ಹೈದರಾಬಾದ್:ಕಿಸಾನ್ ದಿವಸ್ ಅಥವಾ ರಾಷ್ಟ್ರೀಯ ರೈತ ದಿನಾಚರಣೆ ಅಥವಾ ಕಿಸಾನ್ ಸಮ್ಮಾನ್ ದಿವಸ್ ಅನ್ನು ಭಾರತದಲ್ಲಿ ಡಿಸೆಂಬರ್ 23ರಂದು ಆಚರಿಸಲಾಗುತ್ತದೆ. ಈ ದಿನವನ್ನು ಭಾರತದ 5ನೇ ಪ್ರಧಾನ ಮಂತ್ರಿಯಾಗಿದ್ದ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನದ ಸ್ಮರಣಾರ್ಥ ಆಚರಿಸಲಾಗುತ್ತದೆ.
ಈ ದಿನದಂದು ರಾಜಕೀಯ ನಾಯಕರು ಚೌಧರಿ ಚರಣ್ ಸಿಂಗ್ ಅವರಿಗೆ ಗೌರವ ಸಲ್ಲಿಸಲಿದ್ದಾರೆ. ನವದೆಹಲಿಯ ಕಿಸಾನ್ ಘಾಟ್‌ನಲ್ಲಿ ಮಾಜಿ ಪ್ರಧಾನಿ ಸಮಾಧಿಗೆ ನಾಯಕರು ಭೇಟಿ ನೀಡಲಿದ್ದಾರೆ. ಪ್ರತಿವರ್ಷ ಡಿಸೆಂಬರ್ 23ನ್ನು ರೈತ ದಿನ ಎಂದು ಆಚರಿಸಲು 2001ರಲ್ಲಿ ಸರ್ಕಾರ ನಿರ್ಧರಿಸಿತು.
ಭಾರತ ಕೃಷಿ ಪ್ರಧಾನ ದೇಶ. ಕೃಷಿ ಮತ್ತು ಅದರ ಸಂಬಂಧಿತ ಚಟುವಟಿಕೆಗಳು ಭಾರತದ ಗ್ರಾಮೀಣ ಜನಸಂಖ್ಯೆಯ ಶೇ 80ಕ್ಕಿಂತ ಹೆಚ್ಚು ಜನರಿಗೆ ಆದಾಯದ ಮೂಲಗಳಾಗಿವೆ. ಇದು ದೇಶಗಳ ಒಟ್ಟು ದೇಶೀಯ ಉತ್ಪನ್ನಕ್ಕೆ (ಜಿಡಿಪಿ) ಸುಮಾರು ಶೇ 14-15ರಷ್ಟು ಕೊಡುಗೆ ನೀಡುತ್ತದೆ. ಭಾರತದ ಕೃಷಿ ವಲಯ 169.6 ಮಿಲಿಯನ್ ಹೆಕ್ಟೇರ್ ಇದ್ದು, ಇದು ವಿಶ್ವದಲ್ಲೇ ಅತಿ ದೊಡ್ಡದಾಗಿದೆ.
ರೈತರ ಪ್ರತಿಭಟನೆ:
ಭಾರತೀಯ ಸಂಸತ್ತು ಮೂರು ಕೃಷಿ ಕಾಯ್ದೆಗಳನ್ನು ಅಂಗೀಕರಿಸಿದೆ. ರೈತರ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ 2020, ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಖಾತರಿ ಒಪ್ಪಂದ, ಕೃಷಿ ಸೇವೆಗಳ ಕಾಯ್ದೆ 2020, ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ 2020 ಇವುಗಳನ್ನು ಮಾನ್ಸೂನ್ ಅಧಿವೇಶನದಲ್ಲಿ ಅಂಗೀಕರಿಸಲಾಗಿತ್ತು.
