ನವದೆಹಲಿ :ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾನೂನುಗಳ ವಿರುದ್ಧ ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ತೀವ್ರಗೊಂಡಿದೆ. ಇದರ ಭಾಗವಾಗಿ, ಜನವರಿ 26 ರಂದು ಟ್ರ್ಯಾಕ್ಟರ್ ರ‍್ಯಾಲಿನಡೆಸಲು ರೈತರು ಮುಂದಾಗಿದ್ದಾರೆ. ಆದರೆ ಸುಪ್ರೀಂಕೋರ್ಟ್, ರೈತರು ಟ್ರ್ಯಾಕ್ಟರ್ ರ‍್ಯಾಲಿ ನಡೆಸಲು ಅನುಮತಿ ನೀಡುವ ಪರಮಾಧಿಕಾರವನ್ನು ದೆಹಲಿ ಪೊಲೀಸರಿಗೆ ನೀಡಿದೆ.
ಟ್ರ್ಯಾಕ್ಟರ್ ರ‍್ಯಾಲಿ ನಡೆಸುವ ವಿಚಾರ : ಪೊಲೀಸರೊಂದಿಗೆ ರೈತ ಸಂಘಟನೆಗಳ ಸಭೆ - ವಿಜ್ಞಾನ ಭವನದಲ್ಲಿ ಪೊಲೀಸರ ಜತೆ ರೈತ ಸಭೆ
ಟ್ರ್ಯಾಕ್ಟರ್ ರ‍್ಯಾಲಿ ನಡೆಸಲು ಅನುಮತಿಗಾಗಿ ಪೊಲೀಸರೊಂದಿಗೆ ರೈತ ಮುಖಂಡರು ದೆಹಲಿಯ ವಿಜ್ಞಾನ ಭವನದಲ್ಲಿ ಸಭೆ ನಡೆಸುತ್ತಿದ್ದಾರೆ.
ಸಂಘಟನೆಗಳ
ಹೀಗಾಗಿ ಇಂದು ವಿಜ್ಞಾನ ಭವನದಲ್ಲಿ ಪೊಲೀಸ್ ಅಧಿಕಾರಿಗಳನ್ನು ಭೇಟಿಯಾಗಿ ಟ್ರ್ಯಾಕ್ಟರ್ ರ‍್ಯಾಲಿ ನಡೆಸಲು ಅನುಮತಿ ನೀಡುವಂತೆ ಕೋರಲು ಸಭೆ ಸೇರಿದ್ದಾರೆ. ಸಭೆಯಲ್ಲಿ ಭಾಗಿಯಾಗುವುದಕ್ಕೂ ಮುನ್ನ ಮಾತನಾಡಿದ ಭಾರತೀಯ ರೈತ ಸಂಘದ ಅಧ್ಯಕ್ಷ ಗುರ್ನಮ್ ಸಿಂಗ್, ನಾವು ರಿಂಗ್ ರೋಡ್ನಲ್ಲಿರ್ಯಾಲಿ ನಡೆಸುತ್ತೇವೆ ಎಂದು ಈಗಾಗಲೇ ತಿಳಿಸಿದ್ದೇವೆ. ನಮ್ಮ ಈ ಮನವಿಯನ್ನು ಪೊಲೀಸರು ಸ್ವೀಕರಿಸುವ ವಿಶ್ವಾಸವಿದೆ ಎಂದರು. ಯಾವುದೇ ಗಲಭೆಗೆ ಅವಕಾಶ ಕೊಡದೆ ಶಾಂತಿಯುತವಾಗಿ ರ‍್ಯಾಲಿ ನಡೆಸುವುದಾಗಿಯೂ ಸ್ಪಷ್ಟನೆ ನೀಡಿದ್ದಾರೆ.