ನವದೆಹಲಿ: ಪ್ರತಿಭಟನಾ ಸ್ಥಳದಲ್ಲಿ ಹಲವಾರು ಸಾವುಗಳು ಸಂಭವಿಸಿದರೂ ರೈತರು ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಲೇ ಇದ್ದಾರೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
"ತಮ್ಮ ಹೊಲಗಳನ್ನು ಮತ್ತು ದೇಶವನ್ನು ಕಾಪಾಡಲು, ರೈತರು ನಿಧಾನವಾಗಿ ಸಾಯುತ್ತಿದ್ದಾರೆ. ಆದರೆ, ಅವರು ಹೆದರುವುದಿಲ್ಲ ಮತ್ತು ಅವರು ತಮ್ಮ ನಿಲುವಿನ ಕುರಿತು ದೃಢವಾಗಿದ್ದಾರೆ" ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದು, #500DeathsAtFarmersProtest ಎಂಬ ಹ್ಯಾಶ್‌ಟ್ಯಾಗ್ ಹಾಕಿದ್ದಾರೆ.