ಮೂರು ವಾರಗಳಿಗಿಂತ ಹೆಚ್ಚು ಕಾಲ ದೆಹಲಿ ಗಡಿಯಲ್ಲಿ ಸಾವಿರಾರು ರೈತರು ವಿಶೇಷವಾಗಿ ಪಂಜಾಬ್ ಮತ್ತು ಹರಿಯಾಣದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾಕಾರರು ಮತ್ತು ಕೇಂದ್ರದ ನಡುವಿನ ಮಾತುಕತೆ ಯಾವುದೇ ನಿರ್ಣಾಯಕ ಫಲಿತಾಂಶವನ್ನು ನೀಡಲು ವಿಫಲವಾದ ಕಾರಣ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆ ಮುಂದುವರೆದಿದೆ.
ಹೊಸ ಕೃಷಿ ಕಾನೂನುಗಳು ಎಂಎಸ್‌ಪಿಯಲ್ಲಿ ಆಶ್ವಾಸಿತ ಸಂಗ್ರಹಣೆಯನ್ನು ಕೊನೆಗೊಳಿಸುತ್ತವೆ ಎಂದು ರೈತರು ಭಯಪಡುತ್ತಿದ್ದಾರೆ. ಪರ್ಯಾಯ ಮಾರುಕಟ್ಟೆ ಕಾರ್ಯವಿಧಾನವನ್ನು ಸ್ಥಾಪಿಸುವುದು ಎಪಿಎಂಸಿ ವ್ಯವಸ್ಥೆಯನ್ನು ಅನಗತ್ಯವಾಗಿಸುವ ಮೊದಲ ಹೆಜ್ಜೆಯಾಗಿದೆ ಎಂದು ಅವರು ಅಂದುಕೊಂಡಿದ್ದಾರೆ.
ದೊಡ್ಡ ಕಾರ್ಪೊರೇಟ್ ಸಂಸ್ಥೆಗಳೊಂದಿಗೆ ನೇರವಾಗಿ ವ್ಯವಹರಿಸಬೇಕು ಎಂದು ರೈತರು ಅಂದುಕೊಂಡಿದ್ದು, ಹೆಚ್ಚಿನ ಬೆಲೆ ನಿಗದಿ ಮಾಡುವ ಶಕ್ತಿಯನ್ನು ಹೊಂದಿರುವ ಅವರು ಸಣ್ಣ ರೈತರನ್ನು ಶೋಷಣೆಗೆ ಒಳಪಡಿಸುತ್ತಾರೆ ಎಂದು ರೈತರು ಭಯಪಡುತ್ತಿದ್ದಾರೆ.
ಮೂರು ವಿವಾದಾತ್ಮಕ ಕೃಷಿ ಮಸೂದೆಗಳು:
ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ 2020:
ರೈತರು ಮತ್ತು ವ್ಯಾಪಾರಿಗಳು ರಾಜ್ಯಗಳ ಎಪಿಎಂಸಿಗಳ ಮೂಲಕ ನೋಂದಾಯಿತ 'ಮಂಡಿಸ್'ಗಳ ಹೊರಗೆ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವ ಮತ್ತು ಖರೀದಿಸುವ ಸ್ವಾತಂತ್ರ್ಯವನ್ನು ಅನುಭವಿಸುವ ಪರಿಸರ ವ್ಯವಸ್ಥೆಯನ್ನು ರಚಿಸುವುದು. ಅವರು ಈಗ ಯಾವುದೇ ಸ್ಥಳೀಯ ಮಾರುಕಟ್ಟೆಗಳಿಗೆ ಅಥವಾ ಇತರ ರಾಜ್ಯಗಳಲ್ಲಿ ಅಥವಾ ಆನ್‌ಲೈನ್‌ನಲ್ಲಿ ಮಾರಾಟ ಮಾಡಬಹುದು. ಹೀಗಾಗಿ ಇದು ರೈತರ ಉತ್ಪನ್ನಗಳ ಅಂತಾರಾಜ್ಯ ವ್ಯಾಪಾರಕ್ಕೆ ಇರುವ ಅಡೆತಡೆಗಳನ್ನು ತೆಗೆದುಹಾಕುತ್ತದೆ.
