ನವದೆಹಲಿ: ಸ್ವತಂತ್ರ ಸಾಲ ನೀಡುವ ಪಾಲುದಾರರ ಮೂಲಕ ಸಾಲವನ್ನು ತ್ವರಿತವಾಗಿ ಪಡೆಯಲು ತನ್ನ ವೇದಿಕೆಯಲ್ಲಿ ಜಾಹೀರಾತು ನೀಡುವ (ಎಸ್‌ಎಂಬಿ) ಉದ್ಯಮಗಳಿಗೆ ಸಹಾಯ ಮಾಡಲು ಫೇಸ್‌ಬುಕ್ ಇಂಡಿಯಾ ಶುಕ್ರವಾರ 'ಸಣ್ಣ ವ್ಯಾಪಾರ ಸಾಲ ಉಪಕ್ರಮ'ವನ್ನು ಆರಂಭಿಸಿದೆ.
ಫೇಸ್‌ಬುಕ್ ಮೊದಲ ಬಾರಿ ಈ ಕಾರ್ಯಕ್ರಮವನ್ನು ಭಾರತದಲ್ಲಿ ಜಾರಿಗೆ ತರುತ್ತಿದೆ. ಈ ಕಾರ್ಯಕ್ರಮವು ದೇಶದ 200 ಪಟ್ಟಣಗಳು ಮತ್ತು ನಗರಗಳಲ್ಲಿ ನೋಂದಾಯಿತ ವ್ಯವಹಾರಗಳಿಗೆ ಅನ್ವಯವಾಗಲಿದೆ.
ಉದ್ಯಮದ ಸಾಲವನ್ನು ಸಣ್ಣ ಉದ್ಯಮಿಗಳಿಗೆ ಸುಲಭವಾಗಿ ತಲುಪುವಂತೆ ಮಾಡುವುದು ಮತ್ತು ಭಾರತದ ಎಂಎಸ್‌ಎಂಇ (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು) ವಲಯದಲ್ಲಿನ ಸಾಲದ ಅಂತರವನ್ನು ಕಡಿಮೆ ಮಾಡುವುದು ಈ ಉಪಕ್ರಮದ ಮೊದಲ ಗುರಿಯಾಗಿದೆ. ಫೇಸ್‌ಬುಕ್ ಇಂಡಿಯಾ ಉಪಾಧ್ಯಕ್ಷ ಮತ್ತು ಎಂಡಿ ಅಜಿತ್ ಮೋಹನ್ ವರ್ಚುಯಲ್ ಬ್ರೀಫಿಂಗ್ ಮೂಲಕ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
ಫೇಸ್ಬುಕ್ನದ್ದು ಮಧ್ಯವರ್ತಿ ಕೆಲಸ ಮಾತ್ರ
ಪ್ರೋಗ್ರಾಂನಲ್ಲಿ ಫೇಸ್‌ಬುಕ್‌ಗೆ ಯಾವುದೇ ಆದಾಯದ ಪಾಲು ಇಲ್ಲ ಮತ್ತು ಎಸ್‌ಎಂಇಗಳು ಸಾಲದ ಹಣವನ್ನು ಫೇಸ್‌ಬುಕ್‌ನಲ್ಲಿ ಖರ್ಚು ಮಾಡಲು ಯಾವುದೇ ಬಾಧ್ಯತೆಯನ್ನು ಹೊಂದಿರುವುದಿಲ್ಲ. ಅನುಮೋದನೆ, ವಿತರಣೆ ಮತ್ತು ಮರುಪಾವತಿ ಸೇರಿದಂತೆ ಸಾಲಗಳಿಗೆ ಸಂಬಂಧಿಸಿದ ಎಲ್ಲಾ ನಿರ್ಧಾರಗಳನ್ನು ಇಂಡಿಫೈ (ಮತ್ತು ಇತರ ಸಾಲ ಪಾಲುದಾರರು ಸೇರಿಕೊಂಡಾಗ) ತೆಗೆದುಕೊಳ್ಳುತ್ತಾರೆ ಎಂದು ಇದೇ ವೇಳೆ ಅವರು ಸ್ಪಷ್ಟಪಡಿಸಿದ್ದಾರೆ.
Facebook ಸಾಲ ನೀಡುವ ಪಾಲುದಾರ ಮತ್ತು ಎಸ್‌ಎಂಇ ನಡುವಿನ ಸಂಪರ್ಕವನ್ನು ಒದಗಿಸುತ್ತಿದೆ. ಬಡ್ಡಿದರಗಳ ಪ್ರಕಾರ ರಚನೆ ಸೇರಿಸುತ್ತಿದೆ. ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸ್‌ಆ್ಯಪ್‌ನಲ್ಲಿ ಪ್ರತಿ ತಿಂಗಳು ಸುಮಾರು 200 ಮಿಲಿಯನ್ ವ್ಯವಹಾರಗಳನ್ನು ನಡೆಸಲು ಫೇಸ್‌ಬುಕ್ ಆಪ್‌ಗಳನ್ನು ಬಳಸುತ್ತಾರೆ. ಅದರಲ್ಲಿ ಮಹತ್ವದ ಪಾಲು ಭಾರತದ್ದಾಗಿದೆ ಎಂದು ಅಜಿತ್ ಮೋಹನ್ ಸ್ಪಷ್ಟಪಡಿಸಿದ್ದಾರೆ.