ಬೆಂಗಳೂರು:ಭಾರತದಲ್ಲಿ ಪ್ರತಿ 1,000 ಮಕ್ಕಳಲ್ಲಿ ಒಂದು ಮಗು ಬಾಲ್ಯಾವಸ್ಥೆಯ ಅಂಧತ್ವದಿಂದ ಬಳಲುತ್ತಿರುವುದು ಮತ್ತು ಮಗುವು ಪ್ರತಿ ನಿಮಿಷಕ್ಕೆ ದ್ವಿಪಕ್ಷೀಯ ಅಂಧನಾಗುತ್ತಿರುವುದು ಪ್ರಮುಖವಾದ ಸಾರ್ವಜನಿಕ ಆರೋಗ್ಯ ಕಳವಳಕಾರಿ ಅಂಶವಾಗಿದೆ. ವಯಸ್ಕರರಲ್ಲಿ ಶೇ.80 ರಷ್ಟು ಅಂಧತ್ವ ತಪ್ಪಿಸಬಹುದಾಗಿದ್ದರೆ, ಮಕ್ಕಳಲ್ಲಿ ಇದರ ಪ್ರಮಾಣ ಕೇವಲ ಶೇ.50 ರಷ್ಟಿದೆ ಎಂದು ಬೆಂಗಳೂರಿನ ಪ್ರತಿಷ್ಠಿತ ಡಾ.ಅಗರ್‍ವಾಲ್ಸ್ ಐ ಹಾಸ್ಪಿಟಲ್‍ನ ಕನ್ಸಲ್ಟೆಂಟ್ ಅಪ್ತಮಾಲೋಜಿಸ್ಟ್ ಡಾ.ಬಿಂದಿಯಾ ಹಪಾನಿ ಹೇಳಿದ್ದಾರೆ.
ನಾಳೆಯ (ಅಕ್ಟೋಬರ್ 8) ವಿಶ್ವ ದೃಷ್ಟಿ ದಿನದ ಪ್ರಯುಕ್ತ ನಡೆದ ಸುದ್ದಿಗೋಷ್ಠಿಯಲ್ಲಿ ಡಾ.ಬಿಂದಿಯಾ ಹಪಾನಿ ಮಾತನಾಡಿದರು. ವಿಶ್ವಾದ್ಯಂತ ಸುಮಾರು 1.5 ಮಿಲಿಯನ್ ಅಂಧ ಮಕ್ಕಳಿದ್ದಾರೆ ಮತ್ತು ಹೆಚ್ಚುವರಿಯಾಗಿ 18 ಮಿಲಿಯನ್ ಮಕ್ಕಳು ಸಾಮಾನ್ಯದಿಂದ ಗಂಭೀರ ಸ್ವರೂಪದ ದೃಷ್ಟಿಹೀನತೆಯಿಂದ ಬಳಲುತ್ತಿದ್ದಾರೆ ಎಂದು ಡಾ.ಬಿಂದಿಯಾ ಹಪಾನಿಹೇಳಿದರು.
ಬಹುತೇಕ ಮಕ್ಕಳು ಕಡಿಮೆಯಿಂದ ಮಧ್ಯಮ ಪ್ರಮಾಣದ ಆದಾಯಗಳಿಸುವ ದೇಶಗಳಿಗೆ ಸೇರಿದವರೇ ಆಗಿದ್ದಾರೆ. ಅಲ್ಲಿ ಪ್ರತಿ 1,000 ಮಕ್ಕಳಲ್ಲಿ 1.5 ಕ್ಕಿಂತ ಹೆಚ್ಚು ಮಗುವಿಗೆ ಈ ಸಮಸ್ಯೆ ಇದೆ. ಆದರೆ, ಉತ್ತಮದಿಂದ ಹೆಚ್ಚು ಆದಾಯವಿರುವ ದೇಶಗಳಲ್ಲಿ ಇದರ ಪ್ರಮಾಣ ಪ್ರತಿ 1,000 ಮಕ್ಕಳಲ್ಲಿ ಕೇವಲ 0.3 ರಷ್ಟಿದೆ ಎಂದು ತಿಳಿಸಿದ್ದಾರೆ.
ದೃಷ್ಟಿದೋಷಕ್ಕೆ ಕಾರಣಗಳೇನು?
