ಕರ್ನಾಟಕ

karnataka

ETV Bharat / bharat

ಭಾರತ್ ಬಯೋಟೆಕ್​ನ ಬಿಎಸ್‌ಎಲ್ -3 ರಲ್ಲಿ ಸಿದ್ಧವಾಗ್ತಿದೆ 'ಕೋವ್ಯಾಕ್ಸಿನ್' - ಭಾರತ್ ಬಯೋಟೆ ಕೋವಿಡ್​ ಲಸಿಕೆ ತಯಾರಿ

ಹೈದರಾಬಾದ್‌ನ ಜೀನೋಮ್ ವ್ಯಾಲಿಯಲ್ಲಿರುವ ಭಾರತ್ ಬಯೋಟೆಕ್‌ನ ಬಿಎಸ್‌ಎಲ್ -3 (ಬಯೋ-ಸೇಫ್ಟಿ ಲೆವೆಲ್ 3) ಹೈ ಕಂಟೈನ್‌ಮೆಂಟ್ ಸೌಲಭ್ಯದಲ್ಲಿ 'ಕೋವ್ಯಾಕ್ಸಿನ್' ಲಸಿಕೆ ಅಭಿವೃದ್ಧಿಪಡಿಸಿ, ತಯಾರಿಸಲಾಗುತ್ತಿದೆ.

All about India's first indigenous COVID-19 Vaccine
ಭಾರತ್ ಬಯೋಟೆಕ್​ನಲ್ಲಿ ಕೋವ್ಯಾಕ್ಸಿನ್ ತಯಾರಿ

By

Published : Nov 29, 2020, 10:20 AM IST

ಹೈದರಾಬಾದ್ :ಭಾರತದ ಸ್ಥಳೀಯ ಕೋವಿಡ್ -19 ಲಸಿಕೆ 'ಕೋವ್ಯಾಕ್ಸಿನ್' (COVAXINTM) ಅನ್ನು, ಭಾರತ್ ಬಯೋಟೆಕ್, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮತ್ತು ನ್ಯಾಷನಲ್ ಇನ್ಸ್​ಟ್ಯೂಟ್ ಆಫ್ ವೈರಾಲಜಿ (ಎನ್ಐವಿ) ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ.

ಕೋವ್ಯಾಕ್ಸಿನ್​ ಲಸಿಕೆಯನ್ನು ಭಾರತ್ ಬಯೋಟೆಕ್‌ನ ಬಿಎಸ್‌ಎಲ್ -3 (ಬಯೋ-ಸೇಫ್ಟಿ ಲೆವೆಲ್- 3) ಉನ್ನತ ಮಟ್ಟದ ಕಂಟೈನ್​ಮೆಂಟ್​ನಲ್ಲಿ ತಯಾರಿಸಲಾಗುತ್ತಿದೆ. ಕೋವ್ಯಾಕ್ಸಿನ್​ನ ಹಂತ 1 ಮತ್ತು 2 ರ ಕ್ಲಿನಿಕಲ್ ಟ್ರಯಲ್​ ಮಧ್ಯಂತರ ಪರೀಕ್ಷೆ ಯಶಸ್ವಿಯಾಗಿ ಪೂರ್ಣಗೊಂಡ ಬಳಿಕ, ದೇಶಾದ್ಯಂತ 25ಕ್ಕೂ ಹೆಚ್ಚು ಕೇಂದ್ರಗಳಲ್ಲಿ 26 ಸಾವಿರ ಸ್ವಯಂ ಸೇವಕರ ಮೇಲೆ 3ನೇ ಹಂತದ ಕ್ಲಿನಿಕಲ್ ಟ್ರಯಲ್​ ನಡೆಸಲು ಭಾರತ್​ ಬಯೋಟೆಕ್​, ಡಿಸಿಜಿಐ ಅನುಮೋದನೆ ಪಡೆದುಕೊಂಡಿದೆ.

ಭಾರತೀಯ ಲಸಿಕೆ ತಯಾರಿಕ ಕಂಪನಿಗಳು ಮತ್ತು ಸಹಯೋಗ

ಇದನ್ನೂ ಓದಿ: ಕೋವಾಕ್ಸಿನ್​ನ ಮೂರನೇ ಹಂತದ ಮಾನವ ಪ್ರಯೋಗ ಆರಂಭ

ನ್ಯಾಷನಲ್ ಇನ್ಸ್​ಟ್ಯೂಟ್ ಆಫ್ ವೈರಾಲಜಿ ಸಹಯೋಗದೊಂದಿಗೆ ಭಾರತ್​ ಬಯೋಟೆಕ್​ ಲಿಮಿಟೆಡ್​ ಕೋವ್ಯಾಕ್ಸಿನ್ ಲಸಿಕೆ ಅಭಿವೃದ್ಧಿಪಡಿಸಿದೆ. SARS-CoV-2 ಸ್ಟ್ರೈನ್ ಅನ್ನು ಪುಣೆಯ ಎನ್ಐವಿಯಲ್ಲಿ ಪ್ರತ್ಯೇಕಿಸಿ ಭಾರತ್ ಬಯೋಟೆಕ್​ಗೆ ವರ್ಗಾಯಿಸಲಾಗಿದೆ. ಹೈದರಾಬಾದ್‌ನ ಜೀನೋಮ್ ವ್ಯಾಲಿಯಲ್ಲಿರುವ ಭಾರತ್ ಬಯೋಟೆಕ್‌ನ ಬಿಎಸ್‌ಎಲ್ -3 (ಬಯೋ-ಸೇಫ್ಟಿ ಲೆವೆಲ್ 3) ಹೈ ಕಂಟೈನ್‌ಮೆಂಟ್ ಸೌಲಭ್ಯದಲ್ಲಿ ಲಸಿಕೆ ಅಭಿವೃದ್ಧಿಪಡಿಸಿ, ತಯಾರಿಸಲಾಗುತ್ತಿದೆ. ಭಾರತ್ ಬಯೋಟೆಕ್, ಬಿಎಸ್ಎಲ್ 3 (ಬಯೋ-ಸೇಫ್ಟಿ ಲೆವೆಲ್- 3) ಉತ್ಪಾದನಾ ಸೌಲಭ್ಯವನ್ನು ಹೊಂದಿರುವ ವಿಶ್ವದ ಏಕೈಕ ಲಸಿಕೆ ಕಂಪನಿಯಾಗಿದೆ.

ABOUT THE AUTHOR

...view details