ನವದೆಹಲಿ: ಬ್ರಿಟನ್ನ ಪ್ರಧಾನಿ ಚುನಾವಣೆಯಲ್ಲಿ ಪ್ರಧಾನಿ ಹುದ್ದೆಗೆ ಸ್ಪರ್ಧೆಯಲ್ಲಿ ಇನ್ಫೋಸಿಸ್ನ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್ 'ಕುಟುಂಬವೇ ನನಗೆಲ್ಲ’ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಬ್ರಿಟನ್ನ ಮುಂದಿನ ಪ್ರಧಾನಿ ಮತ್ತು ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ನಾಯಕರಾಗುವ ರೇಸ್ನಲ್ಲಿ ಮುಂಚೂಣಿಯಲ್ಲಿರುವ ಬ್ರಿಟನ್ನ ಮಾಜಿ ಹಣಕಾಸು ಸಚಿವ ಹಾಗು ಭಾರತೀಯ ಮೂಲದ ರಿಷಿ ಸುನಕ್ ನಿನ್ನೆ ಬೃಹತ್ ರ್ಯಾಲಿ ನಡೆಸಿದರು. ಈ ವೇಳೆ ಮೊದಲ ಬಾರಿಗೆ ಪತಿಯ ಪರ ಪ್ರಚಾರದಲ್ಲಿ ಪತ್ನಿ ಅಕ್ಷತಾ ಮೂರ್ತಿ ಹಾಗು ಪುತ್ರಿಯರಾದ ಕೃಷ್ಣ ಮತ್ತು ಅನುಷ್ಕಾ ಸಾಥ್ ನೀಡಿದರು.
ಮಾಜಿ ಪ್ರಧಾನಿ ಮಾರ್ಗರೇಟ್ ಥ್ಯಾಚರ್ ಅವರ ಜನ್ಮಸ್ಥಳವಾದ ಗ್ರಾಥಂನಲ್ಲಿ ನಿನ್ನೆ ನಡೆದ ಕಾರ್ಯಕ್ರಮದ ಫೋಟೋಗಳನ್ನು ತಮ್ಮ ಇನ್ಸ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ರಿಷಿ ಸುನಕ್, 'ನನಗೆ ಎಲ್ಲದೂ ಕುಟುಂಬವೇ, ಚುನಾವಣಾ ಪ್ರಚಾರದಲ್ಲಿ ನನ್ನ ಕುಟುಂಬ ಬೆಂಬಲ ನೀಡುತ್ತಿರುವುದಕ್ಕೆ ತುಂಬಾ ಕೃತಜ್ಞನಾಗಿದ್ದೇನೆ' ಎಂದು ಬರೆದುಕೊಂಡಿದ್ದಾರೆ.
ರಿಷಿ ಸುನಕ್ ಇನ್ಸ್ಸ್ಟಾಗ್ರಾಮ್ ಪೋಸ್ಟ್ ಬ್ರಿಟನ್ನ ಪ್ರಧಾನಿ ಆಯ್ಕೆಯ 5ನೇ ಸುತ್ತಿನ ಮತದಾನ ನಡೆದಿದ್ದು, ಸುನಕ್ ಎಲ್ಲರಿಗಿಂತ ಹೆಚ್ಚು ಮತ ಪಡೆದುಕೊಂಡಿದ್ದಾರೆ. ಸೆಪ್ಟೆಂಬರ್ 5 ರಂದು ಯುಕೆ ಮುಂದಿನ ಪ್ರಧಾನಮಂತ್ರಿಯ ಹೆಸರು ಘೋಷಣೆ ಆಗಲಿದೆ.
ಇದನ್ನೂ ಓದಿ:ಪ್ರಧಾನಿಯಾದರೆ ಚೀನಾ ವಿರುದ್ಧ ಕಠಿಣ ಕ್ರಮ: ರಿಷಿ ಸುನಕ್