ಭಾರತದಲ್ಲಿ ಬಾಲ್ಯದ ಅಂಧತ್ವಕ್ಕೆ ಸಾಮಾನ್ಯ ಕಾರಣಗಳಲ್ಲಿ ಪ್ರಮುಖವಾಗಿ ಚಿಕಿತ್ಸೆ ಪಡೆಯದಿರುವ ವಕ್ರೀಕಾರಕ ದೋಷಗಳು, ದಡಾರದಿಂದ ಉಂಟಾಗುವ ಕಾರ್ನಿಯಲ್ ಒಪಾಸಿಟಿಸ್, ವಿಟಮಿನ್ ಎ ಕೊರತೆ, ಕಣ್ಣಿನ ಸೋಂಕು ಅಥವಾ ಸಾಂಪ್ರದಾಯಿಕ ಕಣ್ಣಿನ ಪರಿಹಾರಗಳ ವಿಷತ್ವ, ಜನ್ಮಜಾತ ಕಣ್ಣಿನ ಪೊರೆಗಳ ಸಮಸ್ಯೆ, ಜನ್ಮಜಾತ ಗ್ಲುಕೋಮಾ ಮತ್ತು ಆರ್.ಪಿ.ಒ ಸೇರಿವೆ.
ಕಳೆದ ಹಲವು ವರ್ಷಗಳಲ್ಲಿ ಬಾಲ್ಯದ ಅಂಧತ್ವ ಪ್ರಕರಣಗಳಲ್ಲಿ ಹೆಚ್ಚಳ ಕಂಡುಬರುತ್ತಿದೆ. 1999ರಿಂದ 2007ರ ನಡುವೆ ಕೈಗೊಂಡ ಅಧ್ಯಯನಗಳ ಪ್ರಕಾರ, ಭಾರತದಲ್ಲಿ ಕಾರ್ನಿಯಾ ಸಂಬಂಧಿತ ಅಂಶಗಳು ಬಾಲ್ಯದ ಅಂಧತ್ವಕ್ಕೆ ಪ್ರಮುಖ ಕಾರಣಗಳಾಗಿವೆ. ಆದರೆ, 2007ರಿಂದ 2018ರ ನಡುವೆ ನಡೆದ ಅಧ್ಯಯನಗಳು, ಮೈಕ್ರೋಫ್ತಲ್ಮೋಸ್(ಸಣ್ಣ ಕಣ್ಣು), ಅನೊಫ್ತಲ್ಮೋಸ್ (ಕಣ್ಣಿನ ದೋಷ) ಮತ್ತು ರೆಟಿನೋಪಥಿ ಆಫ್ ಪ್ರೀಮೆಚ್ಯುರಿಟಿ(ಆರ್ಒಪಿ) ಯಂತಹ ಸಮಸ್ಯೆಗಳು ಜಗತ್ತಿನಾದ್ಯಂತ ಹೆಚ್ಚಾಗಿ ಕಂಡು ಬಂದಿವೆ ಎಂದು ಹೇಳಿದ್ದಾರೆ.
ಮಕ್ಕಳ ಅಂಧತ್ವಕ್ಕೆ ಕಾರಣ ರಕ್ತಸಂಬಂಧಿ ವಿವಾಹ:
ಮಕ್ಕಳ ಅಂಧತ್ವಕ್ಕೆ ಕಾರಣವಾಗಿರುವ ಇಡೀ ಜಾಗತಿಕ ಸಮಸ್ಯೆಗಳು ರಕ್ತಸಂಬಂಧಿ ವಿವಾಹಗಳಿಂದ ಉಂಟಾಗುವ ಆನುವಂಶಿಕ ವೈಪರೀತ್ಯಗಳು, ತಾಯಿಯು ಮದ್ಯ ಸೇವನೆ ಮಾಡುವುದು ಮತ್ತು ಗರ್ಭಾವಸ್ಥೆಯ ಸಂದರ್ಭದಲ್ಲಿ ರಸಗೊಬ್ಬರಗಳು ಹಾಗೂ ಕ್ರಿಮಿನಾಶಕಗಳಿಗೆ ಒಡ್ಡಿಕೊಳ್ಳುವುದು. ಭಾರತದ ನಗರ ಪ್ರದೇಶಗಳಲ್ಲಿ ನವಜಾತ ಶಿಶು ಆರೈಕೆ ಸೇವೆಗಳ ಉತ್ತಮ ಲಭ್ಯತೆಯಿಂದಾಗಿ ರೆಟಿನೋಪಥಿ ಆಫ್ ಪ್ರೀಮೆಚ್ಯುರಿಟಿ ಮಗುವಿನ ಅಂಧತ್ವಕ್ಕೆ ಒಂದು ಪ್ರಮುಖ ಕಾರಣವಾಗಿ ಹೊರಹೊಮ್ಮಿದೆ.
ಈ ಕಾರಣದಿಂದಾಗಿ ನವಜಾತ ಶಿಶುಗಳು ಕಡಿಮೆ ತೂಕ ಹೊಂದಿದ್ದರೂ ಬದುಕುಳಿಯುತ್ತವೆ. ಆದರೆ, ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಇದಕ್ಕೆ ತದ್ವಿರುದ್ಧವಾಗಿ ಕಡಿಮೆ ತೂಕದ ನವಜಾತ ಶಿಶುಗಳ ಮರಣ ಪ್ರಮಾಣ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
ಸರ್ಕಾರಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿವೆ: