ಕರ್ನಾಟಕ

karnataka

ETV Bharat / bharat

ಜಮ್ಮು ಬಸ್ ನಿಲ್ದಾಣದಿಂದ ಭಾರೀ ಸ್ಫೋಟಕ ವಶ : ತಪ್ಪಿದ ಭಾರೀ ಅನಾಹುತ - ಭಾರೀ ಜನಸಂದಣಿಯುಳ್ಳ ಬಸ್ ನಿಲ್ದಾಣದ ಬಳಿ ಏಳು ಕಿಲೋಗ್ರಾಂಗಳಷ್ಟು ಸುಧಾರಿತ ಸ್ಫೋಟಕ

ಎರಡು ವರ್ಷಗಳ ಹಿಂದೆ ಈ ದಿನದಂದೇ ಪಾಕಿಸ್ತಾನ ಪ್ರೇರಿತ ಜೈಶ್-ಎ-ಮೊಹಮ್ಮದ್ ಪುಲ್ವಾಮಾದಲ್ಲಿ ಸೇನಾ ವಾಹನಗಳ ಮೇಲೆ ಭೀಕರ ದಾಳಿ ನಡೆಸಿತ್ತು. ಇದರ ಪರಿಣಾಮವಾಗಿ 40 ಜವಾನರು ಹುತಾತ್ಮರಾಗಿದ್ದರು..

Explosive material recovered from Jammu bus stand,
ಜಮ್ಮು ಬಸ್ ನಿಲ್ದಾಣದಿಂದ ಭಾರೀ ಸ್ಫೋಟಕ ವಶ

By

Published : Feb 14, 2021, 3:40 PM IST

ಜಮ್ಮು: ಭಾರೀ ಜನಸಂದಣಿಯುಳ್ಳ ಬಸ್ ನಿಲ್ದಾಣದ ಬಳಿ ಏಳು ಕಿಲೋಗ್ರಾಂಗಳಷ್ಟು ಸುಧಾರಿತ ಸ್ಫೋಟಕ (ಐಇಡಿ) ಪತ್ತೆಯಾಗಿದೆ. 2019ರ ಪುಲ್ವಾಮಾ ದಾಳಿಯ ಎರಡನೇ ವಾರ್ಷಿಕೋತ್ಸವದಂದೇ ಈ ಸ್ಫೋಟ ನಡೆಸಲು ಸಂಚು ನಡೆಸಲಾಗುತ್ತಿತ್ತು ಎನ್ನಲಾಗಿದೆ.

ಅಧಿಕಾರಿಗಳ ಸಮಯಪ್ರಜ್ಞೆಯಿಂದ ದೊಡ್ಡ ದುರಂತ ತಪ್ಪಿದಂತಾಗಿದೆ. ಸಾಂಬಾ ಜಿಲ್ಲೆಯ ಜಮ್ಮು ಮತ್ತು ಬರಿ ಬ್ರಾಹ್ಮಣ ಪ್ರದೇಶದಲ್ಲಿ ಕುಂಜ್ವಾನಿಯಿಂದ ಇಬ್ಬರು ಭಯೋತ್ಪಾದಕರನ್ನು ಬಂಧಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ನಿರ್ದಿಷ್ಟ ಮಾಹಿತಿಯ ಮೇರೆಗೆ ಐಇಡಿ ಪತ್ತೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷ ದಕ್ಷಿಣ ಕಾಶ್ಮೀರದಲ್ಲಿ ಮೂವರು ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರ ಹತ್ಯೆಗೆ ಸಂಬಂಧಿಸಿದಂತೆ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್)ಗೆ ಸಂಬಂಧ ಹೊಂದಿರುವ ಟಾಪ್​ಮೋಸ್ಟ್​ ವಾಂಟೆಡ್ ಭಯೋತ್ಪಾದಕ ಜಹೂರ್ ಅಹ್ಮದ್ ರಾಥರ್ರ್​ನನ್ನು ಸಾಂಬಾದ ಬರಿ ಬ್ರಾಹ್ಮಣ ಪ್ರದೇಶದಲ್ಲಿ ಶನಿವಾರ ಬಂಧಿಸಲಾಯಿತು.

ಇದಕ್ಕೂ ಮುನ್ನ ಫೆಬ್ರವರಿ 6ರಂದು ಜಮ್ಮುವಿನ ಕುಂಜ್ವಾನಿ ಪ್ರದೇಶದಿಂದ ಲಷ್ಕರ್-ಎ-ಮುಸ್ತಫಾ (ಲೆಮ್)ನ ಹಿದಾಯತುಲ್ಲಾ ಮಲಿಕ್ ಅಲಿಯಾಸ್​ ಹಸ್ನೈನ್​ನನ್ನು ಬಂಧಿಸಲಾಗಿತ್ತು.

ಎರಡು ವರ್ಷಗಳ ಹಿಂದೆ ಈ ದಿನದಂದೇ ಪಾಕಿಸ್ತಾನ ಪ್ರೇರಿತ ಜೈಶ್-ಎ-ಮೊಹಮ್ಮದ್ ಪುಲ್ವಾಮಾದಲ್ಲಿ ಸೇನಾ ವಾಹನಗಳ ಮೇಲೆ ಭೀಕರ ದಾಳಿ ನಡೆಸಿತ್ತು. ಇದರ ಪರಿಣಾಮವಾಗಿ 40 ಜವಾನರು ಹುತಾತ್ಮರಾಗಿದ್ದರು.

ABOUT THE AUTHOR

...view details