ಕರ್ನಾಟಕ

karnataka

ETV Bharat / bharat

ಕೆಜಿ ಎಲೆಕೋಸಿಗೆ 1 ರೂ.ಬೆಲೆ; ಐದು ಎಕರೆಯಲ್ಲಿದ್ದ ಬೆಳೆ ನಾಶ ಪಡಿಸಿದ ರೈತ - ಹಿಮಾಚಲ ಪ್ರದೇಶದ ಸೋಲನ್​

ಎಲೆಕೋಸಿಗೆ ಬೆಂಬಲ ಬೆಲೆ ಬಾರದ ಕಾರಣ ರೈತನೊಬ್ಬ ತನ್ನ ಐದು ಎಕರೆ ಜಮೀನನ್ನು ಉಳುಮೆ ಮಾಡಿದ್ದಾರೆ.

ಐದು ಎಕರೆ ಬೆಳೆ ಉಳುಮೆ ಮಾಡಿದ ರೈತ
ಐದು ಎಕರೆ ಬೆಳೆ ಉಳುಮೆ ಮಾಡಿದ ರೈತ

By

Published : Mar 2, 2023, 10:35 PM IST

ಐದು ಎಕರೆ ಬೆಳೆ ಉಳುಮೆ ಮಾಡಿದ ರೈತ

ನಾಸಿಕ್ , ಸೋಲನ್​ (ಮಹಾರಾಷ್ಟ್ರ/ಹಿಮಾಚಲ ಪ್ರದೇಶ): ಎಲೆಕೋಸು ಬೆಳೆ ಕೆಜಿಗೆ ₹1 ರೂ ಬಂದಿದೆ. ಹೀಗಾಗಿ, ಮನನೊಂದಿರುವ ರೈತರೊಬ್ಬರು ತನ್ನ ಐದು ಎಕರೆ ಜಮೀನಿನ ಬೆಳೆಯನ್ನು ಟ್ರ್ಯಾಕರ್ ಸಹಾಯದಿಂದ ಉಳುಮೆ ಮಾಡಿ ನಾಶಗೊಳಿಸಿದ್ದಾರೆ.

ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ:ರಾಜ್ಯದಲ್ಲಿ ಈರುಳ್ಳಿ, ದ್ರಾಕ್ಷಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದ ರೈತರು ಬೆಳೆಗೆ ಬೆಲೆ ಸಿಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಿಂದಾಗಿ ಹಲವಾರು ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದು ಅತ್ಯಂತ ದುಃಖದ ಸಂಗತಿ. ಆದರೆ, ರಾಜ್ಯದ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ರೈತ ಅಂಬಾದಾಸ್ ಖೈರೆ ಹೇಳಿದ್ದಾರೆ. ಅಲ್ಲದೇ ಸರ್ಕಾರ ನಮ್ಮತ್ತ ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ರೈತರಿಗೆ ಸಹಾಯ ಮಾಡಿ, ನಾನೊಬ್ಬ ಪ್ರಜ್ಞಾವಂತ ಯುವ ರೈತ. ಯಾವುದೇ ಸಂದರ್ಭದಲ್ಲೂ ಕೈ ಬಿಡುವುದಿಲ್ಲ. ರೈತರ ಪರವಾಗಿರುವಂತೆ ಹಾಗೂ ರೈತರ ನೆರವಿಗೆ ಬರುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು. ರೈತರ ಸಂಕಷ್ಟವನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕು ಯುವ ರೈತ ಅಂಬಾದಾಸ್ ಖೈರೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಹಸಿರು ತರಕಾರಿಗಳ ಜತೆಗೆ ಈರುಳ್ಳಿ ಬೆಲೆಯೂ ಭಾರಿ ಕುಸಿತ ಕಂಡಿದೆ. ಈರುಳ್ಳಿ 2 ರಿಂದ 3 ರೂ.ಗೆ ಸಿಗುತ್ತಿದ್ದು, ಸರಾಸರಿ ಬೆಲೆ 5 ರಿಂದ 6 ರೂ ಇದೆ. ಇದರಿಂದಾಗಿ ಸಾಗುವಳಿ ವೆಚ್ಚ ಭರಿಸಲಾಗದೇ ರೈತರು ಕಂಗಾಲಾಗಿದ್ದಾರೆ. ಕನಿಷ್ಠ ಗ್ಯಾರಂಟಿ ಬೆಲೆಗೆ ರೈತರು ಆಗ್ರಹಿಸುತ್ತಿದ್ದಾರೆ ಎಂದು ಹೇಳಿದರು.

