ಧೋಲೇರಾ (ಗುಜರಾತ್):ಧೋಲೆರಾ ಇಂಡಸ್ಟ್ರಿಯಲ್ ಸಿಟಿ ಡೆವಲಪ್‌ಮೆಂಟ್ ಲಿಮಿಟೆಡ್ (ಡಿಐಸಿಡಿಎಲ್) ಸಂಸ್ಥೆಯು ಗುಜರಾತ್ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಪ್ರಥಮ ಬಾರಿಗೆ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವವನ್ನು ಆಯೋಜಿಸಿದೆ. ಬೆಳಗ್ಗೆ 11 ಗಂಟೆಗೆ ಆರಂಭವಾದ ಕಾರ್ಯಕ್ರಮದಲ್ಲಿ ವಿಶ್ವಾದ್ಯಂತ ಅಂತಾರಾಷ್ಟ್ರೀಯ ಗಾಳಿಪಟ ಹಾರಿಸುವ ಹವ್ಯಾಸಿಗಳು ಭಾಗವಹಿಸಿದ್ದರು. ಕೆನಡಾ, ಯುಎಸ್ಎ, ರಷ್ಯನ್ ಫೆಡರೇಶನ್, ನ್ಯೂಜಿಲೆಂಡ್, ಶ್ರೀಲಂಕಾ, ಈಜಿಪ್ಟ್, ಸೌದಿ ಅರೇಬಿಯಾ ಮತ್ತು ಇತರ ಹಲವು ದೇಶಗಳಿಂದ ಗಾಳಿಪಟ ಹವ್ಯಾಸಿಗಳು ಆಗಮಿಸಿದ್ದರು.
ಕಣ್ಮನ ಸೆಳೆದ ರಂಗುರಂಗಿನ ಗಾಳಿಪಟ ಉತ್ಸವ ಧೋಲೆರಾದಲ್ಲಿ ನಡೆದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಒಟ್ಟು 98 ಗಾಳಿಪಟ ಹಾರಾಟಗಾರರು ಭಾಗವಹಿಸಿದ್ದರು. ಇದರಲ್ಲಿ 18 ದೇಶಗಳ 42 ಗಾಳಿಪಟ ಹಾರಾಟಗಾರರು ಮತ್ತು ಭಾರತದ 4 ರಾಜ್ಯಗಳಿಂದ 26 ಮತ್ತು ಗುಜರಾತ್‌ನಿಂದ 25 ಗಾಳಿಪಟ ಹಾರಾಟಗಾರರು ಭಾಗವಹಿಸಿದ್ದರು. ಗಾಳಿಪಟ ಹವ್ಯಾಸಿಗಳು ತಮ್ಮ ಬಣ್ಣ ಬಣ್ಣದ ಗಾಳಿಪಟಗಳನ್ನು ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ರಂಗು ತುಂಬಿದರು.
ಗಾಳಿಪಟ ಹಾರಿಸಿ ಖುಷಿಪಟ್ಟ ವಿದೇಶಿಗರು:ಕಛ್ ಕಲೆಕ್ಟರ್ ದಿಲೀಪ್ ರಾಣಾ 16 ದೇಶಗಳ ಮತ್ತು ಭಾರತದ ವಿವಿಧ ರಾಜ್ಯಗಳಿಂದ ಆಗಮಿಸಿದ ಗಾಳಿಪಟ ಹಾರಾಟಗಾರರನ್ನು ಸ್ವಾಗತಿಸಿದರು. ವೈಟ್ ಡೆಸರ್ಟ್ ಮತ್ತು ಅಂತರರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಆಗಮಿಸುವಂತೆ ಮನವಿ ಮಾಡಿದರು. ಕಛ್ ನ ಶ್ವೇತ ಮರುಭೂಮಿಯಲ್ಲಿ ಬಣ್ಣಬಣ್ಣದ ಗಾಳಿಪಟಗಳನ್ನು ನೋಡಿ ಆನಂದಿಸಿದೆವು ಎಂದು ವೀಕ್ಷಕರಾಗಿ ಆಗಮಿಸಿದ್ದ ಪ್ರತೀಕ್ಷಾ ಚಾಪ್ಲೋಟ್ ಹೇಳಿದರು.
ಕಣ್ಮನ ಸೆಳೆದ ರಂಗುರಂಗಿನ ಗಾಳಿಪಟ ಉತ್ಸವ ಬರ್ಲಿನ್‌ನ ಕೈಟ್‌ಸರ್ಫರ್ ಆಗಿರುವ ಎಲಿ ಎಂಬುವರು ಕಛ್ನ ಸಂಸ್ಕೃತಿ, ಜನ, ಆತಿಥ್ಯ ಮತ್ತು ಕಛ್ನ ವೈಟ್ ಡೆಸರ್ಟ್‌ನಲ್ಲಿನ ಅದ್ಭುತ ಅನುಭವದ ಬಗ್ಗೆ ಮಾತನಾಡಿದರು. ವಸುಧೈವ ಕುಟುಂಬಕಂ ಚೈತನ್ಯದ ಬಗ್ಗೆಯೂ ವಿವರಿಸಿದರು. ಇವರು ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಭಾಗವಹಿಸಿ ಸಂತಸ ವ್ಯಕ್ತಪಡಿಸಿದರು.
