ಹೈದರಾಬಾದ್ : ನಕಲಿ ಕಂಪನಿ ಹೆಸರಲ್ಲಿ ಲಕ್ಷ ಹೂಡಿಕೆ ಮಾಡಿ ಕೋಟಿ ಹಣ ಪಡೆಯುವ ಆಮಿಷ ಒಡ್ಡಿ ಜನರಿಗೆ ಮೋಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. 1 ಲಕ್ಷ ಹೂಡಿಕೆ ಮಾಡಿ , 240 ದಿನಗಳಲ್ಲಿ 4 ಕೋಟಿ ರೂಪಾಯಿ ಪಡೆಯುತ್ತೀರಿ ಎಂದು ವಂಚನೆ ಮಾಡಿದ ಆರೋಪದಲ್ಲಿ,ಕಂಪನಿ ಮಾಲೀಕ ಮುಕ್ತಿರಾಜ್ ವಿರುದ್ಧ ನಾಂಪಲ್ಲಿ ಸಿಸಿಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ಪ್ರಮುಖ ಆರೋಪಿ ಮುಕ್ತಿ ರಾಜ್ ಮಲ್ಟಿ ಜೆಟ್ ಟ್ರೇಡಿಂಗ್ ಹೆಸರಿನ ನಕಲಿ ಸಂಸ್ಥೆಯ ಮೂಲಕ ಮುಂಬೈನಲ್ಲಿ ವ್ಯಾಪಾರ ಮಾಡುವ ನೆಪದಲ್ಲಿ ಸುಮಾರು 9000 ಜನರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದಾನೆ ಎಂದು ತಿಳಿದು ಬಂದಿದೆ.
ಜೈಲಿನ ಅಧಿಕಾರಿಗಳಿಗೆ ಮೋಸ :ಇಲ್ಲಿನ ಹಬ್ಸಿಗುಡದಲ್ಲಿ ನಕಲಿ ಹೂಡಿಕೆ ಮತ್ತು ವ್ಯವಹಾರದ ಕಂಪನಿ ನಡೆಸುತ್ತಿದ್ದ ಆರೋಪಿ ರಾಜ್ಯದ ಕಾರಾಗೃಹ ಇಲಾಖೆಯ ಸುಮಾರು 200ಕ್ಕೂ ಅಧಿಕ ಉದ್ಯೋಗಿಗಳಿಗೆ ಸುಮಾರು 2 ಕೋಟಿ ರೂ ವಂಚಿಸಿದ್ದಾನೆ ಎಂದು ತಿಳಿದು ಬಂದಿದೆ. ಅದಿಲಾಬಾದ್, ಖಮ್ಮಂ,ಮೆಹಬೂಬ್‌ನಗರ ಮತ್ತು ಹೈದರಾಬಾದ್‌ನ ಜೈಲು ಅಧಿಕಾರಿಗಳು ಈತನಿಗೆ ಹಣ ಪಾವತಿಸಿ ಮೋಸ ಹೋಗಿದ್ದಾರೆ.