ಬಾರ್ಮರ್( ರಾಜಸ್ಥಾನ): ಜಿಲ್ಲೆ ವ್ಯಾಪ್ತಿಯಲ್ಲಿ ಬರುವ ಭುಂಖ ಭಗತ್ ಸಿಂಗ್ ಗ್ರಾಮದ ವ್ಯಕ್ತಿಯೊಬ್ಬರ ಮಗ ಪ್ರೇಮ ವಿವಾಹ ಮಾಡಿಕೊಂಡ ಕಾರಣಕ್ಕೆ ಇಡೀ ಕುಟುಂಬವನ್ನು ಜಾತಿ ಪಂಚಾಯತ್ ಬಹಿಷ್ಕಾರ ಮಾಡಿದೆ. ಜೊತೆಗೆ ಈ ಕುಟುಂಬಕ್ಕೆ 5 ಲಕ್ಷ ರೂ. ದಂಡವನ್ನೂ ವಿಧಿಸಿದೆ.
ಭುಂಖ ಭಗತ್ ಸಿಂಗ್ ಗ್ರಾಮದಲ್ಲಿ ಈ ಘಟನೆ ವರದಿಯಾಗಿದ್ದು, ಜಾತಿ ಪಂಚಾಯಿತಿಯು ಬಹಿಷ್ಕೃತ ಕುಟುಂಬಕ್ಕೆ 5 ಲಕ್ಷ ರೂ. ದಂಡ ಕಟ್ಟುವಂತೆ ಹೇಳಿದ್ದಾರೆ. ಕುಟುಂಬವು ದಂಡ ಕಟ್ಟಲು ನಿರಾಕರಿಸಿದ್ದರಿಂದ , ಈ ಕುಟುಂಬದ ಸದಸ್ಯರು ಊರಿನ ರಸ್ತೆಗಳು ಮತ್ತು ಸಾರ್ವಜನಿಕರು ಬಳಸುವ ನಳ, ಕೆರೆ, ಮುಂತಾದವುಗಳ ನೀರನ್ನು ಬಳಸುವುದನ್ನು ನಿಷೇಧಿಸಿದ್ದಾರೆ.