ಕರ್ನಾಟಕ

karnataka

ETV Bharat / bharat

ಕೌಟುಂಬಿಕ ಕಲಹ: ಬಾವಿಗೆ ಹಾರಿ ಸಹೋದರಿಯರ ಸಾವು - ಬಾವಿಗೆ ಹಾರಿ ಸಾವಿಗೀಡಾದ ಘಟನೆ

24 ವರ್ಷದ ಶಿವಕುಮಾರಿ ಮತ್ತು 18 ವರ್ಷದ ಚಂದ್ರಕಾಂತಿ ಹೆಸರಿನ ಸಹೋದರಿಯರು ಮಂಗಳವಾರ ರಾತ್ರಿ ಬಾವಿಯೊಳಗೆ ಶವವಾಗಿ ಪತ್ತೆಯಾಗಿದ್ದಾರೆ ಎಂದು ಮೋಹನ್‌ಗಂಜ್ ಎಸ್‌ಎಚ್‌ಒ ಜ್ಞಾನಚಂದ್ ಶುಕ್ಲಾ ತಿಳಿಸಿದ್ದಾರೆ.

ಕೌಟುಂಬಿಕ ಕಲಹ: ಬಾವಿಗೆ ಹಾರಿ ಸಹೋದರಿಯರ ಸಾವು
Family Feud: Death of sisters by jumping into a well

By

Published : Dec 7, 2022, 4:12 PM IST

ಅಮೇಥಿ (ಉತ್ತರ ಪ್ರದೇಶ): ಇಲ್ಲಿನ ಮೋಹನ್‌ಗಂಜ್ ಪ್ರದೇಶದಲ್ಲಿ ಇಬ್ಬರು ಸಹೋದರಿಯರು ಬಾವಿಗೆ ಹಾರಿ ಸಾವಿಗೀಡಾದ ಘಟನೆ ನಡೆದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. 24 ವರ್ಷದ ಶಿವಕುಮಾರಿ ಮತ್ತು 18 ವರ್ಷದ ಚಂದ್ರಕಾಂತಿ ಹೆಸರಿನ ಸಹೋದರಿಯರು ಮಂಗಳವಾರ ರಾತ್ರಿ ಬಾವಿಯೊಳಗೆ ಶವವಾಗಿ ಪತ್ತೆಯಾಗಿದ್ದಾರೆ ಎಂದು ಮೋಹನ್‌ಗಂಜ್ ಎಸ್‌ಎಚ್‌ಒ ಜ್ಞಾನಚಂದ್ ಶುಕ್ಲಾ ತಿಳಿಸಿದ್ದಾರೆ.

ಸಹೋದರ ಮಂಚಾರಾಮ್ ಈತ ನಾಪತ್ತೆಯಾಗಿರುವ ವಿಷಯದಲ್ಲಿ ಶಿವಕುಮಾರಿ ಮಂಗಳವಾರ ರಾತ್ರಿ ತನ್ನ ತಂದೆ ಶಿವ ದರ್ಶನ್ ಮೌರ್ಯ ಅವರೊಂದಿಗೆ ಜಗಳವಾಡಿದ್ದಳು. ಅದರ ನಂತರ ಹೊರಗೆ ಹೋಗಿ ಬಾವಿಗೆ ಹಾರಿದ್ದಳು. ಶಿವಕುಮಾರಿಯನ್ನು ರಕ್ಷಿಸಲು ಆಕೆಯ ಸಹೋದರಿ ಚಂದ್ರಕಾಂತಿ ಕೂಡ ಬಾವಿಗೆ ಹಾರಿದಳು. ಆದರೆ ಆಕೆ ಕೂಡ ನೀರಲ್ಲಿ ಮುಳುಗಿ ಪ್ರಾಣ ಬಿಟ್ಟಳು ಎಂದು ಪೊಲೀಸರು ತಿಳಿಸಿದ್ದಾರೆ.

ಸಹೋದರಿಯರ ಮೃತದೇಹಗಳನ್ನು ಬಾವಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಕಿರುಕುಳಕ್ಕೆ ಬೇಸತ್ತ ಮಹಿಳೆ: ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ

ABOUT THE AUTHOR

...view details