ಎಪಿಎಂಸಿ ಮಾರುಕಟ್ಟೆಗಳ ಹೊರಗಿನ ವ್ಯಾಪಾರಕ್ಕಾಗಿ ಮಾರುಕಟ್ಟೆ ಶುಲ್ಕ, ಸೆಸ್ ಅಥವಾ ತೆರಿಗೆಯನ್ನು ರಾಜ್ಯ ಸರ್ಕಾರಗಳು ಸಂಗ್ರಹಿಸುವುದನ್ನು ಈ ಮಸೂದೆ ನಿಷೇಧಿಸುತ್ತದೆ. ಇದು ಕೃಷಿ ಉತ್ಪನ್ನಗಳ ಆನ್ಲೈನ್ ವ್ಯಾಪಾರಕ್ಕೆ ಒಂದು ಚೌಕಟ್ಟನ್ನು ಒದಗಿಸುತ್ತದೆ. ಮಾರ್ಕೆಟಿಂಗ್ / ಸಾರಿಗೆ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಉತ್ತಮ ಬೆಲೆಗಳನ್ನು ಪಡೆಯಲು ರೈತರಿಗೆ ಸಹಾಯ ಮಾಡುತ್ತದೆ.
ಪ್ರಯೋಜನಗಳು:
- ಸರ್ಕಾರದ ಪ್ರಕಾರ ಈ ಮಸೂದೆ ರೈತರು ವಿವಿಧ ರೀತಿಯ ಮಾರುಕಟ್ಟೆ ಸ್ಥಳಗಳನ್ನು ಹೊಂದುವುದರಿಂದ ಆಯ್ಕೆಯ ಸ್ವಾತಂತ್ರ್ಯವನ್ನು ನೀಡುತ್ತದೆ.
- ಇದು ರಾಜ್ಯದ ಹೊರಗಿನ ವ್ಯಾಪಾರವನ್ನು ಉತ್ತೇಜಿಸಲು ಮತ್ತು ಆಹಾರ ಸುರಕ್ಷತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
- ರೈತರು ಉತ್ತಮ ಬೆಲೆಯನ್ನು ಪಡೆಯಬಹುದಾಗಿದೆ.
- ಒಂದು ದೇಶ, ಒಂದು ಮಾರುಕಟ್ಟೆ.
ಸಮಸ್ಯೆಗಳು:
- ಕೃಷಿ ಮಾರುಕಟ್ಟೆ ಭಾರತೀಯ ಸಂವಿಧಾನದ ರಾಜ್ಯ ಪಟ್ಟಿಯ ಅಡಿ ಬರುತ್ತದೆ ಎಂದು ವಿಮರ್ಶಕರು ಗಮನ ಸೆಳೆದಿದ್ದಾರೆ.
- ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚಗಳೊಂದಿಗೆ, ಮುಕ್ತ ಮಾರುಕಟ್ಟೆ ಆಧಾರಿತ ಚೌಕಟ್ಟಿನಿಂದಾಗಿ ರೈತರು ಸಂಭಾವನೆ ದರವನ್ನು ಪಡೆಯಲಾಗುವುದಿಲ್ಲ.
- 2006ರಲ್ಲಿ ಎಪಿಎಂಸಿಗಳನ್ನು ರದ್ದುಪಡಿಸಿದ ಬಿಹಾರದ ಹಿಂದಿನ ಅನುಭವದಿಂದ ರೈತರು ಪಡೆದ ಸರಾಸರಿ ಬೆಲೆಗಳು ಕಡಿಮೆಯಾಗಿವೆ ಎಂದು ತೋರಿಸುತ್ತದೆ.
- ಎಂಎಸ್‌ಪಿಯನ್ನು ಕಾನೂನಿನಲ್ಲಿ ಹೊಂದಿಸುವುದು ಸಮಸ್ಯಾತ್ಮಕವಾಗಿದೆ ಏಕೆಂದರೆ ಎಂಎಸ್ಪಿ ಆಗಾಗ್ಗೆ ಬದಲಾಗಬೇಕಾಗುತ್ತದೆ.
- ಕಾನೂನನ್ನು ಮತ್ತೆ ಮತ್ತೆ ಬದಲಾಯಿಸುವುದು ಗೊಂದಲದ ಪ್ರಕ್ರಿಯೆಯಾಗಿದೆ.