ನವದೆಹಲಿ :ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವುದು ಮತ್ತು ಬೆಳೆಗಳಿಗೆ ನೀಡುವ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಕಾನೂನು ಚೌಕಟ್ಟಿನಲ್ಲಿ ತರುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸುವಂತೆ ಕಳೆದ 11 ತಿಂಗಳಿಂದ ಗಾಜಿಪುರ ಗಡಿಯಲ್ಲಿ ರೈತರು ಪ್ರತಿಭಟಿಸುತ್ತಿದ್ದಾರೆ.
ರೈತರೊಂದಿಗೆ ಕಬ್ಬಡ್ಡಿ ಆಡಿದ ರಾಕೇಶ್ ಟಿಕಾಯತ್.. ವಿಡಿಯೋ ವೈರಲ್ - ರೈತ ಮುಖಂಡ ರಾಕೇಶ್ ಟಿಕಾಯತ್
ಈ ಅಖಾಡದಲ್ಲಿ ಪ್ರತಿ ಸಂಜೆ ರೈತರು ಕಬ್ಬಡ್ಡಿ ಆಡುತ್ತಿದ್ದಾರೆ. ಹಿರಿಯರು ಕಿರಿಯರು ಎನ್ನದೆ ಚಳವಳಿಯಲ್ಲಿ ಭಾಗಿಯಾದ ಎಲ್ಲಾ ರೈತರೂ ಕಬಡ್ಡಿ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಾರೆ. ಹಾಗೆಯೇ, ಈ ಚಳವಳಿಯ ಮುಂದಾಳತ್ವ ವಹಿಸಿಕೊಂಡಿರುವ ರೈತ ಮುಖಂಡ ರಾಕೇಶ್ ಟಿಕಾಯತ್ ಕೂಡ ಕಬ್ಬಡ್ಡಿ ಆಡಿ ಸಂತಸ ಪಟ್ಟಿದ್ದಾರೆ..
ಹೆಚ್ಚಿನ ಸಂಖ್ಯೆಯ ರೈತರು ಗಾಜಿಪುರ ಗಡಿಯಲ್ಲಿರುವ ಟೆಂಟ್ಗಳಲ್ಲಿ ವಾಸಿಸುತ್ತಿದ್ದಾರೆ. ಪ್ರತಿಭಟನೆಯಲ್ಲಿ ಭಾಗಿಯಾಗಿರುವ ರೈತರಿಗಾಗಿ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗುತ್ತಿದೆ. ಗಾಜಿಪುರ ಗಡಿಯಲ್ಲಿ ರೈತರು ಕಬ್ಬಡ್ಡಿ ಅಖಾಡವನ್ನು ಸಿದ್ಧಪಡಿಸಿದ್ದಾರೆ.
ಈ ಅಖಾಡದಲ್ಲಿ ಪ್ರತಿ ಸಂಜೆ ರೈತರು ಕಬ್ಬಡ್ಡಿ ಆಡುತ್ತಿದ್ದಾರೆ. ಹಿರಿಯರು ಕಿರಿಯರು ಎನ್ನದೆ ಚಳವಳಿಯಲ್ಲಿ ಭಾಗಿಯಾದ ಎಲ್ಲಾ ರೈತರೂ ಕಬಡ್ಡಿ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಾರೆ. ಹಾಗೆಯೇ, ಈ ಚಳವಳಿಯ ಮುಂದಾಳತ್ವ ವಹಿಸಿಕೊಂಡಿರುವ ರೈತ ಮುಖಂಡ ರಾಕೇಶ್ ಟಿಕಾಯತ್ ಕೂಡ ಕಬ್ಬಡ್ಡಿ ಆಡಿ ಸಂತಸ ಪಟ್ಟಿದ್ದಾರೆ. ಟಿಕಾಯತ್ ಕಬ್ಬಡ್ಡಿ ಆಡುತ್ತಿರುವ ವಿಡಿಯೋ ಸದ್ಯ ವೈರಲ್ ಆಗಿದೆ.