ಕರ್ನಾಟಕ

karnataka

ETV Bharat / bharat

ನ್ಯಾಯಾಲಯದ ಆದೇಶ ಕಪೋಲಕಲ್ಪಿತ ಆರೋಪ: ದೂರು ದಾಖಲಿಸುವಂತೆ ರಿಜಿಸ್ಟ್ರಾರ್‌ಗೆ ಸುಪ್ರೀಂ ಕೋರ್ಟ್ ಸೂಚನೆ

ಬಾಕಿ ಉಳಿದಿರುವ ಅರ್ಜಿಯೊಂದಿಗೆ ಲಗತ್ತಿಸಲಾದ ತನ್ನ ಆದೇಶಗಳಲ್ಲಿ ಒಂದನ್ನು ಕಪೋಲಕಲ್ಪಿತ ಎಂದು ಹೇಳಿದ ಆಂತರಿಕ ತನಿಖಾ ವರದಿಯನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟ್ ಬಳಿಕ ದೂರು ದಾಖಲಿಸುವಂತೆ ರಿಜಿಸ್ಟ್ರಾರ್‌ಗೆ ಆದೇಶ ನೀಡಿದೆ.

Supreme Court
ಸುಪ್ರೀಂ ಕೋರ್ಟ್

By ETV Bharat Karnataka Team

Published : Sep 29, 2023, 11:22 AM IST

ನವದೆಹಲಿ: ನ್ಯಾಯಾಲಯದ ಆದೇಶವೊಂದು ಕಪೋಲಕಲ್ಪಿತವಾಗಿದೆ ಎಂದು ಹೇಳಿರುವ ಆಂತರಿಕ ತನಿಖಾ ವರದಿಯನ್ನು ಪರಿಗಣಿಸಿ ದೂರು ದಾಖಲಿಸುವಂತೆ ಸುಪ್ರೀಂ ಕೋರ್ಟ್ ತನ್ನ ರಿಜಿಸ್ಟ್ರಾರ್‌ಗೆ ಸೂಚಿಸಿದೆ.

ನ್ಯಾಯಮೂರ್ತಿಗಳಾದ ಎ.ಎಸ್ ಓಕಾ ಮತ್ತು ಪಂಕಜ್ ಮಿಥಾಲ್ ಅವರನ್ನೊಳಗೊಂಡ ಪೀಠ ರಿಜಿಸ್ಟ್ರಾರ್ (ನ್ಯಾಯಾಂಗ ಪಟ್ಟಿ) ವರದಿಯನ್ನು ಪರಿಶೀಲಿಸಿತು. ಈ ನ್ಯಾಯಾಲಯದ ಆದೇಶದ ನಕಲು ಎಂದು ಹೇಳಲಾದ ದಾಖಲೆಯು 'ಕೃತಕ' ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದೆ. ಆದ್ದರಿಂದ, ವ್ಯಾಪ್ತಿಯ ಪೊಲೀಸ್ ಠಾಣೆಗೆ ದೂರು ನೀಡುವಂತೆ ರಿಜಿಸ್ಟ್ರಾರ್​​ಗೆ ಪೀಠ ಹೇಳಿದೆ. ಅಲ್ಲದೇ 2 ತಿಂಗಳೊಳಗೆ ತನಿಖೆಯ ಕುರಿತು ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಸಂಬಂಧಪಟ್ಟ ಪೊಲೀಸ್ ಠಾಣೆಯ ಪ್ರಭಾರ ಅಧಿಕಾರಿಗೆ ಸೂಚಿಸಿದೆ.

