ಕರ್ನಾಟಕ

karnataka

ETV Bharat / bharat

ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್ ರೂಮ್‌ಗಳನ್ನು ಪರಿಚಯಿಸಿದ ಫೇಸ್‌ಬುಕ್ - ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್ ರೂಮ್‌ಗಳನ್ನು ಪರಿಚಯಿಸಿದ ಫೇಸ್‌ಬುಕ್

ಇನ್‌ಸ್ಟಾಗ್ರಾಮ್‌ನಲ್ಲಿ ಫೇಸ್‌ಬುಕ್ ಲೈವ್ ರೂಮ್‌ಗಳನ್ನು ಪರಿಚಯಿಸಿದೆ. ಬಳಕೆದಾರರಿಗೆ ಮೂರು ಜನರೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್‌ಗೆ ಹೋಗಬಹುದಾಗಿದೆ. ಈ ಹಿಂದೆ, ಬಳಕೆದಾರರು ಸ್ಟ್ರೀಮ್‌ನಲ್ಲಿ ಓರ್ವ ವ್ಯಕ್ತಿಯೊಂದಿಗೆ ಮಾತ್ರ ಲೈವ್​ ಮಾಡಬಹುದಾಗಿತ್ತು. ಇನ್‌ಸ್ಟಾಗ್ರಾಮ್‌ನಲ್ಲಿ ಎಲ್ಲರಿಗೂ ಲೈವ್ ರೂಮ್‌ಗಳು ಶೀಘ್ರದಲ್ಲೇ ಜಾಗತಿಕವಾಗಿ ಲಭ್ಯವಾಗಲಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್ ರೂಮ್‌ಗಳನ್ನು ಪರಿಚಯಿಸಿದ ಫೇಸ್‌ಬುಕ್
ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್ ರೂಮ್‌ಗಳನ್ನು ಪರಿಚಯಿಸಿದ ಫೇಸ್‌ಬುಕ್

By

Published : Mar 2, 2021, 7:49 PM IST

ನವದೆಹಲಿ: ಫೇಸ್‌ಬುಕ್ ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್ ರೂಮ್‌ಗಳನ್ನು ಪರಿಚಯಿಸಿದ್ದು, ಬಳಕೆದಾರರು ಒಂದೇ ಸಮಯದಲ್ಲಿ ಮೂವರು ವ್ಯಕ್ತಿಗಳೊಂದಿಗೆ ಲೈವ್‌ಗೆ​​ ಬರಬಹುದಾಗಿದೆ. ಈ ಹಿಂದೆ ಇನ್‌ಸ್ಟಾಗ್ರಾಮ್​​ನಲ್ಲಿ ಕೇವಲ ಓರ್ವ ವ್ಯಕ್ತಿ ಮಾತ್ರ ಲೈವ್​​ ಬರಲು ಅವಕಾಶವಿತ್ತು.

ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್ ರೂಮ್‌ಗಳನ್ನು ಪರಿಚಯಿಸಿದ ಫೇಸ್‌ಬುಕ್

ಸದ್ಯದಲ್ಲಿಯೇ ಜಾಗತಿಕವಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಎಲ್ಲರಿಗೂ ಲೈವ್ ರೂಮ್‌ಗಳು ಲಭ್ಯವಾಗಲಿವೆ. ಲೈವ್​ನಲ್ಲಿ ಹೆಚ್ಚು ವ್ಯಕ್ತಿಗಳು ಸೇರ್ಪಡೆಗೊಳ್ಳುವುದರಿಂದ ಅವಕಾಶಗಳು ಹೆಚ್ಚಾಗಲಿವೆ. ಟಾಕ್ ಶೋ, ಜಾಮ್ ಸೆಷನ್ ಆಯೋಜನೆ, ಇತರ ಕಲಾವಿದರೊಂದಿಗೆ ಚರ್ಚೆ, ಚರ್ಚೆ, ಟ್ಯುಟೋರಿಯಲ್​​ಗಳ ಆಯೋಜನೆ ಸೇರಿದಂತೆ ಸ್ನೇಹಿತರೊಂದಿಗೆ ಮಾತನಾಡಲು ಇದು ಸಹಾಯವಾಗಲಿದೆ ಎಂದು ಫೇಸ್ಬುಕ್ ಹೇಳಿದೆ.

