ಕರ್ನಾಟಕ

karnataka

ಹೊಲ ಉಳುಮೆಗೆ ಎತ್ತಿನ ಜೊತೆ ನೊಗಕ್ಕೆ ಹೆಗಲು ಕೊಟ್ಟ ಮಗ!

By

Published : Jun 15, 2021, 8:15 AM IST

ತೆಲಂಗಾಣ ಮೂಲದ ರೈತನೋರ್ವ ಮತ್ತೊಂದು ಎತ್ತು ಇಲ್ಲದ ಕಾರಣ ತನ್ನ ಮಗನನ್ನೇ ಉಳುಮೆ ಮಾಡಲು ಬಳಕೆ ಮಾಡಿಕೊಂಡಿದ್ದಾನೆ.

FARMER TURNED HIS SON INTO BULL AND PLOWED FIELD
ಹೊಲ ಉಳುಮೆಗೆ ಎತ್ತಿಗೆ ಜೊತೆಯಾದ ಮಗ

ಆದಿಲಾಬಾದ್​, ತೆಲಂಗಾಣ:ಹೊಲ ಉಳಲು ಮತ್ತೊಂದು ಎತ್ತು ಇಲ್ಲದ ಕಾರಣ ತನ್ನ ಮಗನನ್ನೇ ಎತ್ತಿನ ರೀತಿಯಲ್ಲಿ ತಂದೆಯೋರ್ವ ಬಳಸಿಕೊಂಡ ಘಟನೆ ತೆಲಂಗಾಣದ ಆದಿಲಾಬಾದ್ ಜಿಲ್ಲೆಯಲ್ಲಿ ನಡೆದಿದ್ದು ಮನಕರಗುವಂತಿದೆ.

ಆದಿಲಾಬಾದ್ ಜಿಲ್ಲೆಯ ಇಂದ್ರವೆಲ್ಲಿ ವಲಯದಲ್ಲಿ ದೊಂಗಗಾವ್ ಗ್ರಾಮದಲ್ಲಿ ವಾಸ ಮಾಡುತ್ತಿರುವ ಬುಡಕಟ್ಟು ರೈತ ಅಭಿಮಾನ್​ ಆರು ಎಕರೆ ಜಮೀನು ಹೊಂದಿದ್ದು, ಮಗನನ್ನೇ ಎತ್ತನ್ನಾಗಿ ಬಳಸಿಕೊಂಡಿದ್ದಾನೆ.

ಹೊಲ ಉಳುಮೆಗೆ ಎತ್ತಿಗೆ ಜೊತೆಯಾದ ಮಗ

ಇದನ್ನೂ ಓದಿ:ಸ್ನೇಹಿತರಿಂದಲೇ ನಾಲ್ವರು ಅಪ್ರಾಪ್ತೆಯರ ಮೇಲೆ ಗ್ಯಾಂಗ್ ರೇಪ್!

ಖಾರೀಫ್ ಋತು ಆರಂಭವಾಗುತ್ತಿದ್ದು, ಇದೇ ವೇಳೆ ಅನಾರೋಗ್ಯದಿಂದ ಅಭಿಮಾನ್ ಮನೆಯಲ್ಲಿ ಎತ್ತು ಮೃತಪಟ್ಟಿದೆ. ಮತ್ತೊಂದು ಎತ್ತು ಕೊಳ್ಳಲು ಸುಮಾರು 40 ಸಾವಿರ ರೂಪಾಯಿ ಇಲ್ಲದ ಕಾರಣದಿಂದ ಮಗ ಸಾಯಿನಾಥ್​​ನನ್ನೇ ಎತ್ತಿನ ರೀತಿಯಲ್ಲಿ ಬಳಸಿಕೊಳ್ಳಲಾಗಿದೆ.

ಈ ಬಗ್ಗೆ ಅಳಲು ತೋಡಿಕೊಂಡಿರುವ ರೈತ, ಮತ್ತೊಂದು ಎತ್ತನ್ನು ಕೊಳ್ಳಲು ಸರ್ಕಾರ ಸಹಾಯ ಮಾಡಬೇಕೆಂದು ಮನವಿ ಮಾಡಿದ್ದಾನೆ.

ABOUT THE AUTHOR

...view details