ಇದನ್ನೂ ಓದಿ:ಹೊಸ ಸೇವಾ ಕಾನೂನು ಪ್ರಶ್ನಿಸುವ ಅರ್ಜಿ ತಿದ್ದುಪಡಿ; ದೆಹಲಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಈ ಹಿಂದೆ ಸಂಬಂಧಪಟ್ಟ ವಕೀಲರಿಗೆ ನೊಟೀಸ್ ಜಾರಿ ಮಾಡಿದ್ದ ನ್ಯಾಯಾಲಯ, "ಪ್ರೀತಿ ಮಿಶ್ರಾ ಅವರ ಪಾತ್ರವನ್ನು ಪರಿಶೀಲಿಸಲು ವಕೀಲರಿಗೆ ನೊಟೀಸ್ ನೀಡಿದ್ದರೂ, ಅವರು ಇಂದು ಈ ನ್ಯಾಯಾಲಯಕ್ಕೆ ಹಾಜರಾಗದಿರಲು ನಿರ್ಧರಿಸಿದ್ದಾರೆ" ಎಂಬುವುದನ್ನು ಗಮನಿಸಿದೆ. ಪ್ರೀತಿ ವಹಿಸಿದ್ದಾರೆ ಎನ್ನಲಾದ ಪಾತ್ರವನ್ನು ಪರಿಶೀಲಿಸುವುದು, ರಿಜಿಸ್ಟ್ರಾರ್ ದೂರು ಸಲ್ಲಿಸುವಾಗ, ಅವರ ವರದಿಯಲ್ಲಿ ಉಲ್ಲೇಖಿಸಲಾದ ಅನುಬಂಧಗಳೊಂದಿಗೆ ಈ ಆದೇಶದ ಪ್ರತಿಯನ್ನು ಸಹ ಸಲ್ಲಿಸಬೇಕು ಎಂದು ಪೀಠ ಹೇಳಿದೆ. ಪ್ರಕರಣದ ಹೆಚ್ಚಿನ ವಿಚಾರಣೆಗೆ ಡಿಸೆಂಬರ್ 1ರಂದು ದಿನಾಂಕ ನಿಗದಿಪಡಿಸಿದೆ.

ಇದನ್ನೂ ಓದಿ:370ನೇ ವಿಧಿ ಮೇಲಿನ ನಿಮ್ಮ ತೀರ್ಪು ಮಾನಸಿಕ ದ್ವಂದ್ವ ಕೊನೆಗಾಣಿಸಲಿದೆ: ಸುಪ್ರೀಂ ಕೋರ್ಟ್​ನಲ್ಲಿ ಕೇಂದ್ರದ ವಾದ

ಈ ಹಿಂದೆ, ಒಂದೇ ಪೀಠ ನೀಡಿದ ಎರಡು ವಿಭಿನ್ನ ಆದೇಶಗಳನ್ನು ಅರ್ಜಿಯೊಂದಿಗೆ ಸಲ್ಲಿಸಿರುವುದನ್ನು ಗಮನಿಸಿದ ಸುಪ್ರೀಂ ಕೋರ್ಟ್ ಆಂತರಿಕ ತನಿಖೆಗೆ ಆದೇಶಿಸಿತ್ತು. "ಮೊದಲ ಆದೇಶ ವಜಾಗೊಳಿಸುವುದು ಮತ್ತು ಎರಡನೇ ಆದೇಶವು ಎಸ್​ಎಲ್​ಪಿ(special leave to appeal) ಗೆ ಅವಕಾಶ ನೀಡುವುದು ಸೇರಿತ್ತು.

ಈ ಅಂಶಗಳ ಬಗ್ಗೆ ತನಿಖೆ ನಡೆಸಿ, ಸೆಪ್ಟೆಂಬರ್ 20, 2023 ರೊಳಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ನಾವು ರಿಜಿಸ್ಟ್ರಾರ್ (ನ್ಯಾಯಾಂಗ) ಅವರಿಗೆ ನಿರ್ದೇಶಿಸುತ್ತೇವೆ. ರಿಜಿಸ್ಟ್ರಾರ್ ಇದು ಈ ನ್ಯಾಯಾಲಯದ ಆದೇಶ ಕಪೋಲಕಲ್ಪಿತ ಎಂದಾದರೆ ಕ್ರಿಮಿನಲ್ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಪೀಠ ತನ್ನ ಆಗಸ್ಟ್ 22ರ ಆದೇಶದಲ್ಲಿ ಹೇಳಿತ್ತು. ಈ ಸಂಬಂಧ ಸಂಬಂಧಪಟ್ಟ ವಕೀಲರಾದ ಮಿಶ್ರಾ ಮತ್ತು ಅಫ್ತಾಬ್ ಅಲಿ ಖಾನ್ ಮತ್ತು ದೂರುದಾರ ಲೋಕೇಶ್ ಮದನ್ಮೋಹನ್ ಅಗರ್ವಾಲ್ ಅವರಿಗೆ ನೊಟೀಸ್ ಜಾರಿ ಮಾಡಿತ್ತು.

ಇದನ್ನೂ ಓದಿ:ಮುಸ್ಲಿಂ ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡಿಸಿದ ಪ್ರಕರಣ: ಉತ್ತರ ಪ್ರದೇಶ ಸರ್ಕಾರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್​

ABOUT THE AUTHOR

...view details