ನವದೆಹಲಿ: ಪ್ರಪಂಚದಲ್ಲಿ ಅತಿ ಹೆಚ್ಚು ಬಳಕೆಗೊಳಪಡುವ ವಾಟ್ಸ್ಆ್ಯಪ್,ಇನ್ಸ್ಟಾಗ್ರಾಂ ಹಾಗೂ ಫೇಸ್ಬುಕ್ ಹಾಗೂ ಮೆಸೆಂಜರ್ ಇಂದು ಸಂಜೆ ಕ್ರಶ್ ಆಗಿದ್ದು, ಅನೇಕ ದೇಶಗಳಲ್ಲಿ ಬಳಕೆ ವೇಳೆ ಸಮಸ್ಯೆ ಉಂಟಾಗಿದೆ.
ಸೋಷಿಯಲ್ ಮೀಡಿಯಾ ಬಳಕೆ ಮಾಡುತ್ತಿದ್ದ ಸಂದರ್ಭದಲ್ಲಿ ಅನೇಕ ಜನರು ತೊಂದರೆಗೊಳಗಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ತಾಂತ್ರಿಕ ಸಮಸ್ಯೆಯಿಂದಾಗಿ ಈ ತೊಂದರೆ ಕಾಣಿಸಿಕೊಂಡಿದ್ದು, ಇಂದು ಸಂಜೆಯಿಂದಲೇ ಈ ಸಮಸ್ಯೆ ಉಂಟಾಗಿದೆ.
ಫೇಸ್ಬುಕ್, ಇನ್ಸ್ಸ್ಟಾ ಹಾಗೂ ವ್ಯಾಟ್ಸ್ಆ್ಯಪ್ ಓಪನ್ ಮಾಡಿದ ಸಂದರ್ಭದಲ್ಲಿ ಕ್ಷಮಿಸಿ, ಏನೋ ತಪ್ಪಾಗಿದೆ ಆದಷ್ಟು ಬೇಗ ಈ ಸಮಸ್ಯೆ ಬಗೆಹರಿಸಲಿದ್ದೇವೆ ಎಂಬ ಸಂದೇಶ ಕಾಣಿಸಿಕೊಂಡಿದೆ.
ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಫೇಸ್ಬುಕ್ ನಮ್ಮ ಆ್ಯಪ್ ಹಾಗೂ ಉತ್ಪನ್ನಗಳ ಬಳಕೆಯಲ್ಲಿ ಗ್ರಾಹಕರು ಸಮಸ್ಯೆ ಅನುಭವಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಸೇವೆಯನ್ನ ಆದಷ್ಟು ಬೇಗ ಸಹಜ ಸ್ಥಿತಿಗೆ ತರಲು ನಾವು ಪ್ರಯತ್ನಿಸುತ್ತೇವೆ. ಹಾಗೂ ಬಳಕೆದಾರರಿಗೆ ಆಗಿರುವ ಸಮಸ್ಯೆಗೆ ನಾವು ಕ್ಷಮೆ ಕೇಳುತ್ತೇವೆ ಎಂದು ಹೇಳಿಕೊಂಡಿದೆ.
ಭಾರತದಲ್ಲಿ ಅತಿ ಹೆಚ್ಚಿನ ಜನರು ಸೋಶಿಯಲ್ ಮೀಡಿಯಾ ಬಳಕೆ ಮಾಡ್ತಿದ್ದು, ಪ್ರಮುಖವಾಗಿ ಫೇಸ್ಬುಕ್, ಟ್ವಿಟರ್, ಇನ್ಸ್ಸ್ಟಾಗ್ರಾಂ ಹಾಗೂ ವಾಟ್ಸಾಪ್ನಲ್ಲಿ ಅತಿ ಹೆಚ್ಚಿನ ಜನರು ಸಕ್ರಿಯರಾಗಿರುತ್ತಾರೆ. ಕಳೆದ ಕೆಲ ದಿನಗಳ ಹಿಂದೆ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ರಿಲೀಸ್ ಮಾಡಿದ್ದು, ಇದೀಗ ಸಾಮಾಜಿಕ ಮಾಧ್ಯಮ ವೇದಿಕೆಗಳಾದ ಫೇಸ್ಬುಕ್, ಇನ್ಸ್ಸ್ಟಾಗ್ರಾಂ ಹಾಗೂ ಟ್ವಿಟರ್ ಹೊಸ ಮಧ್ಯವರ್ತಿ ಮಾರ್ಗಸೂಚಿಗಳನ್ನು ಅನುಸರಿಸುತ್ತಿದೆಯಾ ಎಂದು ಪರಿಶೀಲನೆ ಮಾಡಲು ಮುಂದಾಗಿದೆ. ಹೀಗಾಗಿ ತಾಂತ್ರಿಕ ಕಾರಣದಿಂದಾಗಿ ಎಲ್ಲ ಸರ್ವರ್ ಕ್ರಾಶ್ ಆಗಿವೆ.
ಭಾರತದಲ್ಲಿ 410 ಮಿಲಿಯನ್ಗಿಂತಲೂ ಹೆಚ್ಚಿನ ಬಳಕೆದಾರರು ಫೇಸ್ಬುಕ್ ಬಳಕೆ ಮಾಡ್ತಿದ್ದು, ವಾಟ್ಸ್ಆ್ಯಪ್ 530 ದಶಲಕ್ಷಕ್ಕೂ ಅಧಿಕ ಬಳಕೆದಾರರನ್ನ ಹೊಂದಿದ್ದು, ಇನ್ಸ್ಟಾಗ್ರಾಂನಲ್ಲಿ 210 ಮಿಲಿಯನ್ ಬಳಕೆದಾರರು ಇದ್ದಾರೆ.