ಚೆನ್ನೈ(ತಮಿಳುನಾಡು): ತನಿಖಾ ಆಯೋಗದ ವರದಿಯ ಪ್ರಮುಖ ಭಾಗಗಳನ್ನು ರಾಜ್ಯ ವಿಧಾನಸಭೆಯಲ್ಲಿ ಮಂಡಿಸುವ ಮುನ್ನವೇ ಪ್ರಕಟಿಸಿದ್ದಕ್ಕಾಗಿ ಆಂಗ್ಲ ನಿಯತಕಾಲಿಕದ ಹಿರಿಯ ಪತ್ರಕರ್ತ ಆರ್ ಇಳಂಗೋವನ್ ವಿರುದ್ಧ 1923ರ ಅಧಿಕೃತ ರಹಸ್ಯ ಕಾಯಿದೆಯಡಿ ಪೊಲೀಸರು ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.
ಸಮಿತಿಯ ವರದಿಯ ಬಹಿರಂಗಗೊಂಡಿರುವುದರಿಂದ ಡಿಎಂಕೆ ಸರ್ಕಾರವು ಅದನ್ನು ಸದನದಲ್ಲಿ ಮಂಡಿಸಲು ಮತ್ತು ಅದನ್ನು ಸಾರ್ವಜನಿಕಗೊಳಿಸಲು ಏಕೆ ವಿಳಂಬ ಮಾಡುತ್ತಿದೆ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ. ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರ ಮೇಲ್ವಿಚಾರಣೆಯಲ್ಲಿ ಪೊಲೀಸ್ ಗುಂಡಿನ ದಾಳಿ ನಡೆದಿದ್ದು, ಪೊಲೀಸ್ ಗುಂಡಿನ ದಾಳಿಯ ನಂತರ ಹಿಂದಿನ ಸರ್ಕಾರವು ಸಮಿತಿಯನ್ನು ರಚಿಸಿತ್ತು. ಸ್ಟೆರ್ಲೈಟ್ನ ತಾಮ್ರದ ಸ್ಮೆಲ್ಟರ್ ಸ್ಥಾವರವನ್ನು ಸಹ ಮುಚ್ಚಲಾಗಿತ್ತು.
ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ಗೆಲುವಿನೊಂದಿಗೆ ಮುಖ್ಯಮಂತ್ರಿಯಾಗಿ ಎಂ ಕೆ ಸ್ಟಾಲಿನ್ ಅಧಿಕಾರ ವಹಿಸಿಕೊಂಡ ನಂತರ ಸಮಿತಿಯು ಮೇ 15, 2021 ರಂದು ತನ್ನ ಮಧ್ಯಂತರ ವರದಿ ಸಲ್ಲಿಸಿತ್ತು. ಐದು ಸಂಪುಟಗಳು ಮತ್ತು 3000 ಪುಟಗಳಲ್ಲಿರುವ ಅಂತಿಮ ವರದಿಯನ್ನು ಮೇ 18, 2022 ರಂದು ಸಲ್ಲಿಸಲಾಗಿತ್ತು. ವರದಿಯ ವಿಷಯಗಳನ್ನು ನಿಯತಕಾಲಿಕವೊಂದು ಪ್ರಕಟಿಸಿದ ನಂತರ, ಅಕ್ಟೋಬರ್ 18, 2023 ರಂದು ವಿಧಾನಸಭೆಯಲ್ಲಿ ಮಂಡಿಸಲಾಯಿತು. ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಸಾವಿನ ಬಗ್ಗೆ ತನಿಖೆ ನಡೆಸಿದ ನ್ಯಾಯಮೂರ್ತಿ ಆರುಮುಗಸ್ವಾಮಿ ತನಿಖಾ ಆಯೋಗದೊಂದಿದ ತನಿಖೆಗೆ ಆಗಬೇಕು ಎಂದು ಎಐಎಡಿಎಂಕೆ ಆಗ್ರಹಿಸಿದ್ದು, ಇದಕ್ಕೆ ಡಿಎಂಕೆ ಅಸಮಾಧಾನ ವ್ಯಕ್ತಪಡಿಸಿದೆ.