ಕರ್ನಾಟಕ

karnataka

By

Published : Feb 22, 2023, 3:18 PM IST

ETV Bharat / bharat

ಪ್ರೀತಿಯ ಪತ್ನಿಯನ್ನು ಪ್ರತಿಮೆಯಲ್ಲಿ ಪೂಜಿಸುವ ಪತಿ; ದಿನಕ್ಕೆರಡು ಬಾರಿ ಆರತಿ!

45 ವರ್ಷಗಳ ಕಾಲ ಸಂಸಾರದ ಬಂಡಿ ಸಾಗಿಸಲು ಹೆಗಲು ಕೊಟ್ಟ ಹೆಂಡತಿಯ ನೆನಪನ್ನು ಶಾಶ್ವತಗೊಳಿಸಲು ಇಲ್ಲೊಬ್ಬ ವ್ಯಕ್ತಿ ಆಕೆಯ ಪ್ರತಿಮೆಯನ್ನು ನಿರ್ಮಿಸಿ ಪ್ರತಿನಿತ್ಯವೂ ಪೂಜೆ ಸಲ್ಲಿಸುತ್ತಿದ್ದಾರೆ.

ಅಗಲಿದ ಹೆಂಡತಿಯ ಮೂರ್ತಿ ಸ್ಥಾಪಿಸಿ, ನಿತ್ಯವೂ ಆರಾಧನೆ ಮಾಡುತ್ತಿರುವ ರೈತ
A farmer set up an idol of his departed wife and worships it daily

ಕೊಯಮತ್ತೂರು (ತಮಿಳುನಾಡು):ಕ್ಲುಲ್ಲಕ ವಿಚಾರಕ್ಕಾಗಿ ಕೋರ್ಟ್​ ಮೆಟ್ಟಿಲೇರಿ ವಿಚ್ಛೇದನ ಪಡೆಯುತ್ತಿರುವ ಇಂದಿನ ಕಾಲಘಟ್ಟದಲ್ಲಿ ಹೆಂಡತಿಯ ಅಗಲಿಕೆಯ ನೋವು ಮರೆಯಲು ಇಲ್ಲೊಬ್ಬ ವ್ಯಕ್ತಿ ಆಕೆಯನ್ನು ದೇವತೆಯಂತೆ ಆರಾಧಿಸುತ್ತಿದ್ದಾರೆ. ಇಂಥದ್ದೊಂದು ಅಪರೂಪದ ನಿದರ್ಶನ ತಮಿಳುನಾಡಿನ ಕೊಯಮತ್ತೂರಿನಲ್ಲಿ ಸಿಕ್ಕಿದೆ. 45 ವರ್ಷಗಳ ಕಾಲ ಒಟ್ಟಿಗೆ ಬದುಕಿದ ಸಂಗಾತಿಯನ್ನು ಕಳೆದುಕೊಂಡ ವ್ಯಕ್ತಿಯೊಬ್ಬರು ಇದೀಗ ಆಕೆಯ ನೆನಪಿನಲ್ಲಿ ಪ್ರತಿಕ್ಷಣ ಕಳೆಯುತ್ತಿದ್ದಾರೆ.

ಅಗಲಿದ ಹೆಂಡತಿಯ ಮೂರ್ತಿ ಸ್ಥಾಪಿಸಿ, ನಿತ್ಯವೂ ಆರಾಧನೆ ಮಾಡುತ್ತಿರುವ ರೈತ

ಸಂಪೂರ್ಣ ವಿವರ: ಕೊಯಮತ್ತೂರಿನ 75 ವರ್ಷದ ಪಳನಿಚಾಮಿ ಅವರು ತಮ್ಮ ಪ್ರೀತಿಯ ಪತ್ನಿ ಸರಸ್ವತಿಗಾಗಿ ಮಂದಿರ ನಿರ್ಮಾಣ ಮಾಡಿದ್ದಾರೆ. ಸಿರುಮುಗೈನ ಸಮೀಪದ ಗಣೇಶಪುರಂನಲ್ಲಿ ಪತ್ನಿಯ ಸಮಾಧಿ ಸ್ಥಳದಲ್ಲೇ ದೊಡ್ಡ ಒಳಾಂಗಣ​ ನಿರ್ಮಿಸಿ ಅಲ್ಲಿ ಪತ್ನಿಯ ಸುಂದರ ಪ್ರತಿಮೆಯನ್ನಿಟ್ಟು ಪ್ರತಿದಿನವೂ ಆರತಿ ಬೆಳಗಿ ಆರಾಧಿಸುತ್ತಿದ್ದಾರೆ.

ಪಳನಿಚಾಮಿ ಮತ್ತು ಸರಸ್ವತಿ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಇವರದ್ದು ಜಗಳವನ್ನೇ ಕಾರಣ ಅಪರೂಪದ ಸುಖಿ ಕುಟುಂಬ. ಸರಸ್ವತಿ 59 ವರ್ಷ ವಯಸ್ಸಿನಲ್ಲಿದ್ದಾಗ ಅಂದರೆ 2019ರಲ್ಲಿ ಮನೆ ಶೌಚಾಲಯದಲ್ಲಿ ಕಾಲು ಜಾರಿ ಸಾವನ್ನಪ್ಪಿದ್ದರು. ಅಂದಿನಿಂದ ಪಳನಿಚಾಮಿ ಜೀವನದಲ್ಲಿ ಶೋಕ ಆವರಿಸಿದೆ. ಮನದನ್ನೆಯ ಅಗಲಿಕೆಯ ನೋವು ಇವರನ್ನು ಹೈರಾಣಾಗಿಸಿದೆ. ಬದುಕಿನ ಕಡೆ ಕ್ಷಣದವರೆಗೂ ಸಂಭ್ರಮದಿಂದ ದಿನ ಕಳೆಯುವ ಅವರ ಕನಸು ಅರ್ಥದಲ್ಲೇ ಕಮರಿತು.

