ಅಮೃತಸರ (ಪಂಜಾಬ್): ಜಿಲ್ಲೆಯ ಗುರುನಾನಕ್ ದೇವ್ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದಲ್ಲಿ ಪ್ರ್ಯಾಕ್ಟಿಕಲ್ ಮಾಡುತ್ತಿರುವ ವೇಳೆ ಸ್ಫೋಟ ಸಂಭವಿಸಿದೆ. ಇದರಲ್ಲಿ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಒಂದು ವಿದ್ಯಾರ್ಥಿ ಸ್ಥಿತಿ ಚಿಂತಾಜನಕವಾಗಿದೆ. ಗಾಯಗೊಂಡ ವಿದ್ಯಾರ್ಥಿಯನ್ನು ತಕ್ಷಣ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿವಿ ವಿಭಾಗದಿಂದ ದೊರೆತ ಮಾಹಿತಿ ಪ್ರಕಾರ ಮಧ್ಯಾಹ್ನ ವಿದ್ಯಾರ್ಥಿಗಳು ರಸಾಯನಶಾಸ್ತ್ರ ವಿಭಾಗದ ಲ್ಯಾಬ್‌ನಲ್ಲಿ ಕೆಮಿಕಲ್ ಪ್ರಾಕ್ಟಿಕಲ್ಸ್ ಮಾಡುತ್ತಿದ್ದರು. ವಿದ್ಯಾರ್ಥಿಗಳು ತ್ಯಾಜ್ಯ ವಸ್ತುಗಳಿಂದ ರೆಫ್ಯೂಜ್ ಡ್ರೈವ್ ಫ್ಯೂಯಲ್ ಅಂದರೆ ಇಂಧನವನ್ನು ಸಿದ್ಧಪಡಿಸುವ ಅಭ್ಯಾಸ ಮಾಡುತ್ತಿದ್ದರು. ಅಷ್ಟರಲ್ಲಿ ತಪ್ಪಾದ ರಾಸಾಯನಿಕ ಕ್ರಿಯೆ ನಡೆದು ಜೋರಾದ ಸ್ಫೋಟ ಸಂಭವಿಸಿದೆ. ಪ್ರಾಕ್ಟಿಕಲ್ ಮಾಡುತ್ತಿದ್ದ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಲ್ಯಾಬ್‌ನಲ್ಲಿ ನಿಂತಿದ್ದ ಹಲವು ವಿದ್ಯಾರ್ಥಿಗಳಿಗೂ ಏಟು ಬಿದ್ದಿದೆ.