ಕರ್ನಾಟಕ

karnataka

ETV Bharat / bharat

ಬಾಳ ಸಂಗಾತಿ, ಹೆತ್ತ ತಾಯಿ, ಮುದ್ದಾದ ಮಕ್ಕಳನ್ನು ಬರ್ಬರವಾಗಿ ಕೊಂದ ಹಂತಕ! - ತಾಯಿ ಹೆಂಡ್ತಿ ಮಕ್ಕಳನ್ನು ಕೊಂದ ಕೊಲೆಗಾರ

ಉತ್ತರಾಖಂಡ್​ನಲ್ಲಿ ಭೀಕರ ಹತ್ಯಾಕಾಂಡ ನಡೆದಿರುವುದು ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ತನ್ನ ಕುಟುಂಬದ ಸದಸ್ಯರನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಡೆಹ್ರಾಡೂನ್​ ಜಿಲ್ಲೆಯಲ್ಲಿ ನಡೆದಿದೆ.

Family members killed by murderer  Man killed his family members in Uttarakhand  Man killed to wife mother children  ಮುದ್ದಾದ ಮಕ್ಕಳನ್ನು ಬರ್ಬರವಾಗಿ ಕೊಂದ ಹಂತಕ  ಉತ್ತರಾಖಂಡ್​ನಲ್ಲಿ ಭೀಕರ ಹತ್ಯಾಕಾಂಡ  ಕುಟುಂಬಸ್ಥರನ್ನು ಬರ್ಬರವಾಗಿ ಕೊಂದ ವ್ಯಕ್ತಿ  ಕೊಲೆಗಾರನ ಕೈಯಿಂದ ಬದುಕಿದ ಮಗಳು  ತಾಯಿ ಹೆಂಡ್ತಿ ಮಕ್ಕಳನ್ನು ಕೊಂದ ಕೊಲೆಗಾರ  ಉತ್ತರಾಖಂಡ್​ನಲ್ಲಿ ಭೀಕರ ಕೊಲೆ
ಮುದ್ದಾದ ಮಕ್ಕಳನ್ನು ಬರ್ಬರವಾಗಿ ಕೊಂದ ಹಂತಕ

By

Published : Aug 29, 2022, 10:47 AM IST

ಡೆಹ್ರಾಡೂನ್, ಉತ್ತರಾಖಂಡ್​ : ವ್ಯಕ್ತಿಯೊಬ್ಬ ತನ್ನ ಕುಟುಂಬದ ಐವರು ಸದಸ್ಯರನ್ನು ಅಮಾನುಷವಾಗಿ ಕೊಲೆ ಮಾಡಿದ್ದಾನೆ. ತಾಯಿ ಮತ್ತು ಹೆಂಡ್ತಿ ಜೊತೆ ಮೂವರು ಮಕ್ಕಳನ್ನು ಭೀಕರವಾಗಿ ಕೊಂದ ಕ್ರೂರಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಈ ಭೀಕರ ಹತ್ಯಾಕಾಂಡ ಜಿಲ್ಲೆಯ ನಾಗಘೇರ್ ಗ್ರಾಮದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

ಕುಟುಂಬಸ್ಥರನ್ನು ಬರ್ಬರವಾಗಿ ಕೊಂದ ವ್ಯಕ್ತಿ:ನಾಗಘೇರ್ ಗ್ರಾಮದಲ್ಲಿ ಐವರನ್ನು ಒಟ್ಟಿಗೆ ಹತ್ಯೆ ಮಾಡಿರುವ ಘಟನೆಯಿಂದ ಸಂಚಲನ ಮೂಡಿದೆ. ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಇಷ್ಟೊಂದು ಕ್ರೂರ ಕೊಲೆಗೆ ಕಾರಣ ಏನು ಎಂಬುದು ಇನ್ನು ತಿಳಿದು ಬಂದಿಲ್ಲ. ಕೊಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮನೆಯ ರೂಮ್​ಗಳು ರಕ್ತದಿಂದ ತುಂಬಿದೆ. ಅಲ್ಲಿನ ದೃಶ್ಯವನ್ನು ನೋಡಿದ ಸ್ಥಳೀಯರಿಗೆ ಭಯ ಮೂಡಿದೆ.

ಕೊಲೆಗಾರನ ಕೈಯಿಂದ ಬದುಕಿದ ಮಗಳು: ಐವರನ್ನು ಭೀಕರವಾಗಿ ಕೊಲೆ ಮಾಡಿದವನ ಹೆಸರು ಮಹೇಶ್ ಎಂದು ಹೇಳಲಾಗುತ್ತಿದೆ. ಮಹೇಶ್ ಉತ್ತರ ಪ್ರದೇಶದ ಬಂದಾ ಜಿಲ್ಲೆಯ ಅರಾರಿಯಾ ಪ್ರದೇಶದ ನಿವಾಸಿ. ಈ ಆರೋಪಿ ರಾಣಿಪೋಖಾರಿಯ ಶಾಂತಿನಗರದಲ್ಲಿ ವಾಸಿಸುತ್ತಿದ್ದ. ಈ ವ್ಯಕ್ತಿಗೆ ನಾಲ್ಕು ಮಕ್ಕಳಿದ್ದರು.

ಆದರೆ, ಏನಾಯ್ತೋ ಏನೋ.. ಏಳು ಜನ್ಮಗಳ ಕಾಲ ಕೂಡಿ ಬಾಳುತ್ತೇನೆ ಎಂದು ಹೇಳಿ ಮದುವೆ ಮಾಡಿ ತಂದ ಜೀವನ ಸಂಗಾತಿಯನ್ನೂ ಕೊಂದು ಹಾಕಿದ್ದಾನೆ. ಇದಲ್ಲದೆ, ಜನ್ಮ ನೀಡಿದ ತಾಯಿಯನ್ನು ಸಹ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಅಷ್ಟೇ ಅಲ್ಲ ತನ್ನ ಮುದ್ದಾದ ಮಕ್ಕಳಲ್ಲಿ ಮೂವರನ್ನು ಅಮಾನುಷವಾಗಿ ಸಾಯಿಸಿದ್ದಾನೆ.

ಆದರೆ ಇವರೊಬ್ಬರ ಮಗಳು ಚಿಕ್ಕಮ್ಮನ ಬಳಿಗೆ ಹೋಗಿದ್ದರಿಂದ ಬದುಕುಳಿದ್ದಾಳೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.

ಓದಿ:70 ಕೊಲೆ, 35ಕ್ಕೂ ಹೆಚ್ಚು ಕಳ್ಳತನ ಕೇಸ್ ಪತ್ತೆ ಹಚ್ಚಿದ್ದ ಲೇಡಿ ಸಿಂಗಂ ಶ್ವಾನ ತುಂಗಾ ಸಾವು


ABOUT THE AUTHOR

...view details