ಮುಂಬೈ:ಬಾಲಿವುಡ್ನ ಖ್ಯಾತ ನಟ, ನಿರ್ದೇಶಕ, ಗಾಯಕ, ನಿರ್ಮಾಪಕರಾಗಿರುವ ಫರಾನ್ ಅಖ್ತರ್ ಅವರ ಇಂದು 49ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಸಹೋದರಿ ಮತ್ತು ನಿರ್ದೇಶಕಿ ಆಗಿರುವ ಜೋಯಾ ಅಖ್ತರ್ ಅವರು ಇನ್ಸ್ಟಾಗ್ರಾಂ ಮೂಲಕ ಫರಾನ್ ಅಖ್ತರ್ಗೆ ಶುಭ ಹಾರೈಸಿದ್ದಾರೆ.
ಫರಾನ್ ಅಖ್ತರ್ ಅವರ ಬಾಲ್ಯದ ಫೋಟೋವೊಂದನ್ನು ಹಂಚಿಕೊಂಡಿರುವ ಜೋಯಾ ಅಖ್ತರ್ "ಬರ್ತ್‌ಡೇ ಬಾಯ್, ಐ (ಲವ್) ಯು ಮೋರ್ ಈಚ್ ಈಯರ್" ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಬಾಲಿವುಡ್ ಸೆಲೆಬ್ರೆಟಿಗಳಾದ ಅಭಿಷೇಕ್ ಬಚ್ಚನ್, ಸೋನಾಲಿ ಬೇಂದ್ರೆ ಮತ್ತು ಫರಾನ್ ಅಖ್ತರ್ ಪತ್ನಿ ಶಿಬಾನಿ ದಾಂಡೇಕರ್ ಸೇರಿದಂತೆ ಅನೇಕರು ಪ್ರತಿಕ್ರಿಯಿಸಿದ್ದಾರೆ. ಪತ್ನಿ ಶಿಬಾನಿ ಅವರು ಫರಾನ್ ಅವರ ಬಾಲ್ಯದ ಚಿತ್ರಕ್ಕೆ "ದಿ ಕ್ಯೂಟೆಸ್ಟ್" ಎಂದು ಕಮೆಂಟ್ ಮಾಡಿದ್ದಾರೆ.
ಜೀವಿತಾವಧಿಯ ಅತ್ಯುತ್ತಮ ನೆನಪುಗಳು: ಇನ್ನು ಅಭಿಮಾನಿಗಳು ಕೂಡ ಕಮೆಂಟ್ ಮಾಡಿ ಶುಭಹಾರೈಸಿದ್ದು, "ಲವ್ ಯು ಫರಾನ್! ನಿಮ್ಮ ಸಂಗೀತ ಮತ್ತು ಚಲನಚಿತ್ರಗಳು ನನ್ನ ಜೀವಿತಾವಧಿಯ ಅತ್ಯುತ್ತಮ ನೆನಪುಗಳನ್ನು ನೀಡಿವೆ. ಪ್ರತಿ ಬಾರಿ ನಾನು ನಿಮ್ಮ ಹಾಡುಗಳನ್ನು ಕೇಳಿದಾಗ ಖುಷಿಯ ಸಮಯಕ್ಕೆ ಜಾರುತ್ತೇನೆ ಎಂದು ಅಭಿಮಾನಿಯೊಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಅಭಿಮಾನಿ, ಹ್ಯಾಪಿ ಬರ್ತಡೇ ಸನ್ಶೈನ್ ಎಂದು ಬರೆದರೆ, ಹುಟ್ಟು ಹಬ್ಬದ ಶುಭಾಶಯಗಳು ಸಾರ್ ನೀವು ಅತ್ಯುತ್ತಮರು ಎಂದು ಇನ್ನೊಬ್ಬ ಅಭಿಮಾನಿ ಕಮೆಂಟ್ ಮಾಡಿದ್ದಾರೆ.