ಲಿಥುವೇನಿಯಾದ ಗಾಳಿಪಟ ಹವ್ಯಾಸಿ ಡೊನಾಟಾಸ್ ಮಾತನಾಡಿ, ಪ್ರತಿ ವರ್ಷ ನಾನು ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ನೋಂದಾಯಿಸಿಕೊಳ್ಳುವಾಗ, ಇದು ಕಛ್ನ ವೈಟ್ ಡೆಸರ್ಟ್‌ನಲ್ಲಿ ನಡೆಯುತ್ತದೆಯಾ ಅಥವಾ ಬೇರೆಲ್ಲಾದರೂ ನಡೆಯುತ್ತದೆಯಾ ಎಂಬುದನ್ನು ಪರಿಶೀಲಿಸುತ್ತೇನೆ. ಏಕೆಂದರೆ ಇಲ್ಲಿ ನಡೆಯುವ ಗಾಳಿಪಟ ಉತ್ಸವ ಬಹಳ ಮೋಜಿನದಾಗಿರುತ್ತದೆ ಎಂದು ಹೇಳಿದರು.
ಕಣ್ಮನ ಸೆಳೆದ ರಂಗುರಂಗಿನ ಗಾಳಿಪಟ ಉತ್ಸವ ಇದು ಹಮ್ಮೆ ಮತ್ತು ಸಂತಷದ ಶುಭಗಳಿಗೆ:ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಆಯುಷ್ ಖಾತೆ ರಾಜ್ಯ ಸಚಿವ ಡಾ. ಮಹೇಂದ್ರಭಾಯಿ ಮುಂಜಪಾರಾ ಮಾತನಾಡಿ, ’’ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರ ವಿಶ್ವ ದರ್ಜೆಯ ಅಭಿವೃದ್ಧಿಯ ಕನಸಿನ ಧೋಲೇರಾ ಸ್ಮಾರ್ಟ್ ಸಿಟಿಗೆ ಇಂದು ಹೆಮ್ಮೆ ಮತ್ತು ಸಂತೋಷದ ಸಂದರ್ಭವಾಗಿದೆ. ಕೈಗಾರಿಕಾ ಸ್ಮಾರ್ಟ್ ಸಿಟಿಯ ಯೋಜನೆ ಸಾಕಾರವಾಗಿದೆ. ಧೋಲೇರಾ ವಿಶ್ವ ದರ್ಜೆಯ ಮೂಲಸೌಕರ್ಯ ಹೊಂದಿರುವ ನಗರವಾಗಲಿದೆ ಮತ್ತು ಭಾರತದ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಲಿದೆ. ಇಲ್ಲಿ ಗಾಳಿಪಟ ಉತ್ಸವವನ್ನು ಆಯೋಜಿಸುವ ಮೂಲಕ ಧೋಲೇರಾ ಸ್ಮಾರ್ಟ್ ಸಿಟಿಯು ಕೈಗಾರಿಕೆಗಳ ಅಭಿವೃದ್ಧಿ ಮತ್ತು ಪ್ರವಾಸೋದ್ಯಮದ ಉತ್ತೇಜನಕ್ಕೆ ಸಹಕಾರಿಯಾಗಲಿದೆ ಎಂದು ಖಾತ್ರಿಯಿದೆ’’ ಎಂದರು.
ಕಣ್ಮನ ಸೆಳೆದ ರಂಗುರಂಗಿನ ಗಾಳಿಪಟ ಉತ್ಸವ ಗುಜರಾತ್ ಸರ್ಕಾರದ ಮಾಜಿ ಕ್ಯಾಬಿನೆಟ್ ಸಚಿವ ಭೂಪೇಂದ್ರಸಿನ್ಹ್ ಚುಡಾಸಮಾ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ, ಅಂತಾರಾಷ್ಟ್ರೀಯ ಗಾಳಿಪಟ ಉತ್ಸವವು ಗುಜರಾತ್‌ನ ಸಾಮರ್ಥ್ಯವನ್ನು ಜಗತ್ತಿಗೆ ಪ್ರದರ್ಶಿಸಲು ಹೊಸ ವೇದಿಕೆಯನ್ನು ನೀಡಿದೆ. ಪ್ರವಾಸೋದ್ಯಮ ಮತ್ತು ಉತ್ಸವಗಳ ಮೂಲಕ ಧೋಲೇರಾದಂತಹ ವಿಶಿಷ್ಟ ಪ್ರದೇಶವನ್ನು ಉತ್ತೇಜಿಸುವ ಈ ಪ್ರಯತ್ನ ಯಶಸ್ವಿಯಾಗಲಿದೆ ಎಂದು ಹೇಳಿದರು.
ಕಣ್ಮನ ಸೆಳೆದ ರಂಗುರಂಗಿನ ಗಾಳಿಪಟ ಉತ್ಸವ ಗಾಳಿಪಟ ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾರತ ಸರ್ಕಾರದ ಮಹಿಳಾ, ಮಕ್ಕಳ ಅಭಿವೃದ್ಧಿ ಮತ್ತು ಆಯುಷ್ ಇಲಾಖೆಯ ರಾಜ್ಯ ಸಚಿವರಾದ ಡಾ. ಮಹೇಂದ್ರಭಾಯಿ ಮುಂಜಪರಾ, ಗುಜರಾತ್ ಸರ್ಕಾರದ ಮಾಜಿ ಕ್ಯಾಬಿನೆಟ್ ಸಚಿವ ಭೂಪೇಂದ್ರಸಿಂಗ್ ಚುಡಾಸಮಾ, ಧಂಧೂಕಾ ಶಾಸಕ ಕಲುಭಾಯಿ ದಾಭಿ ಮತ್ತು ಮಾಜಿ ಶಾಸಕ ಭಾರತಭಾಯ್ ಪಾಂಡ್ಯ ಉಪಸ್ಥಿತರಿದ್ದರು.
ಇದನ್ನೂ ಓದಿ: 'ಗಾಳಿಪಟ ಕ್ಯಾಮೆರಾ' ಅಭಿವೃದ್ಧಿಪಡಿಸಿದ ಐಐಐಟಿ-ಹೈದರಾಬಾದ್ ಸಂಶೋಧಕರು