12 ಚೀಲ ಎಲೆಕೋಸಿಗೆ ಸಿಕ್ಕಿದ್ದು ಕೇವಲ 1400 ರೂ. :ಇನ್ನೊಂದೆಡೆ ಹಿಮಾಚಲ ಪ್ರದೇಶದ ಸೋಲನ್​ನಲ್ಲಿ ರೈತರೊಬ್ಬರು ತರಕಾರಿ ಮಾರುಕಟ್ಟೆಗೆ ವ್ಯಾಪಾರಕ್ಕಾಗಿ ಎಲೆಕೋಸಿನೊಂದಿಗೆ ಬಂದಿದ್ದಾರೆ. ಆದರೆ ವ್ಯಾಪಾರದ ವೇಳೆ ರೂ 400 ನಷ್ಟವನ್ನು ಎದುರಿಸಿದ್ದಾರೆ. ರಾಜ್ಯದ ತೋಟಗಳಿಂದ ತರಕಾರಿಗಳು ಹಿಮಾಚಲದ ತರಕಾರಿ ಮಾರುಕಟ್ಟೆಗಳನ್ನು ತಲುಪುತ್ತಿವೆ. ಆದರೆ ರೈತರಿಗೆ ಯೋಗ್ಯ ಬೆಲೆ ಸಿಗುತ್ತಿಲ್ಲ ಎಂದು ಅಳಲನ್ನು ತೋಡಿಕೊಂಡಿದ್ದಾರೆ.

ಇದನ್ನೂ ಓದಿ :ಹಿಟ್ ಅಂಡ್ ರನ್ ಕೇಸ್: ಗಂಟೆಗೆ 167 ಕಿಮೀ ವೇಗದಲ್ಲಿ ಬಂದು ದಂಪತಿಗೆ ಗುದ್ದಿದ ಬಿಎಂಡಬ್ಲ್ಯೂ

ತರಕಾರಿ ಮಾರುಕಟ್ಟೆಗೆ ರೈತ ಪ್ರೇಮ್ ಎಂಬುವವರು 25 ಚೀಲ ಎಲೆಕೋಸು ತಂದಿದ್ದಾರೆ. ಅವರ ಬೆಳೆ ಮಾರುಕಟ್ಟೆಯಲ್ಲಿ 1400 ರೂ.ಗೆ ಮಾರಾಟವಾಗಿದೆ. ಆದರೆ ಅದನ್ನು ಸಾಗಿಸಲು 1800 ರೂ ತಗುಲಿದೆ. ಪ್ರೇಮ್ ತಮ್ಮ ಜೇಬಿನಿಂದ 400 ರೂ. ಅಧಿಕ ಹಣವನ್ನು ವ್ಯಯಿಸಿ ನಷ್ಟಕ್ಕೀಡಾಗಿದ್ದಾರೆ. ಒಂದು ಚೀಲ ಎಲೆಕೋಸಿಗೆ ಮಾರುಕಟ್ಟೆಯಲ್ಲಿ ಸುಮಾರು 60 ರೂ ಬೆಲೆಯಿದೆ. ಈ ಅರ್ಥದಲ್ಲಿ ಪ್ರತಿ ಕೆಜಿಗೆ 2 ರಿಂದ 2. 5 ರೂಪಾಯಿಗೆ ಎಲೆಕೋಸು ಮಾರಾಟವಾಗುತ್ತಿದೆ ಎಂದಿದ್ದಾರೆ.

ಎಲೆಕೋಸು ನಾಟಿ ಮಾಡುವುದರಿಂದ ಹಿಡಿದು ಮಾರುಕಟ್ಟೆಗೆ ಕೊಯ್ಲು, ತೊಳೆಯುವುದು ಮತ್ತು ಸಾಗಿಸಲು ಹಣ ಮತ್ತು ಶ್ರಮ ಎರಡೂ ಬೇಕಾಗುತ್ತದೆ. ಆದರೆ ಮಾರುಕಟ್ಟೆಗೆ ಬಂದ ನಂತರ ಶ್ರಮವೆಲ್ಲ ವ್ಯರ್ಥ ಎಂದು ಸಾಬೀತಾಗಿದೆ ಎಂದಿದ್ದಾರೆ. ಏನಿಲ್ಲ ಎಂದರು ಒಂದು ಎಕರೆ ಎಲೆಕೋಸು ಬೆಳೆಯಲ್ಲಿ 30 ರಿಂದ 40 ಸಾವಿರಕ್ಕೂ ಹೆಚ್ಚು ಖರ್ಚಾಗುತ್ತದೆ. ಆದರೆ ಇಲ್ಲಿ ರೈತನಿಗೆ ಸಾಗಣೆ ವೆಚ್ಚವೂ ಕೈಗೆ ಬಂದಿಲ್ಲ. ಹೀಗಾಗಿ ಎಲೆಕೋಸು ಬೆಳೆಗಾರ ದಿಕ್ಕು ತೋಚದಾಗಿದ್ದಾರೆ.

ಇದನ್ನೂ ಓದಿ :ವಿದೇಶಕ್ಕೆ ತೆರಳಿ ಮದುವೆಗೆ ನಿರಾಕರಿಸಿದ ಪ್ರೇಯಸಿ.. ನೀರಿನ ಟ್ಯಾಂಕ್ ಏರಿ ಆತ್ಮಹತ್ಯೆಗೆ ಯತ್ನಿಸಿದ ಯುವಕ!

ABOUT THE AUTHOR

...view details