ಕರ್ನಾಟಕ

karnataka

ETV Bharat / bharat

ಕೇಂದ್ರಕ್ಕೆ ರೈತರ ಮತ್ತೊಂದು ಸವಾಲು.. ರಾತ್ರೋರಾತ್ರಿ ಷಹಜಹಾನ್ಪುರ ಗಡಿಯಲ್ಲಿ ಹುತಾತ್ಮರ ಸ್ಮಾರಕ ನಿರ್ಮಾಣ - ರಾತ್ರೋ ರಾತ್ರಿ ಷಹಜಹಾನ್ಪುರ ಗಡಿಯಲ್ಲಿ ಹುತಾತ್ಮರ ಸ್ಮಾರಕ ನಿರ್ಮಾಣ

ನಾವು ಹುತಾತ್ಮರ ಸ್ಮಾರಕ ಮಾಡಿದ್ದೇವೆ. ಸರ್ಕಾರ ಧೈರ್ಯವಿದ್ದರೆ ಹುತಾತ್ಮರು ಸ್ಮಾರಕವನ್ನು ತೆಗೆದು ಹಾಕಲಿ..

ರಾತ್ರೋ ರಾತ್ರಿ ಷಹಜಹಾನ್ಪುರ ಗಡಿಯಲ್ಲಿ ಹುತಾತ್ಮರ ಸ್ಮಾರಕ ನಿರ್ಮಾಣ
ರಾತ್ರೋ ರಾತ್ರಿ ಷಹಜಹಾನ್ಪುರ ಗಡಿಯಲ್ಲಿ ಹುತಾತ್ಮರ ಸ್ಮಾರಕ ನಿರ್ಮಾಣ

By

Published : Apr 5, 2021, 3:29 PM IST

ಅಲ್ವಾರ್(ರಾಜಸ್ಥಾನ) :ಕೇಂದ್ರದ ವಿರುದ್ಧ ರೈತರ ಧರಣಿ ಅಬಾಧಿತವಾಗಿ ಮುಂದುವರೆದಿದೆ. ಈ ನಡುವೆ ಆಕ್ರೋಶಗೊಂಡ ರೈತರು ಷಹಜಹಾನ್ಪುರ ಗಡಿಯಲ್ಲಿ ಮಾಡಿದ ಕಾರ್ಯ ಸರ್ಕಾರಕ್ಕೆ ಮತ್ತೊಂದು ಸವಾಲಾಗಿದೆ.

ರೈತ ಚಳವಳಿಯಲ್ಲಿ ಪ್ರಾಣ ಕಳೆದುಕೊಂಡ ಹುತಾತ್ಮರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಷಹಜಹಾನ್ಪುರ ಗಡಿಯ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಹುತಾತ್ಮರ ಸ್ಮಾರಕವನ್ನು ಅನುಮತಿಯಿಲ್ಲದೆ ರಾತ್ರೋರಾತ್ರಿ ನಿರ್ಮಿಸಲಾಗಿದೆ.

ರಾತ್ರೋ ರಾತ್ರಿ ಷಹಜಹಾನ್ಪುರ ಗಡಿಯಲ್ಲಿ ಹುತಾತ್ಮರ ಸ್ಮಾರಕ ನಿರ್ಮಾಣ

ಈ ಹಿಂದೆ ಸರ್ಕಾರದ ಅನುಮತಿಯೊಂದಿಗೆ ಹುತಾತ್ಮ ರೈತರ ಸ್ಮಾರಕವನ್ನು ನಿರ್ಮಿಸಲಾಗುವುದು ಎಂದು ಪ್ರತಿಭಟನಾನಿರತರು ಹೇಳಿದ್ದರು. ಆದರೆ, ರಾತ್ರೋರಾತ್ರಿ ಅನುಮತಿಯಿಲ್ಲದೆ ಸ್ಮಾರಕ ನಿರ್ಮಾಣ ಮಾಡಿದ್ದಾರೆ. ಈ ಸ್ಮಾರಕ ನಿರ್ಮಾಣಕ್ಕೆ ದೇಶಾದ್ಯಂತ ವಿವಿಧ ರಾಜ್ಯಗಳಿಂದ ಮಣ್ಣು ಮತ್ತು ಚಿತಾಭಸ್ಮ ಸಂಗ್ರಹಿಸಲಾಗಿದೆ.

ನಾವು ಹುತಾತ್ಮರ ಸ್ಮಾರಕ ಮಾಡಿದ್ದೇವೆ. ಸರ್ಕಾರ ಧೈರ್ಯವಿದ್ದರೆ ಹುತಾತ್ಮರು ಸ್ಮಾರಕವನ್ನು ತೆಗೆದು ಹಾಕಲಿ ಎಂದು ಸವಾಲೆಸೆದರು.

ಇದನ್ನೂ ಓದಿ:ಮತದಾರರ ಪಟ್ಟಿಯಿಂದ ಶಶಿಕಲಾ ಹೆಸರೇ ನಾಪತ್ತೆ

ABOUT THE AUTHOR

...view details