ಚಿತ್ರಕಥೆಗಾರರಾದ ಜಾವೇದ್ ಅಖ್ತರ್ ಮತ್ತು ಹನಿ ಇರಾನಿ ಅವರಿಗೆ ಜನಿಸಿದ ಫರಾನ್ ಅಖ್ತರ್ ಅವರು, 2001 ರಲ್ಲಿ 'ದಿಲ್ ಚಾಹ್ತಾ ಹೈ' ಚಿತ್ರವನ್ನು ನಿರ್ದೇಶನ ಮಾಡುವ ಮೂಲಕ ತಮ್ಮ 26ನೇ ವಯಸ್ಸಿನಲ್ಲಿ ಬರಹಗಾರ, ನಿರ್ದೇಶಕ ಮತ್ತು ನಿರ್ಮಾಪಕರಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. 2008ರಲ್ಲಿ ಫರಾನ್ ಅಖ್ತರ್ 'ರಾಕ್ ಆನ್' ಚಿತ್ರದಲ್ಲಿ ನಟನಾಗಿ ಬಣ್ಣ ಹಚ್ಚುವ ಮೂಕಲ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಇನ್ನು 2011ರಲ್ಲಿ ಬಿಡುಗಡೆಯಾದ 'ಜಿಂದಗಿ ನಾ ಮಿಲೇಗಿ ದೊಬಾರಾ' ಚಿತ್ರ ಅವರಿಗೆ ಅತ್ಯುತ್ತಮ ಪೋಷಕ ನಟ ಸೇರಿದಂತೆ ಎರಡು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ತಂದು ಕೊಟ್ಟಿತು.
2013 ರಲ್ಲಿ ಬಿಡುಗಡೆಯಾದ 'ಭಾಗ್ ಮಿಲ್ಕಾ ಭಾಗ್' ಚಿತ್ರದಲ್ಲಿ ಮಿಲ್ಕಾ ಸಿಂಗ್ ಪಾತ್ರವನ್ನು ಫರಾನ್ ನಿರ್ವಹಿಸಿದ್ದರು. ಬಾಲಿವುಡ್ನ ಬಾದ್ಶಾ ಎಂದೇ ಪ್ರಸಿದ್ಧಿ ಪಡೆದಿರುವ ಶಾರುಖ್ ಖಾನ್ ಅಭಿನಯದ ಡಾನ್ ಮತ್ತು ಡಾನ್ 2 ಚಿತ್ರವನ್ನು ಸಹ ಫರಾನ್ ನಿರ್ದೇಶನ ಮಾಡಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಇನ್ನು 2011ರಲ್ಲಿ ಬಿಡುಗಡೆಗೊಂಡ ಶಾರುಖ್ ಖಾನ್ ಅಭಿನಯದ ಡಾನ್-2 ದಿ ಕಿಂಗ್ ಇಸ್ ಬ್ಯಾಕ್ ಸಿನಿಮಾ ನಿರ್ದೇಶನದ ಬಳಿಕ ಇದೀಗಾ ಫರಾನ್ ಅಖ್ತರ್ ಆಲಿಯಾ ಭಟ್, ಪ್ರಿಯಾಂಕಾ ಚೋಪ್ರಾ ಮತ್ತು ಕತ್ರಿನಾ ಕೈಫ್ ಅಭಿನಯದ ಜೀ ಲೇ ಜರಾ ಎಂಬ ರೋಡ್-ಟ್ರಿಪ್ ನಾಟಕವನ್ನು ನಿರ್ದೇಶಿಸಲು ಸಿದ್ಧರಾಗಿದ್ದಾರೆ. ಫಹಾನ್ ಒಂದು ದಶಕದ ನಂತರ ನಿರ್ದೇಶಕರ ಕುರ್ಚಿಗೆ ಮರಳಿದ್ದಾರೆ.
ಇದನ್ನೂ ಓದಿ:ಹುಟ್ಟುಹಬ್ಬದ ಸಂಭ್ರಮದಲ್ಲಿ ಕೆಜಿಎಫ್ ಸ್ಟಾರ್! ಫೋಟೋಗಳಲ್ಲಿ ನೋಡಿ 'ಯಶ'ಸ್ಸಿನ ಹಾದಿ..