ಕರ್ನಾಟಕ

karnataka

ETV Bharat / bharat

Face Book ಸಾರ್ವಜನಿಕ ನೀತಿಯ ಮುಖ್ಯಸ್ಥರಾಗಿ ರಾಜೀವ್ ಅಗರ್ವಾಲ್ ನೇಮಕ - ಫೇಸ್​ಬುಕ್ ಸಾರ್ವಜನಿಕ ನೀತಿಯ ಮುಖ್ಯಸ್ಥ

ಫೇಸ್​ಬುಕ್ ಸಾರ್ವಜನಿಕ ನೀತಿಯ ನಿರ್ದೇಶಕರಾಗಿ ರಾಜೀವ್ ಅಗರ್ವಾಲ್ ನೇಮಕಗೊಳಿಸಿ ಫೇಸ್​ಬುಕ್ ಇಂಡಿಯಾ ಆದೇಶ ಹೊರಡಿಸಿದೆ.

ರಾಜೀವ್ ಅಗರ್ವಾಲ್
ರಾಜೀವ್ ಅಗರ್ವಾಲ್

By

Published : Sep 20, 2021, 1:16 PM IST

ನವದೆಹಲಿ: ಮಾಜಿ ಐಎಎಸ್ ಅಧಿಕಾರಿ ಮತ್ತು ಉಬರ್​​ನ ಮಾಜಿ ಕಾರ್ಯನಿರ್ವಾಹಕ ರಾಜೀವ್ ಅಗರ್ವಾಲ್ ಅವರನ್ನು ಸಾರ್ವಜನಿಕ ನೀತಿಯ ನಿರ್ದೇಶಕರನ್ನಾಗಿ ನೇಮಿಸಿರುವುದಾಗಿ ಫೇಸ್ಬುಕ್ ಇಂಡಿಯಾ ಹೇಳಿದೆ. ಅಂಕಿದಾಸ್​​ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಅಗರ್ವಾಲ್ ನೇಮಕಗೊಂಡಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಫೇಸ್​ಬುಕ್​, ಬಳಕೆದಾರರ ಸುರಕ್ಷತೆ, ಡೇಟಾ ರಕ್ಷಣೆ, ಗೌಪ್ಯತೆ ಹಾಗೂ ಅಂತರ್ಜಾಲ ಆಡಳಿತವನ್ನೊಳಗೊಂಡಿರುವ ಕಾರ್ಯಸೂಚಿಯಲ್ಲಿ ಫೇಸ್​ಬುಕ್​ ಪ್ರಮುಖ ನೀತಿ ಅಭಿವೃದ್ಧಿ ಉಪಕ್ರಮಗಳನ್ನು ಅಗರ್ವಾಲ್​​ ವಿವರಿಸುತ್ತಾರೆ.

ಅಗರ್ವಾಲ್, ಉಬರ್‌ನ ಭಾರತ ಮತ್ತು ದಕ್ಷಿಣ ಏಷ್ಯಾದ ಸಾರ್ವಜನಿಕ ನೀತಿಯ ಮುಖ್ಯಸ್ಥರಾಗಿದ್ದರು. ಅಗರ್ವಾಲ್​ಗೆ ಐಎಎಸ್​ ಅಧಿಕಾರಿಯಾಗಿ 26 ವರ್ಷಗಳ ಅನುಭವವಿದೆ. ಜತೆಗೆ ಉತ್ತರಪ್ರದೇಶದ 9 ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

ಮ್ಯಾಜಿಸ್ಟ್ರೇಟ್ ಆಗಿದ್ದ ಅವಧಿಯಲ್ಲಿ, ಅವರು ಭಾರತದ ಮೊದಲ ರಾಷ್ಟ್ರೀಯ ಬೌದ್ಧಿಕ ಆಸ್ತಿ ಹಕ್ಕುಗಳ (ಐಪಿಆರ್) ಕೈಗಾರಿಕಾ ಮತ್ತು ಆಂತರಿಕ ವ್ಯಾಪಾರ (ಎಂ/ಒ ವಾಣಿಜ್ಯ) ಉತ್ತೇಜನ ಇಲಾಖೆಯಲ್ಲಿ ಜಂಟಿ ಕಾರ್ಯದರ್ಶಿಯಾಗಿದ್ದರು. ಅವರು ಭಾರತ-ಅಮೆರಿಕ ದ್ವಿಪಕ್ಷೀಯ ವ್ಯಾಪಾರ ವೇದಿಕೆಯೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ. ಜೊತೆಗೆ ಇತರ ರಾಷ್ಟ್ರಗಳೊಂದಿಗೆ ಐಪಿಆರ್‌ಗಳಲ್ಲಿ ಭಾರತದ ಪ್ರಮುಖ ಸಂಧಾನಕಾರರಾಗಿದ್ದಾರೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಇನ್ಮುಂದೆ ಗೂಗಲ್​ ಕ್ಯಾಲೆಂಡರ್​ನಲ್ಲಿ ಲಭ್ಯವಾಗಲಿದೆ 'ಟೈಮ್ ಇನ್​ಸೈಟ್ಸ್​' ಪ್ಯಾನಲ್: ಏನಿದರ ವಿಶೇಷತೆ?

ಅಗರ್​ರ್ವಾಲ್​​ ನೇಮಕಾತಿ ಕುರಿತು ಮಾತನಾಡಿರುವ ಎಫ್​ಬಿಯ ಭಾರತದ ಉಪಾಧ್ಯಕ್ಷ ಮತ್ತು ಎಂಡಿ ಆಗಿರುವ ಅಜಿತ್​ ಮೋಹನ್, ದೇಶದ ಎಲ್ಲರಿಗೂ ಲಾಭದಾಯಕವಾದ ಅಂತರ್ಗತ ಮತ್ತು ಸುರಕ್ಷಿತ ಅಂತರ್ಜಾಲವನ್ನು ನಿರ್ಮಿಸಲು ಸಹಾಯ ಮಾಡಲು ನಮಗೆ ಅವಕಾಶವಿದೆ. ಸಾರ್ವಜನಿಕ ನೀತಿ ತಂಡವನ್ನು ಮುನ್ನಡೆಸಲು ರಾಜೀವ್ ನಮ್ಮೊಂದಿಗೆ ಸೇರಿಕೊಳ್ಳುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ ಎಂದಿದ್ದಾರೆ.

ABOUT THE AUTHOR

...view details