ಹೈದರಾಬಾದ್ (ತೆಲಂಗಾಣ): ಸಿಬಿಐ ಹೆಸರಲ್ಲಿ ನಕಲಿ ಅಧಿಕಾರಿಗಳ ದಾಳಿ ನಡೆಸಿ ಅರ್ಧ ಗಂಟೆಯೊಳಗೆ 1,340 ಗ್ರಾಂ ಚಿನ್ನಾಭರಣ, 50 ಸಾವಿರ ರೂಪಾಯಿ ನಗದು ದೋಚಿ ಪರಾರಿಯಾಗಿರುವ ಘಟನೆ ತೆಲಂಗಾಣದ ಹೈದರಾಬಾದ್ನ ಗಚ್ಚಿಬೌಲಿ ಪ್ರದೇಶದಲ್ಲಿ ನಡೆದಿದೆ.
ಗಚ್ಚಿಬೌಲಿಯಲ್ಲಿರುವ ಆರೆಂಜ್ ಕೌಂಟಿ ಅಪಾರ್ಟ್ಮೆಂಟ್ನಲ್ಲಿ ಭುವನಾ ತೇಜ ಇನ್ಫ್ರಾ ಡೆವಲಪರ್ಸ್ ಮಾಲೀಕ ಸುಬ್ರಮಣ್ಯಂ ಅವರು ವಾಸಿಸುವ ಫ್ಲಾಟ್ ಸಂಖ್ಯೆ 110ಕ್ಕೆ ನಕಲಿ ಸಿಬಿಐ ಅಧಿಕಾರಿಗಳು ನುಗ್ಗಿದ್ದಾರೆ. ಮೊದಲು ಸುಬ್ರಮಣ್ಯಂ ಹಾಗೂ ಅವರ ಕುಟುಂಬ ಸದಸ್ಯರ ಬಳಿ ಇದ್ದ ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡ ಕಿರಾತಕರು, ಚಿನ್ನಾಭರಣ, ನಗದು ಲೂಟಿ ಮಾಡಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.