ಕರ್ನಾಟಕ

karnataka

ETV Bharat / bharat

ಗಾಜಿಪುರ ಗಡಿಯಲ್ಲಿ ಕೇಂದ್ರದ ವಿರುದ್ಧ ಪ್ರತಿಭಟಿಸುತ್ತಿದ್ದ ರೈತ ಸಾವು - ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ

ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟಿಸುತ್ತಿದ್ದ ರೈತನೋರ್ವ ಗಾಜಿಪುರ ಗಡಿಯಲ್ಲಿ ಮೃತಪಟ್ಟಿದ್ದಾನೆ.

Farmer died on ghazipur border
ಗಾಜಿಪುರ ಗಡಿಯಲ್ಲಿ ಕೇಂದ್ರದ ವಿರುದ್ಧ ಪ್ರತಿಭಟಿಸುತ್ತಿದ್ದ ರೈತ ಸಾವು

By

Published : Jan 1, 2021, 3:33 PM IST

ಗಾಜಿಪುರ (ಉತ್ತರ ಪ್ರದೇಶ): ದೆಹಲಿ -ಉತ್ತರ ಪ್ರದೇಶ ಗಡಿ ಭಾಗವಾದ ಗಾಜಿಪುರ ಗಡಿಯಲ್ಲಿ ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟಿಸುತ್ತಿದ್ದ ರೈತನೋರ್ವ ಸಾವನ್ನಪ್ಪಿದ್ದಾರೆ.

ಮೃತ ರೈತನನ್ನು ಬಾಗಪತ್ ಜಿಲ್ಲೆಯ ಚೌಧರಿ ಗಲಾನ್ ಸಿಂಗ್ (57) ಎಂದು ಗುರುತಿಸಲಾಗಿದೆ. ಧರಣಿ ವೇಳೆ ಕೆಲ ರೈತರು ಆತ್ಮಹತ್ಯೆ ಮಾಡಿಕೊಂಡರೆ, ಇನ್ನು ಕೆಲವರು ಹೃದಯಾಘಾತದಿಂದಾಗಿ, ಚಳಿ ತಡೆಯಲಾರದೆ ಹಾಗೂ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಹೀಗೆ ಪ್ರತಿಭಟನೆ ವೇಳೆ ಸುಮಾರು 20 ರೈತರು ಪ್ರಾಣಬಿಟ್ಟಿದ್ದಾರೆ.

ಓದಿ:ರೈತರ ಪ್ರತಿಭಟನೆ ಮಧ್ಯೆ ಹೊಸ ವರ್ಷಾಚರಣೆ : ಈಟಿವಿ ಭಾರತ ಗ್ರೌಂಡ್​ ರಿಪೋರ್ಟ್

ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ಪಂಜಾಬ್​, ಹರಿಯಾಣ, ಉತ್ತರ ಪ್ರದೇಶ ರೈತರು ಗಡಿಭಾಗಗಳಲ್ಲಿ ಕಳೆದ 36 ದಿನಗಳಿಂದ ದೆಹಲಿ ಚಲೋ ಪ್ರತಿಭಟನೆ ನಡೆಸುತ್ತಿದ್ದಾರೆ. ಆರು ಬಾರಿ ರೈತ ಮುಖಂಡರೊಂದಿಗೆ ಸರ್ಕಾರ ಮಾತುಕತೆ ನಡೆಸಿದ್ದು, ಸಫಲವಾಗದ ಕಾರಣ ರೈತರು ತಮ್ಮ ಧರಣಿ ಮುಂದುವರೆಸಿದ್ದಾರೆ.

ABOUT THE AUTHOR

...view details