ಫರಿದಾಬಾದ್: ನಗರದ ಫರಿದಾಬಾದ್ ಪೊಲೀಸರು ಗಸ್ತು ತಿರುಗುತ್ತಿದ್ದಾಗ ಪ್ಲಾಸ್ಟಿಕ್ ಬ್ಯಾಗ್ ಹೊತ್ತೊಯ್ಯುತ್ತಿದ್ದ ಭಿಕ್ಷುಕನೊಬ್ಬನನ್ನು ಕಂಡು ವಿಚಾರಣೆ ನಡೆಸಿದ್ದಾರೆ. ಈ ಸಮಯದಲ್ಲಿ ಆತ ಸರಿಯಾದ ಮಾಹಿತಿ ನೀಡದ ಕಾರಣ ಬ್ಯಾಗ್ ತೆರೆದು ನೋಡಿದಾಗ ಕಂತೆ-ಕಂತೆ ಹಣ ದೊರೆತಿದೆ.
ಭಿಕ್ಷುಕನ ಬ್ಯಾಗ್‌ನಲ್ಲಿತ್ತು 50 ಲಕ್ಷ ನಗದು! ಮುಂದೇನಾಯ್ತು.. - ಹರಿಯಾಣ ಭಿಕ್ಷುಕ ಸುದ್ದಿ
ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದ ಪೊಲೀಸರಿಗೆ ಭಿಕ್ಷುಕನ ಮೇಲೆ ಅನುಮಾನ ಮೂಡಿದ್ದು, ಆತನ ಬ್ಯಾಗ್ ಪರಿಶೀಲಿಸಿದಾಗ ಹಣದ ಕಂತೆಗಳೇ ಸಿಕ್ಕಿವೆ!
ಗಸ್ತು ತಿರುಗುತ್ತಿದ್ದ ವೇಳೆ ಪೊಲೀಸರಿಗೆ ಭಿಕ್ಷುಕನ ಬ್ಯಾಗ್ನಿಂದ ಪತ್ತೆಯಾಯ್ತು 50 ಲಕ್ಷ
ಭಿಕ್ಷುಕನ ಬಳಿಯಿದ್ದ 2 ಪಾಲಿಥಿನ್ ಚೀಲಗಳನ್ನು ಪರಿಶೀಲಿಸಿದಾಗ ಅದರಲ್ಲಿ 50 ಲಕ್ಷ ರೂಪಾಯಿ ಪತ್ತೆಯಾಗಿದೆ. ಪೊಲೀಸರು ನಗದು ಸೇರಿದಂತೆ ಭಿಕ್ಷುಕನನ್ನು ಆದಾಯ ತೆರಿಗೆ ಇಲಾಖೆಗೆ ಒಪ್ಪಿಸಿದ್ದಾರೆ. ಇದುವರೆಗೆ ಭಿಕ್ಷುಕನ ಗುರುತು ವಿವರ ಲಭ್ಯವಾಗಿಲ್ಲ, ತನಿಖೆ ಮುಂದುವರೆದಿದೆ.
ಇದನ್ನೂ ಓದಿ:ಭಿಕ್ಷೆ ಬೇಡಿ ಸಂಗ್ರಹಿಸಿದ 500, 1,000 ಹಳೆಯ ನೋಟು ವಿನಿಮಯ ಮಾಡಿಕೊಡುವಂತೆ ಭಿಕ್ಷುಕನಿಂದ ಅರ್ಜಿ!