ನವದೆಹಲಿ: ಪ್ರಧಾನಿ ಮೋದಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಆಗ್ರಹಿಸಿ ಮಾಡಿದ್ದ ಪೋಸ್ಟ್ಗಳನ್ನು ಫೇಸ್‌ಬುಕ್ ಕೆಲ ಸಮಯ ಹೈಡ್ ಮಾಡಿದ ವಿಷಯ ತಡವಾಗಿ ಗೊತ್ತಾಗಿದೆ.
ಮೋದಿ ರಾಜೀನಾಮೆಗೆ ಆಗ್ರಹಿಸಿದ್ದ ಪೋಸ್ಟ್ಗಳನ್ನು ಹೈಡ್ ಮಾಡಿದ ಫೇಸ್‌ಬುಕ್ - ಪೋಸ್ಟ್ ಹೈಡ್ ಮಾಡಿದ ಫೇಸ್‌ಬುಕ್
ಪ್ರಧಾನಿ ಮೋದಿಯ ರಾಜೀನಾಮೆಗೆ ಆಗ್ರಹಿಸಿ ಬುಧವಾರ “#ResignModi” ಹ್ಯಾಷ್ಟ್ಯಾಗ್ನಲ್ಲಿ ಹಾಕಲಾಗಿದ್ದ ಪೋಸ್ಟ್ಗಳನ್ನು ಫೇಸ್‌ಬುಕ್ ಹೈಡ್ ಮಾಡಿರುವ ಬಗ್ಗೆ ತಿಳಿದು ಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಫೇಸ್‌ಬುಕ್, ನಾವು ಉದ್ದೇಶಪೂರ್ವಕವಾಗಿಯೋ ಅಥವಾ ಸರ್ಕಾರ ಹೇಳಿದಕ್ಕಾಗಿಯೋ ಪೋಸ್ಟ್ ಹೈಡ್ ಮಾಡಿಲ್ಲ ಎಂದಿದೆ. ಈ ರೀತಿ ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ವಿರುದ್ಧದ ಪೋಸ್ಟ್ ಹೈಡ್ ಆಗುತ್ತಿರುವುದು ಇತ್ತೀಚೆಗಿನ ದಿನಗಳಲ್ಲಿ ಇದು ಎರಡನೇ ಬಾರಿ. ಈ ಹಿಂದೆ ಸರ್ಕಾರದ ವಿರುದ್ಧ ಹಾಕಲಾಗಿದ್ದ ಸುಮಾರು 50 ಪೋಸ್ಟ್ಗಳನ್ನು ಟ್ವಿಟರ್ ತೆಗೆದು ಹಾಕಿತ್ತು. ಆ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ್ದ ಟ್ವಿಟರ್, ಸರ್ಕಾರದ ಸೂಚನೆ ಮೇರೆಗೆ ಪೋಸ್ಟ್ ತೆಗೆದು ಹಾಕಿದ್ದೇವೆ ಎಂದು ಹೇಳಿತ್ತು.
ಸುಮಾರು 3 ಗಂಟೆಗಳ ಸಮಯ ಪೋಸ್ಟ್ಗಳನ್ನು ಫೇಸ್‌ಬುಕ್ ಹೈಡ್ ಮಾಡಿತ್ತು. ಕೆಲವೊಂದು ಪೋಸ್ಟ್ಗಳು ನಮ್ಮ ಸಮುದಾಯ ಮಾನದಂಡಗಳನ್ನು ಉಲ್ಲಂಘಿಸುತ್ತವೆ. ಹಾಗಾಗಿ, ಅವುಗಳನ್ನು ಭಾರತದಲ್ಲಿ ಹೈಡ್ ಮಾಡಲಾಗಿದೆ ಎಂದು ಫೇಸ್‌ಬುಕ್ ತಿಳಿಸಿದೆ. ಆದರೆ, ಬಝ್ಝ್ ಸ್ಪೀಡ್ ಸ್ಯೂಸ್ ಪ್ರಕಾರ ಈ ಪೋಸ್ಟ್ಗಳು ಯುಎಸ್, ಕೆನಡಾ ಮತ್ತು ಯುಕೆಯಲ್ಲೂ ಕಾಣುತ್ತಿರಲಿಲ್ಲ. ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾದ ಬಳಿಕ ಹೈಡ್ ಆದ ಪೋಸ್ಟ್ಗಳನ್ನು ಫೇಸ್‌ಬುಕ್ ಸರಿಪಡಿಸಿದೆ.