ಅಯೋಧ್ಯೆ (ಉ.ಪ್ರ):ಇಲ್ಲಿನ ಸಹದತ್ಗಂಜ್ ಪ್ರಾಂತ್ಯದ ಹನುಮಾನ್ ದೇವಾಲಯದಲ್ಲಿ ಬಾಂಬ್ ಇಡಲಾಗಿದೆ ಎಂದು ಕರೆ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ಪೊಲೀಸರು ಕೆಲವೇ ಗಂಟೆಗಳಲ್ಲಿ ಹೆಡೆಮುರಿ ಕಟ್ಟಿದ್ದಾರೆ. ಆತನ ಬಂಧನದ ಬಳಿಕ ಇದು ಹುಸಿ ಬಾಂಬ್ ಕರೆ ಅನ್ನೋದು ಪೊಲೀಸರಿಗೆ ತಿಳಿದಿದೆ.
ಗುರು ಪೂರ್ಣಿಮೆ ಸಂಭ್ರಮದಲ್ಲಿದ್ದ ಭಕ್ತಾದಿಗಳಿಗೆ ಹುಸಿಬಾಂಬ್ ಕರೆ ಆತಂಕಕ್ಕೆ ದೂಡಿತ್ತು. ದೇವಾಲಯದೊಳಗೆ ಬಾಂಬ್ ಇಡಲಾಗಿದೆ ಎಂದು ಅಪರಿಚಿತನೋರ್ವ ಪೊಲೀಸರಿಗೆ ಕರೆ ಮಾಡಿದ್ದ, ಶನಿವಾರ ಗುರು ಪೂರ್ಣಿಮೆ ಹಿನ್ನೆಲೆ ದೇವಾಲಯದಲ್ಲಿ ಸಹಸ್ರಾರು ಭಕ್ತರು ನೆರೆದಿದ್ದರು.
ಈ ಹಿನ್ನೆಲೆ ತಕ್ಷಣವೇ ಸ್ಥಳಕ್ಕಾಗಮಿಸಿದ್ದ ಎಸ್ಎಸ್ಪಿ ಶೈಲೇಂದ್ರ ಪಾಂಡೆ ನೇತೃತ್ವದ ತಂಡ ಬಾಂಬ್ಗಾಗಿ ತೀವ್ರ ಹುಡುಕಾಟ ನಡೆಸಿದ್ದರು. ಅಲ್ಲದೆ ದೇವಾಲಯದ ವ್ಯಾಪ್ತಿಯಿಂದ ಭಕ್ತರನ್ನು ತೆರವುಗೊಳಿಸಿ ಬಾಂಬ್ ನಿಷ್ಕ್ರಿಯ ದಳ ಶೋಧ ನಡೆಸಿತ್ತು.