ಮಧುರೈ(ತಮಿಳುನಾಡು):ಸಾಂಕ್ರಾಮಿಕ ರೋಗ ಕೊರೊನಾದಿಂದ ವಿಶ್ವಾದ್ಯಂತ ಕೋಟ್ಯಂತರ ಜನರು ಬಳಲುತ್ತಿದ್ದಾರೆ. ಈಗಾಗಲೇ ಮಾರಕ ರೋಗಕ್ಕೆ ಔಷಧ ಕಂಡುಹಿಡಿದಿದ್ದು, ವಿಶ್ವದೆಲ್ಲೆಡೆ ಲಸಿಕೆ ವಿತರಣೆ ಅಭಿಯಾನ ನಡೆಯುತ್ತಿದೆ. ಹೀಗಿರುವಾಗ ಇಲ್ಲೊಬ್ಬ ರೈತ ಜೀವಂತ ಹಾವು ತಿಂದು ‘ಇದುವೇ ಕೊರೊನಾ ಔಷಧಿ’ ಎಂದು ಹೇಳುತ್ತಾ ಹುಚ್ಚಾಟ ನಡೆಸಿದ್ದಾನೆ.
ಮಧುರೈ ಜಿಲ್ಲೆಯ ಪೆರುಮಾಲ್ಪಟ್ಟಿ ಗ್ರಾಮದ ರೈತನೊಬ್ಬ ಜೀವಂತ ಹಾವೊಂದನ್ನು ಕೈಯಲ್ಲಿ ಹಿಡಿದು ಬಾಯಿಯಿಂದ ಕಚ್ಚಿ ತಿಂದಿದ್ದಾನೆ. ಬಳಿಕ ಇದು ಕೊರೊನಾಗೆ ಅಪರೂಪದ ಔಷಧಿಯಾಗಿದೆ ಎಂದು ಹೇಳುತ್ತಾನೆ.