ಅಮರಾವತಿ (ಆಂಧ್ರ ಪ್ರದೇಶ): ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿ ವಿವಾಹೇತರ ಸಂಬಂಧದ ಹಿನ್ನೆಲೆಯಲ್ಲಿ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರ ಕೊಲೆ ನಡೆದಿದೆ. ಇದರ ಪ್ರಕರಣದ ರಾಜಿ ಮಾಡಲು ಇಳಿದಾಗ ಮತ್ತೊಂದು ಹತ್ಯೆ ಮಾಡಲಾಗಿದೆ. ಈ ಕೃತ್ಯದಲ್ಲಿ ಭಾಗಿಯಾಗಿದ ಇಬ್ಬರು ಪೊಲೀಸ್ ಅಧಿಕಾರಿಗಳ ತಲೆದಂಡವಾಗಿದೆ.
ಕೃಷ್ಣಾ ಜಿಲ್ಲೆಯ ತೊಟ್ಲವಲ್ಲೂರು ಮಂಡಲದ ಚಗಂಟಿಪಡು ಉಪನಗರದಲ್ಲಿ ಜುಲೈ 26ರಂದು ಸಾಫ್ಟ್‌ವೇರ್ ಉದ್ಯೋಗಿ ಗಾಡಿಕೊಯ್ಯ ಶ್ರೀನಿವಾಸ ರೆಡ್ಡಿ (38) ಎಂಬುವವರ ಕೊಲೆಯಾಗಿತ್ತು. ಶ್ರೀನಿವಾಸ ರೆಡ್ಡಿಯ ಬಾಲ್ಯ ಸ್ನೇಹಿತ ಅಲ್ಲಾವರಿಪಾಲೆಂನ ಶ್ರೀಕಾಂತ್ ರೆಡ್ಡಿ ಈ ಕೊಲೆ ಮಾಡಿದ್ದರು.
ಆರೋಪಿ ಶ್ರೀಕಾಂತ್ ರೆಡ್ಡಿ ಕೃಷಿ ಮಾಡುತ್ತಿದ್ದು, ಅದೇ ಗ್ರಾಮದ ಮಿಥುನಾ ಅಲಿಯಾಸ್ ಜ್ಯೋತಿ ಎಂಬಾಕೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದರು. ಆದರೆ, ಈ ವಿಷಯ ತಿಳಿದ ಶ್ರೀನಿವಾಸ ರೆಡ್ಡಿ ಮಿಥುನಾರಿಗೆ ಬುದ್ಧಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಮಿಥುನಾ ಶ್ರೀಕಾಂತ್ ರೆಡ್ಡಿಯನ್ನು ದೂರ ಇಟ್ಟಿದ್ದರು. ಮಿಥುನಾ ದೂರವಾಗಿರುವ ಹಿಂದಿನ ಸತ್ಯ ತಿಳಿದ ಶ್ರೀಕಾಂತ್ ರೆಡ್ಡಿ ತನ್ನ ಸ್ನೇಹಿತ ಶ್ರೀನಿವಾಸ ರೆಡ್ಡಿಯನ್ನು ಕೊಲೆ ಮಾಡಿದ್ದರು. ಬಳಿಕ ಮಿಥುನಾರನ್ನು ಕರೆದುಕೊಂಡು ಶ್ರೀಕಾಂತ್ ರೆಡ್ಡಿ ಓಡಿ ಹೋಗಿದ್ದರು. ಆದರೆ, ಶ್ರೀನಿವಾಸ ರೆಡ್ಡಿ ಕೊಲೆ ಪ್ರಕರಣವನ್ನು ಬೆನ್ನಟ್ಟಿದ್ದ ಪೊಲೀಸರು, ಶ್ರೀಕಾಂತ್ ರೆಡ್ಡಿ ಮತ್ತು ಮಿಥುನಾ ಅವರನ್ನು ಬಂಧಿಸಿದ್ದರು.
ರಾಜೀ ಮಾಡಲು ನಡೆದಿತ್ತು ತಂತ್ರ: ಶ್ರೀನಿವಾಸ ರೆಡ್ಡಿ ಕೊಲೆ ಪ್ರಕರಣವನ್ನು ಇತ್ಯರ್ಥಪಡಿಸಲು ಮತ್ತು ರಾಜಿ ಮಾಡಿಕೊಳ್ಳಲು ನರೇಂದ್ರರೆಡ್ಡಿ ಎಂಬುವವರು ಮಧ್ಯಸ್ಥಿಕೆ ವಹಿಸಲು ಮುಂದಾಗಿದ್ದರು. ಈ ಕುರಿತು ಆರೋಪಿಯ ತಂದೆಯನ್ನು ಸಂಪರ್ಕಿಸಿದ್ದ ನರೇಂದ್ರರೆಡ್ಡಿ, ಪೊಲೀಸರು ಹಾಗೂ ಮೃತನ ಕುಟುಂಬದ ಸದಸ್ಯರೊಂದಿಗೆ ಮಾತನಾಡುವುದಾಗಿ ತಿಳಿಸಿದ್ದರು.
ಅಂತೆಯೇ, ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಐನೊಂದಿಗೆ ಮೊದಲ ಕಂತಿನಲ್ಲಿ 22 ಲಕ್ಷ ರೂ. ನೀಡಲು ಮಾತುಕತೆ ಮಾಡಿದ್ದರು. ಜೊತೆಗೆ ಸಿಐಗೆ ನರೇಂದ್ರರೆಡ್ಡಿ ಹಣವನ್ನೂ ನೀಡಿದ್ದರು. ಈ ಮಧ್ಯೆ ಅದೇ ಗ್ರಾಮದ ಪುಚ್ಚಕಾಯಲ ಶ್ರೀನಿವಾಸ ರೆಡ್ಡಿ ಎಂಬುವರಿಗೆ ಈ ವಿಷಯ ತಿಳಿದು ರಿಮಾಂಡ್‌ನಲ್ಲಿರುವ ಆರೋಪಿಯನ್ನು ಭೇಟಿಯಾಗಿದ್ದಾರೆ. ಆಗ 22 ಲಕ್ಷ ಬದಲಿಗೆ ಕೇವಲ 20 ಲಕ್ಷಕ್ಕೆ ರಾಜಿ ಮಾಡಿಕೊಳ್ಳುವುದಾಗಿ ಈ ಶ್ರೀನಿವಾಸ ರೆಡ್ಡಿ ಹೇಳಿದ್ದಾರೆ.