ಹೈದರಾಬಾದ್ (ತೆಲಂಗಾಣ):ಶವ ಸಂಭೋಗವನ್ನು ತಡೆಯಲು ಪಾಕಿಸ್ತಾನದಲ್ಲಿ ಸಮಾಧಿಗಳಿಗೆ ಸರಳುಗಳನ್ನು ಬಳಸಿ ಬೀಗ ಹಾಕಲಾಗುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರವೊಂದು ಭಾರೀ ವೈರಲ್ ಆಗಿತ್ತು. ಆದರೆ, ಅದು ಪಾಕಿಸ್ತಾನದ್ದಲ್ಲ, ತೆಲಂಗಾಣದ ಹೈದರಾಬಾದ್‌ನಲ್ಲಿರುವ ಸ್ಮಶಾನದ ಚಿತ್ರವಾಗಿದೆ.
ಮಾಧ್ಯಮಗಳಲ್ಲಿ ಈ ಚಿತ್ರ ಬಳಸಿ ಪಾಕಿಸ್ತಾನದಲ್ಲಿ ಮೃತಪಟ್ಟ ಹೆಣ್ಣುಮಕ್ಕಳನ್ನು ಸಮಾಧಿ ಮಾಡಿದ ಬಳಿಕ ಅತ್ಯಾಚಾರ ಮಾಡಲಾಗುತ್ತಿದೆ. ಈ ಪೈಶಾಚಿಕ ಕೃತ್ಯವನ್ನು ತಡೆಯಲು ಅಲ್ಲಿನ ಪೋಷಕರು ಸರಳುಗಳನ್ನು ಜೋಡಿಸಿ ಬೀಗ ಹಾಕುತ್ತಿದ್ದಾರೆ ಎಂದು ವರದಿಯಾಗಿತ್ತು. ಇದನ್ನು ಆ ದೇಶದ ಮಾಜಿ ಧರ್ಮ ಪ್ರಚಾರಕರೊಬ್ಬರು ಚಿತ್ರದ ಸಮೇತ ಟ್ವೀಟ್ ಮಾಡಿ, ಪಾಕಿಸ್ತಾನದಲ್ಲಿ ಸಮಾಧಿಯಾದ ಹೆಣ್ಣುಮಕ್ಕಳ ಶವಗಳನ್ನು ಸಂಭೋಗಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಬರೆದುಕೊಂಡಿದ್ದರು.
ಚಿತ್ರದಲ್ಲಿರುವಂತೆ, ಸರಳುಗಳಿಂದ ಮಾಡಿದ ಬಾಗಿಲನ್ನು ಸಮಾಧಿಗೆ ಹೊಂದಿಕೆಯಾಗುವಂತೆ ಜೋಡಿಸಲಾಗಿದೆ. ಅದಕ್ಕೆ ಬೀಗವನ್ನೂ ಜಡಿಯಲಾಗಿದೆ. ಪಾಕಿಸ್ತಾನಿ ಪೋಷಕರು ತಮ್ಮ ಹೆಣ್ಣುಮಕ್ಕಳ ಅವಶೇಷಗಳನ್ನು ರಕ್ಷಿಸಲು ಈ ವಿಧಾನವನ್ನು ಬಳಸುತ್ತಾರೆ ಎಂದು ಶೀರ್ಷಿಕೆ ನೀಡಲಾಗಿದೆ.
ಈ ಚಿತ್ರ ಹೈದರಾಬಾದ್ನದ್ದು!:ಆದರೆ, ಸಮಾಧಿಗೆ ಬೀಗ ಹಾಕಲಾದ ಚಿತ್ರ ಪಾಕಿಸ್ತಾನದಲ್ಲಿ ಬಳಸಲಾಗಿದೆ ಎಂಬುದು ಸುಳ್ಳು. ಅದು ಮೂಲತಃ ಹೈದರಾಬಾದ್‌ನದು ಎಂಬುದು ಈಗ ಬೆಳಕಿಗೆ ಬಂದಿದೆ. ಇದಾದ ಬಳಿಕ ಪಾಕ್ನ ಧರ್ಮ ಪ್ರಚಾರಕ ತನ್ನ ಹೇಳಿಕೆಯ ಟ್ವೀಟ್ ಅನ್ನು ಅಳಿಸಿ ಹಾಕಿದ್ದಾರೆ.