ಇದನ್ನೂ ಓದಿ: ಝೂಮ್​ ಆದಾಯದಲ್ಲಿ ಶೇ 369ರಷ್ಟು ಏರಿಕೆ!

ಲೈವ್ ರೂಮ್​ನೊಂದಿಗೆ ವೀಕ್ಷಕರು ಬ್ಯಾಡ್ಜ್‌ಗಳನ್ನು ಖರೀದಿಸಬಹುದಾಗಿದೆ. ಶಾಪಿಂಗ್ ಮತ್ತು ಲೈವ್ ಫಂಡ್‌ರೈಸರ್‌ಗಳಂತಹ ಇತರ ಸಂವಾದಾತ್ಮಕ ವೈಶಿಷ್ಟ್ಯಗಳನ್ನು ಬಳಸಬಹುದಾಗಿದೆ.

ಮುಂಬರುವ ತಿಂಗಳುಗಳಲ್ಲಿ ಲಭ್ಯವಿರುವ ಮಾಡರೇಟರ್ ನಿಯಂತ್ರಣಗಳು ಮತ್ತು ಆಡಿಯೋ ವೈಶಿಷ್ಟ್ಯಗಳಂತಹ ಹೆಚ್ಚು ಸಂವಾದಾತ್ಮಕ ಸಾಧನಗಳನ್ನು ಸಹ ನಾವು ಅನ್ವೇಷಿಸುತ್ತಿದ್ದೇವೆ ಎಂದು ಕಂಪನಿ ತಿಳಿಸಿದೆ.

ಇದು ಹೇಗೆ ಕೆಲಸ ಮಾಡುತ್ತದೆ?

ಲೈವ್ ರೂಮ್ ಪ್ರಾರಂಭಿಸಲು, ಎಡಕ್ಕೆ ಸ್ವೈಪ್ ಮಾಡಿ ಲೈವ್ ಕ್ಯಾಮೆರಾ ಆಯ್ಕೆಯನ್ನು ಮಾಡಿ.

ನಂತರ, ನಿಮ್ಮ ಅತಿಥಿಗಳನ್ನು ಸೇರಿಸಲು ಶೀರ್ಷಿಕೆಯನ್ನು ಹಾಕಿ ಮತ್ತು ರೂಮ್ಸ್​​ ಐಕಾನ್ ಟ್ಯಾಪ್ ಮಾಡಿ.

ನಿಮ್ಮೊಂದಿಗೆ ನೇರಪ್ರಸಾರ ಮಾಡಲು ವಿನಂತಿಸಿದ ವ್ಯಕ್ತಿಗಳನ್ನು ನೀವು ನೋಡುತ್ತೀರಿ ಮತ್ತು ಸೇರಿಸಲು ಅತಿಥಿಯನ್ನು ಸಹ ನೀವು ಹುಡುಕಬಹುದು.

ನೀವು ಲೈವ್ ರೂಮ್​ನನ್ನು ಪ್ರಾರಂಭಿಸಿದಾಗ, ನೀವು ಅತಿಥಿಗಳನ್ನು ಸೇರಿಸಿದಾಗ ನೀವು ಪರದೆಯ ಮೇಲ್ಭಾಗದಲ್ಲಿ ಉಳಿಯುತ್ತೀರಿ.

ಪ್ರಸಾರಕರಾಗಿ, ನೀವು ಮೂರು ಅತಿಥಿಗಳನ್ನು ಏಕಕಾಲದಲ್ಲಿ ಅಥವಾ ಒಂದೊಂದಾಗಿ ಸೇರಿಸಬಹುದು.

ಲೈವ್ ರೂಮ್​​ನಲ್ಲಿ ಸಕ್ರಿಯವಾಗಿ ಭಾಗವಹಿಸುವ ಯಾರೊಬ್ಬರಿಂದ ನಿರ್ಬಂಧಿಸಲ್ಪಟ್ಟ ಜನರು ಲೈವ್‌ಗೆ ಸೇರಲು ಸಾಧ್ಯವಾಗುವುದಿಲ್ಲ.

ABOUT THE AUTHOR

...view details