ಕರ್ನಾಟಕ

karnataka

ETV Bharat / bharat

..ನಿನಗೆ ಸಾಟಿ ಇಲ್ಲ.. ಮಕ್ಕಳಂತೆ ಸಾಕಿರುವ ಎಮ್ಮೆಯ ಹುಟ್ಟುಹಬ್ಬ ಆಚರಿಸಿದ ರೈತ! - ಎಮ್ಮೆಯ ಹುಟ್ಟುಹಬ್ಬ ಆಚರಿಸಿದ ರೈತ

ಎಮ್ಮೆಯ ಹುಟ್ಟುಹಬ್ಬದ ಅಂಗವಾಗಿ ವಾರ್ಡ್​ ಸದಸ್ಯೆ ಶಿಜಿಮೋಳ್​ ಕೇಕ್​ ಕತ್ತರಿಸಿದ್ದು, ಕಳೆದ ನಾಲ್ಕು ವರ್ಷಗಳ ಹಿಂದೆ ಮಾರುಕಟ್ಟೆಯಲ್ಲಿ ಖರೀದಿ ಮಾಡಿದ್ದ ಎರಡು ಎಮ್ಮೆಗಳ ಪೈಕಿ ರಾಜಮಾಣಿಕ್ಯನ್ ಕೂಡ ಒಂದಾಗಿದೆ. ಇದನ್ನ ಸ್ವಂತ ಮಕ್ಕಳಂತೆ ಸಾಕಿಕೊಂಡು ಬರಲಾಗಿದೆ ಎಂದು ಮಾಲೀಕ ಬಶೀರ್ ತಿಳಿಸಿದ್ದಾರೆ..

Farmer celebrates birthday of buffalo
Farmer celebrates birthday of buffalo

By

Published : Feb 4, 2022, 7:18 PM IST

Updated : Feb 4, 2022, 7:45 PM IST

ಮಲಪ್ಪುರಂ(ಕೇರಳ):ಪ್ರೀತಿಯಿಂದ ಸಾಕಿರುವ ನಾಯಿ, ಬೆಕ್ಕಿನ ಹುಟ್ಟುಹಬ್ಬ ಆಚರಣೆ ಮಾಡಿರುವ ಅನೇಕ ಉದಾಹರಣೆ ನಮ್ಮ ಕಣ್ಮುಂದೆ ನಡೆದಿವೆ. ಇದರ ಮಧ್ಯೆ ಇದೀಗ ಕೇರಳದ ಕುಟುಂಬವೊಂದು ಮನೆಯಲ್ಲಿ ಸಾಕಿರುವ ಪ್ರೀತಿಯ ಎಮ್ಮೆಯ ಬರ್ತ್‌ಡೇ ಆಚರಿಸಿದ್ದಾರೆ.

ಮಕ್ಕಳಂತೆ ಸಾಕಿರುವ ಎಮ್ಮೆಯ ಹುಟ್ಟುಹಬ್ಬ ಆಚರಿಸಿದ ರೈತ!

ಕೇರಳದ ಮಲಪ್ಪುರಂನಲ್ಲಿ ರೈತನೋರ್ವ ಬರೋಬ್ಬರಿ ಸಾವಿರ ಕೆಜಿಗೂ ಅಧಿಕ ತೂಕದ ಎಮ್ಮೆಯ ಹುಟ್ಟುಹಬ್ಬ ಆಚರಿಸಿದ್ದಾರೆ. ಇಲ್ಲಿನ ಕಾಳಿಕಾವು ತೊಡಿಕಾಪುಲಂನ ಬಶೀರ್ ಎಂಬುವರು ಸಾಕಿರುವ ಮುದ್ದಿನ ಎಮ್ಮೆ ರಾಜಮಾಣಿಕ್ಯನ್​ ನಾಲ್ಕನೇ ವರ್ಷದ ಬರ್ತ್‌ಡೇ ಇದಾಗಿದೆ.

ಇದನ್ನೂ ಓದಿರಿ:ಓವೈಸಿ ಕಾರಿನ ಮೇಲೆ ಗುಂಡಿನ ದಾಳಿ ಪ್ರಕರಣ.. ಸಾವಿಗೆ ಹೆದರುವುದಿಲ್ಲ ಎಂದ ಹೈದರಾಬಾದ್​ ಸಂಸದ!

ಎಮ್ಮೆಯ ಹುಟ್ಟುಹಬ್ಬದ ಅಂಗವಾಗಿ ವಾರ್ಡ್​ ಸದಸ್ಯೆ ಶಿಜಿಮೋಳ್​ ಕೇಕ್​ ಕತ್ತರಿಸಿದ್ದು, ಕಳೆದ ನಾಲ್ಕು ವರ್ಷಗಳ ಹಿಂದೆ ಮಾರುಕಟ್ಟೆಯಲ್ಲಿ ಖರೀದಿ ಮಾಡಿದ್ದ ಎರಡು ಎಮ್ಮೆಗಳ ಪೈಕಿ ರಾಜಮಾಣಿಕ್ಯನ್ ಕೂಡ ಒಂದಾಗಿದೆ. ಇದನ್ನ ಸ್ವಂತ ಮಕ್ಕಳಂತೆ ಸಾಕಿಕೊಂಡು ಬರಲಾಗಿದೆ ಎಂದು ಮಾಲೀಕ ಬಶೀರ್ ತಿಳಿಸಿದ್ದಾರೆ.

ಮಕ್ಕಳಂತೆ ಸಾಕಿರುವ ಎಮ್ಮೆಯ ಹುಟ್ಟುಹಬ್ಬ ಆಚರಿಸಿದ ರೈತ!

ಈಗಾಗಲೇ ಅನೇಕರು 10 ಲಕ್ಷ ರೂಪಾಯಿ ನೀಡುವುದಾಗಿ ತಿಳಿಸಿದ್ದರು. ಬಶೀರ್ ಈ ಆಫರ್ ತಿರಸ್ಕರಿಸಿದ್ದಾರೆ. ಪಶು ವೈದ್ಯರು ತಿಳಿಸಿರುವ ಪ್ರಕಾರ ಈ ಎಮ್ಮೆ ಮುರ್ರಾ ತಳಿಗೆ ಸೇರಿದೆ. ಇದರ ಪರೀಕ್ಷೆ ನಡೆಸಲು ವೈದ್ಯರು ವಾರಕ್ಕೊಮ್ಮೆ ಇಲ್ಲಿಗೆ ಭೇಟಿ ನೀಡುತ್ತಾರೆ. ತೂಕ ಹೆಚ್ಚಾಗಿರುವ ಕಾರಣ ಇದೀಗ ಡಯಟ್​ ಮಾಡಿಸಲಾಗ್ತಿದೆಯಂತೆ.

Last Updated : Feb 4, 2022, 7:45 PM IST

ABOUT THE AUTHOR

...view details