ಸಂಗ್ರೂರ್ (ಪಂಜಾಬ್):ಪಂಜಾಬ್‌ನ ಸಂಗ್ರೂರ್‌ನಲ್ಲಿ ಸೋಮವಾರ ನಡೆದ ಪ್ರತಿಭಟನೆಯ ವೇಳೆ ಟ್ರ್ಯಾಕ್ಟರ್‌ನ ಟ್ರೇಲರ್ ಹರಿದು ರೈತನೊಬ್ಬ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ರೈತನನ್ನು ಪ್ರೀತಮ್ ಸಿಂಗ್ ಎಂದು ಗುರುತಿಸಲಾಗಿದೆ.
"ಟ್ರಾಕ್ಟರ್ನ ಟ್ರಾಲಿಯು ವಯಸ್ಸಾದ ರೈತನ ಮೇಲೆ ಹರಿದಿದೆ, ಪ್ರೀತಮ್ ಸಿಂಗ್ ಅವರ ಕಾಲುಗಳಿಗೆ ತೀವ್ರ ಗಾಯಗಳಾಗಿದ್ದವು, ತಕ್ಷಣ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ನಂತರ ಅವರನ್ನು ಪಟಿಯಾಲಕ್ಕೆ ಕಳುಹಿಸುವಂತೆ ವೈದ್ಯರು ತಿಳಿಸಿದರು. ಅವರು ಪಟಿಯಾಲಾ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ನಿಧನರಾದರು. ಇದು ತುಂಬಾ ದುರದೃಷ್ಟಕರವಾಗಿದೆ'' ಎಂದು ಸಂಗ್ರೂರ್ ಎಸ್‌ಎಸ್‌ಪಿ ಸುರೇಂದ್ರ ಲಂಬಾ ತಿಳಿಸಿದ್ದಾರೆ.
ಯಾವುದೇ ಲಾಠಿ ಚಾರ್ಜ್ ಮಾಡಿಲ್ಲ- ಎಸ್ಪಿ:"ಪೊಲೀಸರು ಯಾವುದೇ ಲಾಠಿ ಚಾರ್ಜ್ ಮಾಡಲಿಲ್ಲ, ಪ್ರತಿಭಟನಾಕಾರರು ಬ್ಯಾರಿಕೇಡ್‌ಗಳನ್ನು ಮುರಿದು ಚಲಿಸುವುದನ್ನು ಮುಂದುವರೆಸಿದರು" ಎಂದು ಸಂಗ್ರೂರ್ ಎಸ್‌ಎಸ್‌ಪಿ ಹೇಳಿದ್ದಾರೆ. ಈ ಘಟನೆಯ ವಿಡಿಯೋವನ್ನು ಸಂಗ್ರೂರ್ ಪೊಲೀಸರು ಮೊದಲು ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ರೈತ ಟ್ರ್ಯಾಕ್ಟರ್‌ನ ಟೈರ್ ಅಡಿ ಬರುವುದನ್ನು ಕಾಣಬಹುದಾಗಿದೆ. ''ಪ್ರತಿಭಟನಾಕಾರರು ಟ್ರ್ಯಾಕ್ಟರ್ ಟ್ರಾಲಿಯನ್ನು ದುಡುಕಿ ಚಲಾಯಿಸಿದ್ದಾರೆ, ಇದರಿಂದ ಪೊಲೀಸ್ ಇನಸ್ಪೆಕ್ಟರ್ ತೀವ್ರವಾಗಿ ಗಾಯಗೊಂಡಿದ್ದಾರೆ, ಅವರು ತುಳಿತಕ್ಕೊಳಗಾಗುವುದರಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಮೃತರ ರೈತನಿಗೆ ನಮ್ಮಕಡೆಯಿಂದ ಸಂತಾಪವಿದೆ‘‘ ಎಂದು ಎಂದು ಸಂಗ್ರೂರ್ ಪೊಲೀಸರು ಟ್ವೀಟ್ ಮಾಡಿದ್ದಾರೆ.
ಪ್ರವಾಹ ಪೀಡಿತ ರೈತರಿಗೆ ಆರ್ಥಿಕ ನೆರವು ನೀಡುವಂತೆ ಒತ್ತಾಯಿಸಿ ರೈತರು ಲಾಂಗೋವಾಲ್‌ನಲ್ಲಿ ಪ್ರತಿಭಟನೆ ನಡೆಸಿದರು. ರೈತರ ಪ್ರತಿಭಟನೆಗೆ ಬೆಂಬಲ ನೀಡಿ ಮಾತನಾಡಿರುವ ಶಿರೋಮಣಿ ಅಕಾಲಿದಳದ ಮುಖ್ಯಸ್ಥ ಸುಖಬೀರ್ ಸಿಂಗ್ ಬಾದಲ್ , ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ಒತ್ತಾಯಿಸಿದ್ದಾರೆ.