಷಿ ಕಾಯ್ದೆಗಳ ಪ್ರತಿಗಳನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜಸ್ಥಾನ - ಹರಿಯಾಣ ಗಡಿ ಭಾಗವಾದ ಶಹಜಹಾನ್ಪುರದಲ್ಲಿ ಮೂರು ಕೃಷಿ ಕಾಯ್ದೆಗಳ ಪ್ರತಿಗಳಿಗೆ ಬೆಂಕಿ ಹಚ್ಚಿ ಸುಟ್ಟಿದ್ದಾರೆ. ನಾವು ಇವುಗಳನ್ನು ದಹಿಸಿ ಸುಗ್ಗಿಯನ್ನು ಸ್ವಾಗತಿಸುತ್ತೇವೆ. ಇದು ನಮ್ಮ ವಿಜಯದ ಸಂಕೇತವಾಗಿದೆ. ನಮ್ಮ ಹೋರಾಟದ ಗೆಲುವಿಗಾಗಿ ಆಶಿಸುತ್ತೇವೆ ಎಂದು ಸಂಯುಕ್ತ ಕಿಸಾನ್ ಮೋರ್ಚಾದ ಸದಸ್ಯರು ಹೇಳಿದ್ದಾರೆ.