ಕರ್ನಾಟಕ

karnataka

ETV Bharat / bharat

ಒಂದೇ ದೇಹ ಎರಡು ಆತ್ಮದಂತಿದ್ದ ಈ ಸಯಾಮಿ ಸಹೋದರರು ಇನ್ನಿಲ್ಲ.. - ಎರಡು ತಲೆ, ನಾಲ್ಕು ಕೈ ಮತ್ತು ಎರಡು ಕಾಲುಗ

2001ರಲ್ಲಿ ಛತ್ತೀಸ್​ಗಢದ ಬಲೋದಬಜಾರ್ ಜಿಲ್ಲೆಯಲ್ಲಿ ಜನಿಸಿದ್ದ ಏಷ್ಯಾದಲ್ಲೇ ಅತಿ ಅಪರೂಪದ ಸಯಾಮಿ ಸಹೋದರರಾದ ಶಿವನಾಥ್ ಮತ್ತು ಶಿವರಾಂ ಬಾರದ ಲೋಕಕ್ಕೆ ತೆರಳಿದ್ದಾರೆ.

ಶಿವನಾಥ್ ಮತ್ತು ಶಿವರಾಂ
ಶಿವನಾಥ್ ಮತ್ತು ಶಿವರಾಂ

By

Published : Nov 1, 2021, 9:15 AM IST

ಬಲೋದಬಜಾರ್ (ಛತ್ತೀಸ್​ಗಢ): ಶಿವನಾಥ್ ಮತ್ತು ಶಿವರಾಂ, ಈ ಸಯಾಮಿ ಅವಳಿ ಸಹೋದರರು ಒಂದೇ ದೇಹಕ್ಕೆ ಅಂಟಿಕೊಂಡು, ಎರಡು ತಲೆ, ನಾಲ್ಕು ಕೈ ಮತ್ತು ಎರಡು ಕಾಲುಗಳೊಂದಿಗೆ ಜನಿಸಿದ್ದರು. 20 ವರ್ಷಗಳ ಕಾಲ ಖ್ಯಾತಿ ಪಡೆದಿದ್ದ ಇವರು ಇದೀಗ ಬಾರದ ಲೋಕಕ್ಕೆ ತೆರಳಿದ್ದಾರೆ.

2001ರಲ್ಲಿ ಛತ್ತೀಸ್​ಗಢದ ಬಲೋದಬಜಾರ್ ಜಿಲ್ಲೆಯ ಖಂಡಾ ಎಂಬ ಗ್ರಾಮದಲ್ಲಿ ಜನಿಸಿದ್ದ ಇವರನ್ನು ದೇವರ ಅದ್ಭುತ ಸೃಷ್ಟಿ ಎಂದು ಜನರು ಪೂಜಿಸಿದ್ದೂ ಉಂಟು. ಎರಡು ತಲೆ, ನಾಲ್ಕು ಕೈ ಮತ್ತು ಎರಡು ಕಾಲು ಹೊಂದಿರುವ ಇವರು ಏಷ್ಯಾದಲ್ಲೇ ಏಕೈಕ ಸಯಾಮಿ ಅವಳಿ ಮಕ್ಕಳಾಗಿದ್ದಾರೆ. ಪ್ರಾಣಕ್ಕೆ ಅಪಾಯವಿರುವುದರಿಂದ ಇವರಿಬ್ಬರನ್ನೂ ಆಪರೇಷನ್​ ಮಾಡಿ ಬೇರ್ಪಡಿಸಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದರು.

ಶಿವನಾಥ್ ಮತ್ತು ಶಿವರಾಂ

ಹುಟ್ಟಿದಾಗಿನಿಂದಲೇ ಈ ಸಯಾಮಿ ಅವಳಿ ಸಹೋದರರು ಖ್ಯಾತಿ ಗಳಿಸುತ್ತಾ ಬಂದಿದ್ದರು. ವಿದೇಶಗಳಿಂದ ಇವರನ್ನು ನೋಡಲು ಜನರು ಬರುತ್ತಿದ್ದರು. ವಿದ್ಯಾಭ್ಯಾಸದಲ್ಲೂ ಚುರುಕಾಗಿದ್ದ ಇವರ ಪ್ರತಿ ಕೆಲಸದಲ್ಲೂ ಹೊಂದಾಣಿಕೆಯಿತ್ತು. ಇಬ್ಬರೂ ವಿಶೇಷಚೇತನರಿಗೆ ಲಭ್ಯವಿರುವ ಸೈಕಲ್‌ನಲ್ಲಿಯೇ ಶಾಲೆಗೆ ಹೋಗುತ್ತಿದ್ದರು. ಇತ್ತೀಚೆಗಷ್ಟೇ ಈ ರೀತಿಯ ದ್ವಿಚಕ್ರ ವಾಹನ ಖರೀದಿಸಿದ್ದರು. 2018ರಲ್ಲಿ ಈ ಮಕ್ಕಳ ಕುರಿತ ವಿಡಿಯೋವೊಂದನ್ನು ಭಾರತದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್​ ತಮ್ಮ ಟ್ವಿಟರ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದರು. ಆದರೆ ಇದೀಗ ಇವರ ಮರಣ ಸುದ್ದಿ ಕೇಳಿ ಎಲ್ಲರೂ ಶಾಕ್​ ಆಗಿದ್ದಾರೆ.

ಅವಳಿ ಸಹೋದರರು

ಇವರ ಸಾವಿನ ಸುತ್ತ ಅನೇಕ ಅನುಮಾನಗಳು ಮೂಡಿವೆ. ತಮ್ಮ ಮನೆಯಲ್ಲಿ ಇಬ್ಬರೂ ಶವವಾಗಿ ಪತ್ತೆಯಾಗಿದ್ದಾರೆ. ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ, ಶಿವನಾಥ್ ಮತ್ತು ಶಿವರಾಂ ತೀವ್ರ ಜ್ವರದಿಂದ ಬಳಲುತ್ತಿದ್ದರು. ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂದು ಇವರ ತಾಯಿ ಹೇಳಿದ್ದಾರೆ. ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details