ಕರ್ನೂಲ್(ಆಂಧ್ರಪ್ರದೇಶ):ಅದೃಷ್ಟವೇ ಹಾಗೆ. ಯಾವಾಗ? ಯಾರಿಗೆ? ಯಾವ ರೀತಿಯಲ್ಲಿ ಬರುತ್ತದೆ ಎಂಬುದನ್ನು ಹೇಳಲಾಗದು. ನಸೀಬು ಚೆನ್ನಾಗಿದ್ದರೆ ಕಡುಬಡವನೂ ಇದ್ದಕ್ಕಿದ್ದಂತೆ ಕೋಟ್ಯಧಿಪತಿಯಾಗಬಹುದು. ಇದೀಗ ಅಂಥದ್ದೊಂದು ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಕರ್ನೂಲ್ ಜಿಲ್ಲೆಯ ರೈತನೋರ್ವ ದಿಢೀರ್ ಶ್ರೀಮಂತನಾಗಿದ್ದಾನೆ.
ಕರ್ನೂಲ್‌ನ ರೈತ ತನ್ನ ಜಮೀನಿನಲ್ಲಿ ಟೊಮೆಟೊ ಬೆಳೆ ಬೆಳೆದಿದ್ದ. ಮಗಳೊಂದಿಗೆ ಜಮೀನಿನಲ್ಲಿ ಕಳೆ ಕೀಳುತ್ತಿದ್ದಾಗ 10 ಕ್ಯಾರೆಟ್ ಗುಣಮಟ್ಟದ ವಜ್ರ ಸಿಕ್ಕಿದೆ. ವಜ್ರ ವ್ಯಾಪಾರಿಯೊಬ್ಬರು ಇದನ್ನು 34 ಲಕ್ಷ ರೂಪಾಯಿಗೆ ಖರೀದಿಸಿದ್ದಾರೆ ಎಂದು ವರದಿಯಾಗಿದೆ.