ಪತ್ನಿಯ ಪ್ರತಿಮೆ ನಿರ್ಮಿಸಿದ ಪತಿ

ಹೆಂಡತಿಯ ಮೃತದೇಹವನ್ನು ಮನೆಯ ಬಳಿಯ ತೋಟದಲ್ಲಿ ಅಂತ್ಯಸಂಸ್ಕಾರ ನಡೆಸಲಾಗಿದೆ. ಇದೇ ಸ್ಥಳದಲ್ಲಿ ಒಂದು ಹಾಲ್​ ಕಟ್ಟಿಸಿದ್ದಾರೆ. ಮೊದಲ ಪುಣ್ಯತಿಥಿಯ ಸಂದರ್ಭದಲ್ಲಿ ಆಕೆಯ ಪ್ರತಿಮೆಯನ್ನೂ ಸ್ಥಾಪಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಪಳನಿಚಾಮಿ ಈ ಪ್ರತಿಮೆಗೆ ದಿನಕ್ಕೆರಡು ಬಾರಿ ಆರತಿ ಮಾಡುತ್ತಾರೆ. ಈ ತೋಟವನ್ನು ಬಿಟ್ಟು ಒಂದು ದಿನವೂ ಅವರು ಎಲ್ಲಿಗೂ ಹೋಗಿಲ್ಲ. ಹೆಂಡತಿಗೆ ಪೂಜೆ ಮಾಡುವುದು ನಿಲ್ಲುತ್ತದೆ ಎಂಬುದೇ ಇದಕ್ಕೆ ಕಾರಣ. ಹೆಂಡತಿಯನ್ನು ಕಳೆದುಕೊಂಡು ಮೂರು ವರ್ಷವಾದರೂ ಆಕೆ ಇನ್ನೂ ಇವರ ಮನಸ್ಸಿನಲ್ಲಿ ಜೀವಂತವಾಗಿದ್ದಾಳೆ. ಆಕೆಯ ಸವಿ ನೆನಪಿನಲ್ಲಿಯೇ ಹೊಸ ಮನೆ ಕಟ್ಟಿ 'ಪಳನಿಚಾಮಿ-ಸರಸ್ವತಿ ನಿವಾಸ' ಎಂದು ಅದಕ್ಕೆ ಹೆಸರಿಟ್ಟಿದ್ದಾರೆ.

ಪತ್ನಿಯ ಪ್ರತಿಮೆ ನಿರ್ಮಿಸಿ ಪೂಜಿಸುವ ಪತಿ

"ಮದುವೆಯಾದಾಗಿನಿಂದ 45 ವರ್ಷಗಳ ಕಾಲ ಒಂದು ಸಣ್ಣ ಜಗಳವೂ ಬಾರದಂತೆ ನಾವು ಜೀವನ ನಡೆಸಿದೆವು. ಆಕೆಯ ಸಾವು ನನಗೆ ದಿಗ್ಬ್ರಮೆ ಮೂಡಿಸಿತು. ಆಕೆ ನನ್ನ ಜೊತೆಗಿರಬೇಕು ಎಂಬ ಉದ್ದೇಶದಿಂದ ಮೂರ್ತಿ ಸ್ಥಾಪಿಸಿದ್ದೇನೆ. ಪ್ರತಿಮೆ ನಿರ್ಮಾಣಕ್ಕಾಗಿ ಆಕೆಯ ಫೋಟೋವನ್ನು ತಿರುಪುರ್​ನ ತಿರುಮುರುಗನ್​ ಬುಂಡಿ ಶಿಲ್ಪಕಲಾ ಗ್ಯಾಲರಿಗೆ ನೀಡಲಾಯಿತು. ಅವರು ಪ್ರತಿಮೆ ನಿರ್ಮಿಸಿಕೊಟ್ಟರು. ನಾನು ಸದಾ ಆಕೆಯ ಜೊತೆ ಕಳೆದ ಕ್ಷಣವನ್ನು ಮೆಲುಕು ಹಾಕುತ್ತೇನೆ. ಆಕೆ ನನ್ನನ್ನು ಬಿಟ್ಟು ಹೋದಳು ಎಂಬ ಸತ್ಯವನ್ನು ನನಗಿನ್ನೂ ಅರಗಿಸಿಕೊಳ್ಳಲಾಗುತ್ತಿಲ್ಲ. ಅವಳ ಸವಿನೆನಪಿನಲ್ಲೇ ದಿನ ಕಳೆಯುತ್ತಿದ್ದೇನೆ" ಎನ್ನುತ್ತಾರೆ ಪಳನಿಚಾಮಿ.

ಇದನ್ನೂ ಓದಿ: ಮೋರ್ಬಿ ದುರಂತ.. ಮೃತರ ಕುಟುಂಬಕ್ಕೆ 10 ಲಕ್ಷ ಪರಿಹಾರ: ಗುಜರಾತ್ ಹೈಕೋರ್ಟ್ ಆದೇಶ

ABOUT THE AUTHOR

...view details